ಹಾವುಗಳು ಹಾಲು ಕುಡಿಯಲ್ಲ, ಅವುಗಳು ದ್ವೇಷ ಕಾರುವುದಿಲ್ಲ…
ಮೈಸೂರು

ಹಾವುಗಳು ಹಾಲು ಕುಡಿಯಲ್ಲ, ಅವುಗಳು ದ್ವೇಷ ಕಾರುವುದಿಲ್ಲ…

July 17, 2019

ಮೈಸೂರು,ಜು.16(ಪಿಎಂ)- ಹಾವು ಗಳಿಗೆ ಧ್ವನಿ ಕೇಳುವ, ಶಬ್ದ ಗ್ರಹಿಸುವ ಶಕ್ತಿ ಇಲ್ಲ. ಹಾಲು ಕುಡಿದು ಜೀರ್ಣಿಸಿ ಕೊಳ್ಳುವ ಶಕ್ತಿಯೂ ಇರುವುದಿಲ್ಲ. ಹಾವುಗಳು ದ್ವೇಷಕಾರುತ್ತವೆ ಎಂಬುದೂ ಸುಳ್ಳು!

ಹೌದು, ಸರ್ಪಗಳ ಬಗ್ಗೆ ಹತ್ತು ಹಲವು ರೀತಿಯಲ್ಲಿ ತಪ್ಪು ಕಲ್ಪನೆ, ಮೂಢ ನಂಬಿಕೆ ಸಮಾಜದಲ್ಲಿ ನೆಲೆಯೂರಿದ್ದು, ಮಂಗಳ ವಾರ ಮೈಸೂರು ಮೃಗಾಲಯದಲ್ಲಿ `ವಿಶ್ವ ಹಾವುಗಳ ದಿನಾಚರಣೆ’ ಅಂಗವಾಗಿ ಹಮ್ಮಿಕೊಂಡಿದ್ದ ಹಾವುಗಳ ಮಾಹಿತಿ ಪ್ರದರ್ಶನದಲ್ಲಿ ವೈಜ್ಞಾನಿಕ ಅಂಶ ಸೇರಿ ದಂತೆ ಉರಗಗಳ ವೈವಿಧ್ಯಮಯ ನೋಟವೂ ಅನಾವರಣಗೊಂಡವು.

ಹಾವುಗಳೆಂದರೆ ಸಾಕು, ಬಹುತೇಕರಲ್ಲಿ ಅನವಶ್ಯಕ ಭಯ ಮೂಡುತ್ತದೆ. ಇದಕ್ಕೆ ಕಾರಣ ಹಾವುಗಳ ಕುರಿತು ಅವರಲ್ಲಿರುವ ಭ್ರಮೆಯಾಗಿದ್ದು, ಇಂತಹ ಮೌಢ್ಯತೆ ಯನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಜುಲೈ 16 ಅನ್ನು ವಿಶ್ವ ಹಾವುಗಳ ದಿನ ವಾಗಿ ಆಚರಿಸಲಾಗುತ್ತಿದೆ.

ಮೈಸೂರು ಮೃಗಾಲಯದ ಹಾವುಗಳ ಮನೆ ಬಳಿ ಮಾಹಿತಿ ಫಲಕಗಳನ್ನು ಪ್ರದರ್ಶಿಸಿ ಹಾವುಗಳ ಕುರಿತು ಇರುವ `ಸತ್ಯ ಮತ್ತು ಮಿಥ್ಯ’ದ ಬಗೆಗೆ ಮಾಹಿತಿ ನೀಡಲಾ ಯಿತು. ಹಾವುಗಳಿಗೆ ಧ್ವನಿ ಕೇಳುವ, ಶಬ್ದ ಗ್ರಹಿಸುವ ಶಕ್ತಿ ಇರುವುದಿಲ್ಲ. ಪುಂಗಿ ನಾದಕ್ಕೆ ಅವು ಓಡಿ ಬರುವುದಿಲ್ಲ. ಅಪಾಯವಾಗಬಹುದೆಂಬ ಆತಂಕದಿಂದ ರಕ್ಷಿಸಿಕೊಳ್ಳಲು ಪುಂಗಿ ಅಲುಗಾಟಕ್ಕೆ ತಕ್ಕಂತೆ ಹೆಡೆಯನ್ನು ಅಲುಗಾಡಿಸುತ್ತವೆ. ಅದೇ ರೀತಿ ಹಾವುಗಳು ಹಾಲು ಕುಡಿ ಯುವುದಿಲ್ಲ. ಹಾವುಗಳು ದ್ವೇಷ ಕಾರುತ್ತವೆ ಎಂಬುದೂ ಸುಳ್ಳು. ಅವುಗಳಿಗೆ ನೆನಪಿನ ಶಕ್ತಿಯೇ ಇರುವುದಿಲ್ಲ.

