ಬೆಂಗಳೂರು: ಸುಪ್ರೀಂಕೋರ್ಟ್ ಮಧ್ಯಂತರ ಆದೇಶ ಹೊರಬಿದ್ದ ಬಳಿಕವೂ ಸರಕಾರ ಉಳಿಸಿಕೊಳ್ಳುವ ಕಸರತ್ತನ್ನು ದೋಸ್ತಿ ಪಕ್ಷಗಳು ಮುಂದುವರಿಸಿವೆ. ದಿಢೀರ್ ಎಂಬಂತೆ ಮಹತ್ವದ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಅನಿವಾರ್ಯ ಎನಿಸಿದರೆ ನಾಯಕತ್ವ ಬದಲಾ ವಣೆ ಮಾಡಬಹುದು ಎಂಬ ಪ್ರಸ್ತಾವವನ್ನು ಮುಂದಿಟ್ಟಿದ್ದಾರೆ. ದೊಮ್ಮಲೂರು ಬಳಿ ಇರುವ ಸಚಿವ ಕೆ.ಜೆ.ಜಾರ್ಜ್ ಅವರ ನಿವಾಸ ದಲ್ಲಿ ಬುಧವಾರ ತಡರಾತ್ರಿಯವರೆಗೂ ನಡೆದ ದೋಸ್ತಿ ಪಕ್ಷಗಳ ನಾಯಕರ ಸಭೆಯಲ್ಲಿ ಕುಮಾರ ಸ್ವಾಮಿ ಅವರಿಂದ ಈ ಹೇಳಿಕೆ ಹೊರಬಿದ್ದಿದೆ. ಅವರ ಈ ಮಾತಿಗೆ ಸಮನ್ವಯ ಸಮಿತಿ…
ನಾವು ಸದನಕ್ಕೆ ಬರುವುದಿಲ್ಲ
July 18, 2019ಮುಂಬೈ; ಗುರುವಾರ ನಡೆಯುವ ವಿಧಾನಸಭೆ ಕಲಾಪದಲ್ಲಿ ನಾವು ಭಾಗವಹಿಸುವುದಿಲ್ಲ ಎಂದು ಅತೃಪ್ತ ಜೆಡಿಎಸ್ ಶಾಸಕ ಎಚ್. ವಿಶ್ವನಾಥ್ ಹೇಳಿದ್ದಾರೆ. ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಮಾಧ್ಯಮ ದವರ ಜತೆಗೆ ಮಾತನಾಡಿದ ಅವರು, ಇತರೆ ಯಾವ ಅತೃಪ್ತ ಶಾಸಕರು ಸಹ ಸದನದಲ್ಲಿ ಭಾಗವಹಿಸುವುದಿಲ್ಲ ಎಂದರು. ಸುಪ್ರೀಂ ಕೋರ್ಟ್ ತೀರ್ಪಿನಿಂದ ಸಂವಿಧಾನದ ಆಶಯ ಎತ್ತಿ ಹಿಡಿದಂತಾಗಿದೆ. ಇದು ಮಧ್ಯಂತರ ತೀರ್ಪು ಆಗಿರುವುದರಿಂದ ಪಕ್ಷಾಂತರ ನಿಷೇಧ ಕಾಯ್ದೆ ಬಗ್ಗೆ ಪುನರ್ ವ್ಯಾಖ್ಯಾನ ಆಗಬೇಕಿದೆ ಎಂದರು. ಇದರ ಬಗ್ಗೆ ವಿಸ್ತೃತ ಚರ್ಚೆ ನಡೆಯಬೇಕು ಎಂದು…
ವಿಶ್ವಾಸ ಮತ ಯಾಚನೆ: ಸದನದಲ್ಲಿ ಹಾಜರಿರುವುದು ಶಾಸಕರ ವಿವೇಚನೆಗೆ ಬಿಟ್ಟದ್ದು
July 18, 2019ಸುಪ್ರೀಂಕೋರ್ಟ್ ಮಧ್ಯಂತರ ತೀರ್ಪು ರಾಜೀನಾಮೆ ಅಂಗೀಕಾರ ವಿಚಾರ ಸ್ಪೀಕರ್‍ಗೆ ಸೇರಿದ್ದು ನವದೆಹಲಿ: ಅತೃಪ್ತ ಶಾಸಕರ ರಾಜೀನಾಮೆ ಕುರಿತು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯ್ ಅವರನ್ನೊಳಗೊಂಡ ಪೀಠ ಇಂದು ಮಧ್ಯಂತರ ತೀರ್ಪು ನೀಡಿದ್ದು, ಸಂವಿಧಾನವನ್ನು ಎಲ್ಲರೂ ಕಾಪಾಡಬೇಕು. ನಿರ್ದಿಷ್ಟ ಸಮಯದಲ್ಲಿ ವಿಧಾನಸಭಾಧ್ಯಕ್ಷರು ಶಾಸಕರ ರಾಜೀನಾಮೆ ಬಗ್ಗೆ ನಿರ್ಧಾರ ಮಾಡಬೇಕು ಎಂದಿದೆ. ಶಾಸಕರ ರಾಜೀನಾಮೆ ಕುರಿತು ನಿರ್ಧಾರ ಮಾಡುವುದು ವಿಧಾನಸಭಾಧ್ಯಕ್ಷರ ವಿವೇಚನೆಗೊಳಪಟ್ಟಿದ್ದು. ಆದ್ದರಿಂದ ಕೋರ್ಟ್ ಮಧ್ಯಸ್ಥಿಕೆ ವಹಿಸುವುದಿಲ್ಲ ಎಂದು ತೀರ್ಪಿನಲ್ಲಿ ತಿಳಿಸಿದ್ದು, ವಿಧಾನಸಭಾಧ್ಯಕ್ಷರು ನಿರ್ಧಿಷ್ಟ ಸಮಯದಲ್ಲಿ ರಾಜೀನಾಮೆ ಬಗ್ಗೆ…
ಸುಪ್ರೀಂಕೋರ್ಟ್ ನೀಡಿರುವ ಆದೇಶಕ್ಕೆ ಬದ್ಧ
July 18, 2019ಕೋಲಾರ: ‘ಅತೃಪ್ತ ಶಾಸಕರ ರಾಜೀನಾಮೆ ಅರ್ಜಿ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ನಮ್ರತೆ ಯಿಂದ ಪಾಲಿಸುತ್ತೇನೆ. ಸಂವಿಧಾನದ ಆಶಯ ಹಾಗೂ ಸುಪ್ರೀಂಕೋರ್ಟ್‍ನ ವಿಶ್ವಾಸಕ್ಕೆ ಬದ್ಧವಾಗಿ ನಡೆದುಕೊಳ್ಳುತ್ತೇನೆ ಎಂದು ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‍ಕುಮಾರ್ ತಿಳಿಸಿದರು. ಅತೃಪ್ತ ಶಾಸಕರ ರಾಜೀನಾಮೆ ಸಂಬಂಧ ಸುಪ್ರೀಂಕೋರ್ಟ್‍ನ ಆದೇಶದ ಬಗ್ಗೆ ಬುಧವಾರ ಸುದ್ದಿಗಾರರಿಗೆ ಪ್ರತಿಕ್ರಿಯಿ ಸಿದ ರಮೇಶ್‍ಕುಮಾರ್, ‘ಶಾಸಕರ ರಾಜೀನಾಮೆ ಅಂಗೀಕರಿಸುವ ಅಥವಾ ತಿರಸ್ಕರಿ ಸುವ ಸಂಬಂಧ ನ್ಯಾಯಾಲಯ ಕಾಲಮಿತಿ ನಿಗದಿಪಡಿಸಿಲ್ಲ. ಹೀಗಾಗಿ ನನ್ನ ಜವಾ ಬ್ದಾರಿ ಹೆಚ್ಚಿದೆ’ ಎಂದರು. ‘ಗುರುವಾರ ವಿಶ್ವಾಸಮತ ಯಾಚನೆಗೆ…
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡೀರಿ ಎಚ್ಚರ
July 18, 2019ಮೈಸೂರು,ಜು.17(ಆರ್‍ಕೆಬಿ)- ಧೂಮಪಾನ ಮಾಡದವರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಕೋಟ್ಪಾ ಕಾಯಿದೆ ಯಡಿ ಮೈಸೂರಿನ ಸಾರ್ವಜನಿಕ ಸ್ಥಳ ಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡು, ಮೈಸೂರು ನಗರವನ್ನು ಧೂಮಪಾನ ಮುಕ್ತಗೊಳಿಸಲು ಮೈಸೂರು ಮಹಾ ನಗರಪಾಲಿಕೆ ಮುಂದಾಗಿದೆ. ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಬುಧವಾರ ಮೈಸೂರು ಮಹಾನಗರ ಪಾಲಿಕೆಯ ಆರೋಗ್ಯ ನಿರೀಕ್ಷಕರಿಗೆ ಹಮ್ಮಿ ಕೊಂಡಿದ್ದ ತಂಬಾಕು ನಿಯಂತ್ರಣ ಕಾಯಿದೆ ಕೋಟ್ಪಾ 2013 (ಅigಚಿಡಿeಣಣes ಚಿಟಿಜ ಔಣheಡಿ ಖಿobಚಿಛಿಛಿo Pಡಿoಜuಛಿಣs ಂಛಿಣ) ಅಡಿ ತರಬೇತಿ ಕಾರ್ಯಾಗಾರ ಹಮ್ಮಿಕೊಂಡಿತ್ತು. ಧೂಮಪಾನ ಮಾಡ ದವರ ಆರೋಗ್ಯ ಕಾಪಾಡುವ…
