ಬಿ.ಸರೋಜಾದೇವಿ, ಡಾ.ಸುಧಾಮೂರ್ತಿ ಸೇರಿದಂತೆ 9 ಗಣ್ಯರಿಗೆ ಜಯಚಾಮರಾಜ ಒಡೆಯರ್ ಜನ್ಮಶತಾಬ್ಧಿ ಪ್ರಶಸ್ತಿ ಪ್ರದಾನ
ಮೈಸೂರು

ಬಿ.ಸರೋಜಾದೇವಿ, ಡಾ.ಸುಧಾಮೂರ್ತಿ ಸೇರಿದಂತೆ 9 ಗಣ್ಯರಿಗೆ ಜಯಚಾಮರಾಜ ಒಡೆಯರ್ ಜನ್ಮಶತಾಬ್ಧಿ ಪ್ರಶಸ್ತಿ ಪ್ರದಾನ

July 17, 2019

ಮೈಸೂರು,ಜು.16-ಮೈಸೂರಿನ ಕೊನೆಯ ಮಹಾರಾಜ ರಾದ ಶ್ರೀ ಜಯಚಾಮರಾಜ ಒಡೆಯರ್ ಅವರ ಜನ್ಮಶ ತಾಬ್ಧಿಯ ವರ್ಷಪೂರ್ತಿ ಕಾರ್ಯಕ್ರಮವನ್ನು ರಾಜ್ಯಪಾಲ ವಜೂಬಾಯಿ ರೂಢಾ ಬಾಯಿ ವಾಲಾ ಅವರು ಮೈಸೂರು ಅರಮನೆಯ ದರ್ಬಾರ್ ಹಾಲ್ ನಲ್ಲಿ ಜು.18ರ ಬೆಳಿಗ್ಗೆ 11.15ಕ್ಕೆ ಉದ್ಘಾಟಿಸುವರು.

ಪ್ರಮೋದಾದೇವಿ ಒಡೆಯರ್ ಮತ್ತು ರಾಜ ವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ (ಎಸ್‍ಡಿ ಎನ್‍ಆರ್) ಒಡೆಯರ್ ಫೌಂಡೇಷನ್ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ.

ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ ಅವರು ದಿಕ್ಸೂಚಿ ಭಾಷಣ ಮಾಡುವರು. ಇದೇ ವೇಳೆ ಆಕಾಶವಾಣಿಯಲ್ಲಿ ಬಿತ್ತರಿಸಿರುವ ಶ್ರೀ ಜಯಚಾಮರಾಜ ಒಡೆಯರ್ ಅವರ 94 ಸಂಗೀತ ಸಂಯೋಜನೆಗಳ ಸಿಡಿಯನ್ನು ರಾಜವಂಶಸ್ಥರಾದ ಶ್ರೀಮತಿ ಪ್ರಮೋದಾದೇವಿ ಒಡೆ ಯರ್ ಅವರಿಗೆ ಹಸ್ತಾಂತರಿಸಲಾಗುವುದು.

ಆರ್ಟ್ ಗ್ಯಾಲರಿ ಉದ್ಘಾಟನೆ: ಕಾರ್ಯಕ್ರಮ ಉದ್ಘಾ ಟನೆಗೂ ಮೊದಲು ಜಗನ್ಮೋಹನ ಅರಮನೆಯಲ್ಲಿ ಬೆಳಿಗ್ಗೆ 10.30 ಗಂಟೆಗೆ ರಾಜ್ಯಪಾಲ ವಜೂಬಾಯಿ ವಾಲಾ ಅವರು, ನವೀಕರಿಸಲಾದ ಶ್ರೀ ಜಯಚಾಮರಾಜೇಂದ್ರ ಆರ್ಟ್ ಗ್ಯಾಲರಿಯನ್ನು ಔಪಚಾರಿಕವಾಗಿ ಉದ್ಘಾಟಿಸುವರು. ಆರ್ಟ್ ಗ್ಯಾಲರಿಯು ಜು. 18 ರಿಂದ ಸಾರ್ವಜ ನಿಕರ ದರ್ಶನಕ್ಕೆ ಲಭ್ಯವಿದ್ದು, ಗ್ಯಾಲರಿಗೆ ಉತ್ತರದ ಕಡೆಯಿಂದ ಪ್ರವೇಶ ಕಲ್ಪಿಸಲಾಗಿದೆ.

