ಚಂದ್ರಗ್ರಹಣ ಶಾಂತಿ ಹೋಮ
ಮೈಸೂರು

ಚಂದ್ರಗ್ರಹಣ ಶಾಂತಿ ಹೋಮ

July 17, 2019

ಮೈಸೂರು,ಜು.16(ವೈಡಿಎಸ್)-ಚಂದ್ರಗ್ರಹಣ ಮಂಗಳವಾರ ಮಧ್ಯರಾತ್ರಿ ಸಂಭವಿಸುವುದರಿಂದ ದಿವಾನ್ಸ್ ರಸ್ತೆಯ ಅಮೃತೇಶ್ವರ ದೇವಸ್ಥಾನದಲ್ಲಿ ಗ್ರಹಣ ಶಾಂತಿ ಏರ್ಪಡಿಸಿದ್ದು, ಮಂಗಳವಾರ ಸಂಜೆ ನೂರಾರು ಮಂದಿ ದೇವಸ್ಥಾನಕ್ಕೆ ಆಗಮಿಸಿ ಗ್ರಹಣಶಾಂತಿ ಮಾಡಿಸಿದರು.

ಮಂಗಳವಾರ ಮಧ್ಯರಾತ್ರಿ 1.30ರಿಂದ ಬೆಳಗಿನ ಜಾವ 4.30ರವರೆಗೆ ಚಂದ್ರ ಗ್ರಹಣವಿದ್ದು, ಈ ಭಾರಿ ಏಕಗ್ರಸ್ತ ಚಂದ್ರ ಗ್ರಹಣವು ಧನು ಮತ್ತು ಮಕರ ರಾಶಿ ಯಲ್ಲಿ ಆಗುವುದರಿಂದ ಧರ್ಮಶಾಸ್ತ್ರದ ಪ್ರಕಾರ 4 ರಾಶಿಗಳಿಗೆ ವಿಂಗಡಣೆ ಮಾಡ ಬೇಕು. ಆದರೆ, 2 ರಾಶಿಯಲ್ಲಿ ಸಂಭವಿಸು ವುದರಿಂದ ಎಲ್ಲಾ ರಾಶಿಯವರು ಗ್ರಹಣ ಶಾಂತಿ ಮಾಡಿಸಬೇಕಿದೆ ಎಂದು ಖ್ಯಾತ ಜಾತಕ ವಿಮರ್ಶಕ ಮೈ.ಕುಮಾರ್ ತಿಳಿಸಿದರು.

ಈ ಹಿನ್ನೆಲೆ ಯಲ್ಲಿ ಮಂಗಳವಾರ ಸಂಜೆ ನೂರಾರು ಮಂದಿ ದೇವಸ್ಥಾನಕ್ಕೆ ಅಗಮಿಸಿ ಕುಟುಂ ಬದ ಸದಸ್ಯರ ಹೆಸರಿನಲ್ಲಿ ಗ್ರಹಣಶಾಂತಿ ಮಾಡಿಸಿದರು.

ನಾಳೆ(ಜು.17) ದೇವಸ್ಥಾನದಲ್ಲಿ ಬೆಳಿಗ್ಗೆ 9 ಗಂಟೆಗೆ ಕೇತುಗ್ರಸ್ತ ಚಂದ್ರಗ್ರಹಣ ಹೋಮ ನಡೆಯಲಿದೆ. 9.30ಕ್ಕೆ ಚಂದ್ರಗ್ರಹಣ ಶಾಂತಿ ಮಾಡುತ್ತಿದ್ದು, ನಂತರ ಪ್ರಸಾದ ವಿನಿಯೋಗ ನಡೆಯಲಿದೆ. ಸಂಕಲ್ಪ ಮಾಡುವವರು ಹುರುಳಿ, ಅಕ್ಕಿ, ಎಳ್ಳೆಣ್ಣೆ, ನಂದಿನಿ ತುಪ್ಪ, ಬೆಳ್ಳಿನಾಗ, ತಾಮ್ರದ ಬಟ್ಟಲು ದಾನ ಮಾಡಬಹುದಾಗಿದೆ. ಗ್ರಹಣದ ವೇಳೆ ಪೂಜೆ-ಪುನಸ್ಕಾರಗಳು ಇರುವು ದಿಲ್ಲ ಎಂದರು.

Translate »