ಯೋಗ ದಿನಾಚರಣೆ ಧಾರ್ಮಿಕ ಮುಖಂಡರ ಒಗ್ಗೂಡಿಸಿದೆ
ಮೈಸೂರು

ಯೋಗ ದಿನಾಚರಣೆ ಧಾರ್ಮಿಕ ಮುಖಂಡರ ಒಗ್ಗೂಡಿಸಿದೆ

July 17, 2019

ಮೈಸೂರು, ಜು.16(ಎಂಕೆ)- ಅಂತರ ರಾಷ್ಟ್ರೀಯ ಯೋಗ ದಿನಾಚರಣೆಯು ಎಲ್ಲಾ ಧಾರ್ಮಿಕ ಮುಖಂಡರ ಮನಸ್ಸು ಗಳನ್ನು ಒಂದಾಗಿಸಿದೆ ಎಂದು ಜಿಎಸ್‍ಎಸ್ ಯೋಗ ಫೌಂಡೇಷನ್ ಸಂಸ್ಥಾಪಕ ಶ್ರೀಹರಿ ಹೇಳಿದರು.

ಮೈಸೂರಿನ ರಾಮಾನುಜ ರಸ್ತೆಯಲ್ಲಿ ರುವ ನಮೋ ಯೋಗ ಭವನದಲ್ಲಿ ಗುರು ಪೂರ್ಣಿಮ ಅಂಗವಾಗಿ ಆಯೋಜಿಸಿದ್ದ ‘ಮೈಸೂರು ಯೋಗ ಪರಂಪರೆ ಛಾಯಾ ಚಿತ್ರ ಪ್ರದರ್ಶನ’ ಕಾರ್ಯಕ್ರಮದಲ್ಲಿ ಮಾತ ನಾಡಿದ ಅವರು, ಯೋಗವು ಎಲ್ಲರೂ ಒಂದೇ ಎಂಬ ಭಾವನೆಯನ್ನು ಮೂಡಿ ಸುತ್ತದೆ ಎಂದರು.

ಪ್ರಾಣಯಾಮ ಮಾಡುವಾಗ ಉಸಿ ರಾಟಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡ ಲಾಗುತ್ತದೆ. ಇಂದು ನೀರನ್ನು ಹಣ ಕೊಟ್ಟು ಪಡೆಯುವಂತೆ, ಗಾಳಿಯನ್ನು ಕೊಂಡುಕೊಳ್ಳುವ ಪರಿಸ್ಥಿತಿ ಎದುರಾಗ ಬಹುದು. ನೀರಿಗೆ ದಿನಕ್ಕೆ ನೂರು ಅಥವಾ ಇನ್ನೂರು ರೂ. ಖರ್ಚಾದರೆ, ಉಸಿರಾಟಕ್ಕೆ ಬಳಸುವ ಆಮ್ಲಜನಕಕ್ಕೆ ಒಂದು ದಿನಕ್ಕೆ ಅಂದಾಜು 3 ಲಕ್ಷ ರೂ.ಆಗುತ್ತದೆ. ಆದ್ದ ರಿಂದ ಗಿಡ ನೆಡುವವರನ್ನು ಗುರುಗಳು ಎಂದೇ ಭಾವಿಸಬೇಕು ಎಂದು ತಿಳಿಸಿದರು.

ಗುರು ಎಂದರೇ ತಂದೆ, ತಾಯಿಗ ಳಿಂದ ಪ್ರಾರಂಭವಾಗಿ ಪ್ರತಿಯೊಂದು ಹಂತದಲ್ಲಿ ಸರಿಯಾದ ಮಾರ್ಗವನ್ನು ತೊರುವವರು ಗುರುಗಳೇ. ಆದರೆ, ಇಂದಿನ ವಿದ್ಯಾರ್ಥಿಗಳಲ್ಲಿ ಗುರುವಿನ ಬಗ್ಗೆ ಇರುವ ಭಾವನೆ ಬದಲಾಗುತ್ತಿದೆ. ಸಂಬಳ ಕ್ಕಾಗಿ ಕೆಲಸ ಮಾಡುವವರು ಎಂದಷ್ಟೇ ತಿಳಿದಿದ್ದಾರೆ ಎಂದು ಹೇಳಿದರು.