ಈ ಜಗತ್ತಿನಲ್ಲಿ ಒಟ್ಟು 3,458 ಪ್ರಭೇ ದದ ಹಾವುಗಳಿವೆ. ಅಚ್ಚರಿಯ ಸಂಗತಿ ಅಂದರೆ ಹಾವುಗಳಲ್ಲಿ ಶೇ.75ರಿಂದ 80 ರಷ್ಟು ಹಾವುಗಳು ವಿಷಕಾರಿಯಲ್ಲ. ಹಾವು ಗಳು ಮರುಭೂಮಿ, ಶೀತ ಪ್ರದೇಶ, ದಟ್ಟ ಕಾಡು, ಅರಣ್ಯ, ಸಮುದ್ರ ಸೇರಿದಂತೆ ಎಲ್ಲೆಡೆಯೂ ವಾಸಿಸುತ್ತವೆ. 2008ರಿಂದ ಈವರೆಗೆ ಸುಮಾರು 300ಕ್ಕೂ ಹೆಚ್ಚು ಹಾವುಗಳನ್ನು ಪತ್ತೆ ಮಾಡಲಾಗಿದೆ. ಹಾವುಗಳಿಗೆ ಸಹಸ್ರಮಾನಕ್ಕೂ ಹಿಂದಿನ ಇತಿಹಾಸವಿದ್ದು, 12 ಸಾವಿರ ವರ್ಷಗಳ ಹಿಂದೆಯೇ ಮೊದಲ ಹಾವು ಪತ್ತೆಯಾಗಿತ್ತು ಎಂಬಿತ್ಯಾದಿ ಮಾಹಿತಿಗಳನ್ನು ನೀಡಲಾಯಿತು.

ಭಾರತದಲ್ಲಿ 270ಕ್ಕೂ ಹೆಚ್ಚು ವಿವಿಧ ಜಾತಿಯ ಹಾವುಗಳಿವೆ. ಅವುಗಳಲ್ಲಿ 60ಕ್ಕೂ ಹೆಚ್ಚು ವಿಷಪೂರಿತ. ಕರ್ನಾಟಕ ದಲ್ಲಿ 130ಕ್ಕೂ ಹೆಚ್ಚು ಜಾತಿಯ ಹಾವು ಗಳಿವೆ. ಈ ಪೈಕಿ 40ಕ್ಕೂ ಹೆಚ್ಚು ವಿಷಕಾರಿ ಎಂಬುದು ಸೇರಿದಂತೆ ಸರ್ಪಗಳ ಸಮಗ್ರ ದರ್ಶನ ನೀಡಲಾಯಿತು.

ವಿನಾಕಾರಣ ದಾಳಿ ಮಾಡವು: ಹಾವು ಗಳು ಮನುಷ್ಯ ಸೇರಿದಂತೆ ಯಾವುದೇ ಜೀವ ಸಂಕುಲದ ಮೇಲೆ ವಿನಾಕಾರಣ ದಾಳಿ ಮಾಡುವುದಿಲ್ಲ ಎಂದು ಮೃಗಾ ಲಯದ ಶಿಕ್ಷಣ ಅಧಿಕಾರಿ ಎನ್.ಎಂ. ಗುರುಪ್ರಸಾದ್ ತಿಳಿಸಿದರು.

ಹಾವಿನ ದಿನಾಚರಣೆ ಹಿನ್ನೆಲೆಯಲ್ಲಿ ಮೃಗಾಲಯಕ್ಕೆ ಭೇಟಿ ನೀಡಿದ ಮಹಾ ರಾಜ ಪಿಯು ಕಾಲೇಜು ಹಾಗೂ ಶ್ರೀಕಾಂತ ಬಾಲಿಕಾ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಹಾವುಗಳ ಬಗ್ಗೆ ಮಾಹಿತಿ ನೀಡಿದ ಅವರು, ತನಗೆ ಅಪಾಯ ಎದುರಾಗುತ್ತದೆ ಎಂಬ ಆತಂಕ ದಲ್ಲಿ ಹಾವುಗಳು ದಾಳಿಗೆ ಮುಂದಾಗು ತ್ತವೆ. ಅವುಗಳು ಮಾನವನ ವಾಸಸ್ಥಳಕ್ಕೆ ಬರಲು ನಾವೇ ಕಾರಣ. ಪ್ರಕೃತಿ ವಿರುದ್ಧದ ಮಾನವ ಚಟುವಟಿಕೆಗಳು ಹಾವುಗಳು ಮಾನವನ ವಾಸಸ್ಥಳಕ್ಕೆ ಬರುವಂತೆ ಮಾಡಿದೆ. ಮಾನವನ ದಾಳಿಗೆ ಸಿಲುಕಿ ಅನೇಕ ಹಾವಿನ ಪ್ರಭೇದ ಅಳಿವಿನಂಚಿಗೆ ತಲುಪಿವೆ ಎಂದು ಎನ್.ಎಂ.ಗುರುಪ್ರಸಾದ್ ವಿಷಾದಿಸಿದರು.

ಮೃಗಾಲಯದಲ್ಲಿ 70ಕ್ಕೂ ಹೆಚ್ಚು ಹಾವು: ಮೃಗಾಲಯದಲ್ಲಿ 24 ವಿವಿಧ ಜಾತಿಯ 70ಕ್ಕೂ ಹೆಚ್ಚು ಹಾವುಗಳಿವೆ ಎಂದು ಹಾವು ಮನೆ ಪಾಲಕ ಚೆಲುವ ರಾಜ್ ಇದೇ ವೇಳೆ ಮಾಹಿತಿ ನೀಡಿದರು. ಸಂಜೆ 5.30ರವರೆಗೆ ಮಾಹಿತಿ ಪ್ರದರ್ಶನ ನಡೆಯಿತು. ಪರಿಸರವಾದಿ ಸೋಮ ಶೇಖರ್, ಹಾವು ಮನೆ ಪಾಲಕ ಸಲೀಮ್ ಮತ್ತಿತರರು ಹಾಜರಿದ್ದರು.

Translate »