ಸರ್ಕಾರಿ ಸೌಲಭ್ಯ ಫಲಾನುಭವಿಗೆ ತಲುಪಿಸದಿದ್ದರೆ ಕಠಿಣ ಕ್ರಮ
ಹಾಸನ

ಸರ್ಕಾರಿ ಸೌಲಭ್ಯ ಫಲಾನುಭವಿಗೆ ತಲುಪಿಸದಿದ್ದರೆ ಕಠಿಣ ಕ್ರಮ

July 17, 2019

ಸಹಕಾರ ಸಂಘಗಳ ಅಧಿಕಾರಿ-ಸಿಬ್ಬಂದಿಗೆ ಒಕ್ಕೂಟದ ಎಂಡಿ ಅರುಣ್‍ಕುಮಾರ್ ಎಚ್ಚರಿಕೆ
ಹಾಸನ,ಜು.16- ಸಹಕಾರ ಸಂಘಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ತಪ್ಪದೇ ಸೇವಾ ಮನೋಭಾವ ರೂಢಿಸಿಕೊಳ್ಳ ಬೇಕು. ಸರ್ಕಾರದ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಜವಾ ಬ್ದಾರಿಯನ್ನು ಅಧಿಕಾರಿಗಳು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಇದರಲ್ಲಿ ಲೋಪವಾ ದರೆ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗು ವುದು ಎಂದು ರಾಜ್ಯ ಸಹಕಾರ ಮಹಾ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಅರುಣ್ ಕುಮಾರ್ ಎಚ್ಚರಿಕೆ ನೀಡಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳಿ ನಿಯಮಿತ ಹಾಗೂ ಹಾಸನ ಜಿಲ್ಲಾ ಸಹಕಾರ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಮೈಸೂರು ವಿಭಾಗದ ಎಸ್ಸಿ/ ಎಸ್‍ಟಿ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ನಿರ್ದೇಶಕರಿಗೆ ರಾಜ್ಯಮಟ್ಟದ (ಹೈಟೆಕ್ ಮಾದರಿ) ತರಬೇತಿ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮದ ಉದ್ಘಾಟಿಸಿದ ರಾಜ್ಯ ಸಹಕಾರ ಮಹಾ ಮಂಡಳಿ ಅಧ್ಯಕ್ಷ ಎನ್. ಗಂಗಣ್ಣ ಅವರು, ಸಹಕಾರ ಬ್ಯಾಂಕ್‍ಗಳಲ್ಲಿ ಕಾರ್ಯ ನಿರ್ವಹಿಸುವವರು ಡಿಪ್ಲೊಮಾ ಇನ್ ಕೋ-ಅಪರೇಟಿವ್ ತರಬೇತಿ ಕಡ್ಡಾಯವಾಗಿ ಪಡೆದಿರಬೇಕು ಎಂದರು.

ಬಡ್ಡಿಯ ಹೊರೆ, ಸಾಲದ ಶೋಷಣೆ ತಪ್ಪಿಸುವುದೇ ಸಹಕಾರಿ ಸಂಘಗಳ ಮುಖ್ಯ ಉದ್ದೇಶವಾಗಿದೆ. 2.50 ಕೋಟಿ ಜನರು ಇದರ ಸದುಪಯೋಗ ಪಡೆದ ಫಲಾನು ಭವಿಗಳಾಗಿದ್ದಾರೆ. ಸಹಕಾರ ಸಂಘಗಳು ಗ್ರಾಮೀಣ ಭಾಗದಲ್ಲಿ ನಿರುದ್ಯೋಗಿಗಳಿಗೆ, ಮಹಿಳೆಯರಿಗೆ ಆರ್ಥಿಕ ನೆರವು ನೀಡುತ್ತಾ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿವೆ. ಸಹಕಾರ ಸಂಘಗಳಿಂದ ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸಗಳು ಶೀಘ್ರವಾಗಿ ಜನರಿಗೆ ತಲುಪಬೇಕು. ಎಸ್‍ಸಿ/ಎಸ್‍ಟಿ ಷೇರುದಾರ ರಿಗೆ ಹೆಚ್ಚಿನ ಮಾರ್ಗದರ್ಶನ ನೀಡ ಬೇಕಿದೆ ಎಂದರು.

ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಆರ್.ಟಿ.ದ್ಯಾವೇಗೌಡ ಮಾತನಾಡಿ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗಾಗಿಯೇ ಹಲ ವಾರು ಯೋಜನೆಗಳಿವೆ. ಆದರೆ, ಫಲಾನು ಭವಿಗಳ ಸಂಖ್ಯೆ ಬಹಳ ಕಡಿಮೆ ಇದೆ. ಹಾಗಾಗಿ ಯೋಜನೆಗಳ ಬಗ್ಗೆ ಅರಿವು ಮೂಡಿಸ ಬೇಕಿದೆ. ಕಾರ್ಮಿಕರು, ನಿರುದ್ಯೋಗಿಗಳು, ಸಣ್ಣ-ಅತಿ ಸಣ್ಣ ರೈತರಿಗೆ ಸೌಲಭ್ಯಗಳು ಕಾಲ ಕಾಲಕ್ಕೆ ದೊರಕಬೇಕು. ಆ ನಿಟ್ಟಿನಲ್ಲಿಯೂ ಸಹಕಾರಿ ಕ್ಷೇತ್ರದ ಅಧಿಕಾರಿಗಳು ಮತ್ತು ಸಿಬ್ಬಂದಿ ಬದ್ಧತೆಯಿಂದ ಕೆಲಸ ಮಾಡಬೇಕು ಎಂದರು. ಜಿಲ್ಲಾ ಸಹಕಾರ ಒಕ್ಕೂಟ ಅಧ್ಯಕ್ಷ ಶೇಷಾದ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ದ್ದರು. ಸಹಕಾರ ಸಂಘಗಳ ಅಪರ ನಿಬಂಧಕ ದಿವಾಕರ ಅವರು, ಸಣ್ಣ-ಅತಿಸಣ್ಣ ರೈತ ರಿಗೆ, ಮಹಿಳೆಯರು, ನಿರುದ್ಯೋಗಿಗಳಿಗೆ ಸಹಕಾರ ಸಂಘಗಳಿಂದ ಲಭ್ಯವಿರುವ ಸೌಲಭ್ಯಗಳು, ಅವನ್ನು ಪಡೆದುಕೊಳ್ಳುವ ಬಗೆ, ಬ್ಯಾಂಕ್‍ಗಳಿಂದ ಸಾಲ ಪಡೆಯಲು ವಹಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿಸಿಕೊಟ್ಟರು. ರಾಜ್ಯ ಸಹಕಾರ ಮಹಾ ಮಂಡಳಿ (ಲ್ಯಾಂಪ್ಸ್) ಅಧ್ಯಕ್ಷ ಮುದ್ದಯ್ಯ, ಉಪ ನಿಬಂಧಕÀ ಜಿ.ಆರ್.ವಿಜಯ್ ಕುಮಾರ್, ಕಾರ್ಯಕ್ರಮ ಸಂಚಾಲಕ ಯೋಗೇಂದ್ರ ನಾಯಕ್, ಸಲಹೆಗಾರ ರುದ್ರಪ್ಪ, ಹಾಸನ, ಚಿಕ್ಕಮಗಳೂರು, ಮೈಸೂರು, ಮಂಡ್ಯ ಜಿಲ್ಲೆಗಳ ಸಹಕಾರ ಸಂಘಗಳ ನಿರ್ದೇಶಕರು, ಸಿಬ್ಬಂದಿ ಇದ್ದರು.

ಅಧ್ಯಕ್ಷ ಗಂಗಣ್ಣ ಹೇಳಿದ್ದು…
* ಸಹಕಾರ ಬ್ಯಾಂಕ್‍ಗಳಲ್ಲಿ ಕಾರ್ಯ ನಿರ್ವಹಿಸುವವರು ಡಿಪ್ಲೊಮಾ ಇನ್ ಕೋ-ಅಪರೇಟಿವ್ ತರಬೇತಿ ಕಡ್ಡಾಯ ವಾಗಿ ಪಡೆದಿರಬೇಕು.
* ಬಡ್ಡಿಯ ಹೊರೆ, ಸಾಲದ ಶೋಷಣೆ ತಪ್ಪಿಸುವುದೇ ಸಹಕಾರಿ ಸಂಘಗಳ ಮುಖ್ಯ ಉದ್ದೇಶ.
* ಸಹಕಾರ ಸಂಘಗಳು ಗ್ರಾಮೀಣ ಭಾಗದಲ್ಲಿ ನಿರುದ್ಯೋಗಿಗಳಿಗೆ, ಮಹಿಳೆಯ ರಿಗೆ ಆರ್ಥಿಕ ನೆರವು ನೀಡುತ್ತಾ ಆತ್ಮ ಸ್ಥೈರ್ಯ ತುಂಬುವ ಕೆಲಸ ಮಾಡುತ್ತಿವೆ.
* ಸಹಕಾರ ಸಂಘಗಳು ಎಸ್‍ಸಿ/ಎಸ್‍ಟಿ ಷೇರುದಾರರಿಗೆ ಹೆಚ್ಚಿನ ಮಾರ್ಗದರ್ಶನ ನೀಡಬೇಕು.

Translate »