ಶ್ರೀ ಜಯಚಾಮರಾಜ ಒಡೆಯರ್ ಅವರು ಆಸಕ್ತಿ ಹೊಂದಿದ್ದ ತತ್ವಶಾಸ್ತ್ರ, ಸಂಸ್ಕøತ, ಕನ್ನಡ, ವನ್ಯಜೀವಿ, ಕೃಷಿ, ಕರ್ನಾಟಕ ಸಂಗೀತ, ಕ್ರೀಡೆ, ಸಿನಿಮಾ ಕ್ಷೇತ್ರ ಗಳಲ್ಲಿ ಸಮಾಜಕ್ಕೆ ಅತ್ಯುತ್ತಮ ಕೊಡುಗೆಗಳನ್ನು ನೀಡಿ ದ್ದಾರೆ. ಈ ಸಂಬಂಧ ವಿವಿಧ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿದ 9 ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಪ್ರಶಸ್ತಿ ಭಾಜನರು:ಪ್ರೊ.ಎಲ್.ಶಿವರುದ್ರಪ್ಪ (ತತ್ವಶಾಸ್ತ್ರ), ಬಿ.ಎನ್.ಎಸ್. ಅಯ್ಯಂಗಾರ್ (ಯೋಗ), ಪ್ರೊ. ಎಂ.ಎ. ಲಕ್ಷ್ಮಿ ತಾತಾಚಾರ್ ಶಾಸ್ತ್ರಿ (ಸಂಸ್ಕøತ), ಡಾ.ಟಿ.ವಿ.ವೆಂಕಟಾಚಲ ಶಾಸ್ತ್ರಿ (ಕನ್ನಡ), ಬಿ. ಸರೋಜಾದೇವಿ (ಸಿನಿಮಾ), ಸುಧಾಮೂರ್ತಿ (ಸಮಾಜಕ್ಕೆ ಅತ್ಯುತ್ತಮ ಕೊಡುಗೆ), ಸೈಯದ್ ಘನಿ ಖಾನ್ (ಕೃಷಿ), ಅಜಯ್ ದೇಸಾಯಿ (ವನ್ಯಜೀವಿ) ಮತ್ತು ಪ್ರಣವಿ ಅರಸ್ (ಭರವಸೆಯ ಕ್ರೀಡಾಪಟು : ಗಾಲ್ಫ್).

ಶ್ರೀ ಜಯಚಾಮರಾಜ ಒಡೆಯರ್ ಅವರು ಸಂಗೀತ ದಲ್ಲೂ ಅತೀವ ಆಸಕ್ತಿ, ಉತ್ಸಾಹವನ್ನು ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಸಂಗೀತ ಕ್ಷೇತ್ರಕ್ಕೆ ನೀಡುವ ಪ್ರಶಸ್ತಿ ಯನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು.

ಉದ್ಘಾಟನಾ ದಿನದ ಕಾರ್ಯಕ್ರಮದಲ್ಲಿ ಸಂಜೆ 6.30ಕ್ಕೆ ಕರ್ನಾಟಕ ಸಂಗೀತ ವಿದುಷಿ ಟಿ.ಎಸ್.ಸತ್ಯವತಿ ಅವರು  ‘ಶ್ರೀ ಜಯಚಾಮರಾಜ ಒಡೆಯರ್ ಅವರ ಸಂಯೋ ಜನೆಗಳು’ ಕುರಿತು ಉಪನ್ಯಾಸ ನೀಡಲಿದ್ದಾರೆ. ಬಳಿಕ ಮುಂಬೈನ ರಾಷ್ಟ್ರೀಯ ಪ್ರದರ್ಶಕ ಕಲೆಗಳ ಕೇಂದ್ರ (ಎನ್‍ಸಿಪಿಎ)ದ ಅಧ್ಯಕ್ಷ ಮತ್ತು ಸಿಂಪೋನಿ ಆರ್ಕೆಸ್ಟ್ರಾ ಆಫ್ ಇಂಡಿಯಾ (ಎಸ್‍ಒಐ) ಸಹ ಸಂಸ್ಥಾಪಕರಾದ ಕುಶ್ರೂ ಎನ್. ಸುಂಟುಕ್ ಅವರು `ಪಾಶ್ಚಾತ್ಯ ಶಾಸ್ತ್ರೀಯ ಸಂಗೀತಕ್ಕೆ ಶ್ರೀ ಜಯಚಾಮ ರಾಜ ಒಡೆಯರ್ ಅವರ ಕೊಡುಗೆ’ ಕುರಿತು ಉಪನ್ಯಾಸ ನೀಡಲಿದ್ದಾರೆ.

ಅರಮನೆಯ ದರ್ಬಾರ್ ಹಾಲ್‍ನಲ್ಲಿ ನಡೆಯುವ ಉದ್ಘಾಟನಾ ಸಮಾರಂಭವು ಸಿಂಪೋನಿ ಆರ್ಕೆಸ್ಟ್ರಾ ತಂಡದವರ ಪ್ರದರ್ಶನದೊಂದಿಗೆ ಸಂಪನ್ನಗೊಳ್ಳಲಿದೆ.

ದರ್ಬಾರ್ ಹಾಲ್‍ನಲ್ಲಿ ಬೆಳಿಗ್ಗೆ ನಡೆಯುವ ಶ್ರೀ ಜಯಚಾಮರಾಜ ಒಡೆಯರ್ ಅವರ ಜನ್ಮಶತಾಬ್ಧಿ ಕಾರ್ಯಕ್ರಮ ಮತ್ತು ಅದೇ ದಿನ ಸಂಜೆ ನಡೆಯುವ ಸಿಂಪೋನಿ ಆರ್ಕೆಸ್ಟ್ರಾಕ್ಕೆ ಭಾಗವಹಿಸುವವರು ತಪ್ಪದೇ ಆಹ್ವಾನ ಪತ್ರಿಕೆ ತರುವುದು ಕಡ್ಡಾಯವಾಗಿರುತ್ತದೆ.

Translate »