ಗುರುಪೂರ್ಣಿಮಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ ಮಾತನಾಡಿ, ರಾಜ-ಮಹಾರಾಜರ ಕಾಲದಲ್ಲಿಯೇ ಮೈಸೂರು ಯೋಗ ನಗರಿಯಾಗಿತ್ತು. ದಿನಕಳೆದಂತೆ ಕಡಿಮೆಯಾಗಿದ್ದ ಯೋಗ ಅಭ್ಯಾಸಕ್ಕೆ ಮತ್ತೆ ಚೈತನ್ಯ ಬಂದಿದೆ. ಇಂದು ಮೈಸೂರು ಯೋಗ ಕಾಶಿ ಯಾಗಿದೆ ಎಂದು ಅಭಿಪ್ರಾಯಿಸಿದರು.

ಗುರು ಪರಂಪರೆಯನ್ನು ನೆನೆಯಬೇಕು. ಎಲ್ಲಾ ಜ್ಞಾನದಲ್ಲಿಯೂ ಗುರುಗಳು ಇರು ತ್ತಾರೆ. ಯೋಗ ಪ್ರಾಚೀನ ಕಾಲದಿಂದಲೂ ಇದ್ದು, ತನ್ನದೆ ಆದ ಕ್ರಮಬದ್ಧತೆಯನ್ನು ಹೊಂದಿದೆ. ಪ್ರಸ್ತುತ ಯೋಗ ಶಿಕ್ಷಣ ಎಲ್ಲೆಡೆ ಹಬ್ಬಿದ್ದು, ಪಠ್ಯಕ್ರಮದಲ್ಲಿಯೂ ಅಳವಡಿಸಿರುವುದು ಸಂತೋಷದ ವಿಷಯ. ಅದೇ ರೀತಿ ಕಾಲೇಜುಗಳ ಲ್ಲಿಯೂ ಯೋಗವನ್ನು ಕಡ್ಡಾಯಗೊಳಿ ಸಬೇಕು ಎಂದರು.

ಯೋಗ ವಿಜ್ಞಾನವೂ ಆಗಿದೆ. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿ ಯಾಗಿದೆ. ಚಿಕ್ಕ ವಯಸ್ಸಿನಲ್ಲಿಯೇ ಮಕ್ಕ ಳಲ್ಲಿ ಯೋಗದ ಆಸಕ್ತಿಯನ್ನು ಬೆಳೆಸುವು ದರಿಂದ ಉತ್ತಮ ನಾಗರಿಕರಾಗಿ ಬೆಳೆಯು ತ್ತಾರೆ. ಜತೆಗೆ ಸ್ಮರಣಾ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದರು.

ಇದಕ್ಕೂ ಮುನ್ನಾ ‘ಮೈಸೂರು ಯೋಗ ಪರಂಪರೆಯ ಛಾಯಾಚಿತ್ರ ಪ್ರದರ್ಶನ’ ವನ್ನು ನಗರಪಾಲಿಕೆ ಸದಸ್ಯ ಬಿ.ವಿ. ಮಂಜುನಾಥ್ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಯೋಗ ತರಬೇತು ದಾರ ಯೋಗ ಪ್ರಕಾಶ್, ಹಿರಿಯ ಯೋಗ ಗುರು ವೆಂಕಟೇಶಯ್ಯ, ಸುಯೋಗ್ ಆಸ್ಪತ್ರೆ ಮುಖ್ಯಸ್ಥ ಡಾ.ಎಸ್.ಪಿ.ಯೋಗಣ್ಣ, ಮೈಸೂರು ಯೋಗ ಅಸೋಸಿಯೇಷನ್ ಅಧ್ಯಕ್ಷ ರಮೇಶ್, ಎನ್.ಮಹದೇವ್, ಎಂ.ಶ್ರೀನಿವಾಸ್, ಪಶುಪತಿ, ವಿಷ್ಣುಸೇನಾ ಮತ್ತಿತರರು ಉಪಸ್ಥಿತರಿದ್ದರು.

Translate »