ರೈಲ್ವೆ ಪ್ರಯಾಣಿಕರ ಅನುಕೂಲಕ್ಕೆ ಅನುವು ಮಾಡಿಕೊಡಲು ಸಂಸದ ಪ್ರತಾಪ್ ಸಿಂಹ ಸೂಚನೆ
July 18, 2019ಮೈಸೂರು,ಜು.17-ಹಾಸನ ಕಡೆ ಪ್ರಯಾಣ ಮಾಡುವ ಪ್ರಯಾಣಿಕರಿಗಾಗಿ ಮೈಸೂರಿನ ಕೆಆರ್‍ಎಸ್ ರಿಂಗ್ ರಸ್ತೆ ಜಂಕ್ಷನ್‍ನಲ್ಲಿ ರೈಲು ತಂಗುದಾಣ ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ನೈಋತ್ಯ ರೈಲ್ವೆ ಜನರಲ್ ಮ್ಯಾನೇಜರ್ ಅಜಯ್ ಕುಮಾರ್ ಸಿಂಗ್ ಮತ್ತು ಡಿವಿಜನಲ್ ರೈಲ್ವೆ ಮ್ಯಾನೇಜರ್ ಅಪರ್ಣ ಗರ್ಗ್ ಅವರಿಗೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಪತ್ರ ಬರೆದಿದ್ದಾರೆ. ಇಲ್ಲಿ ತಂಗುದಾಣ ನಿರ್ಮಿಸಿದರೆ ಮೈಸೂರಿನ ಮುಖ್ಯ ರೈಲ್ವೆ ನಿಲ್ದಾಣದ ಮೇಲಿನ ಒತ್ತಡವು ಕಡಿಮೆ ಯಾಗುವುದರ ಜೊತೆಗೆ ಮೇಟಗಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡುವ ನೆರೆ ಜಿಲ್ಲೆಯ ಕಾರ್ಮಿಕರಿಗೂ…
ಕಸಾಯಿಖಾನೆಗೆ ಸಾಗಿಸುತ್ತಿದ್ದ 34 ಜಾನುವಾರುಗಳ ರಕ್ಷಣೆ
July 18, 2019ಮೈಸೂರು,ಜು.17(ಆರ್‍ಕೆ)- ಇಂದು ಬೆಳ್ಳಂಬೆಳಿಗ್ಗೆ ಕಾರ್ಯಾ ಚರಣೆ ನಡೆಸಿದ ಮೈಸೂರಿನ ಸಿಸಿಬಿ ಪೊಲೀಸರು, ಕಸಾಯಿಖಾನೆಗೆ ಸಾಗಿ ಸುತ್ತಿದ್ದ 34 ಜಾನುವಾರುಗಳನ್ನು ರಕ್ಷಿಸಿ ಇಬ್ಬರನ್ನು ಬಂಧಿಸಿರುವ ಘಟನೆ ಶುಭೋದಿನಿ ಕನ್ವೆನ್ಷನ್ ಹಾಲ್ ಬಳಿ ಹೆಬ್ಬಾಳು ರಿಂಗ್ ರಸ್ತೆಯಲ್ಲಿ ಸಂಭವಿಸಿದೆ. ಮೈಸೂರಿನ ಲಷ್ಕರ್ ಮೊಹಲ್ಲಾ, ಮಹಮದ್ ಸೇಠ್ ಬ್ಲಾಕ್ ನಿವಾಸಿ ಫಾರೂಕ್(30) ಹಾಗೂ ಮೈಸೂರು ತಾಲೂಕು, ಕಾಮನಕೆರೆ ಹುಂಡಿ ಬಳಿಯ ಅಮೃತ ಬಡಾವಣೆ ನಿವಾಸಿ ಮೌಸಿನ್ (35) ಬಂಧಿತ ಆರೋಪಿಗಳು. ಭಾತ್ಮೀದಾರರು ನೀಡಿದ ಖಚಿತ ಮಾಹಿತಿ ಮೇರೆಗೆ ಇಂದು ಮುಂಜಾನೆ 6.30…
ಮೈಸೂರಿನ ಪ್ರತಿಭಾವಂತ ಯುವ ಸಾಧಕಿ ಲಾಸ್ಯಜೈನ್ ಅಮೇರಿಕಾದ ವಲ್ರ್ಡ್ ಜಾಂಬೂರಿಗೆ ಆಯ್ಕೆ
July 18, 2019ಮೈಸೂರು,ಜು.17-ಅಮೇರಿಕಾದ ವೆಸ್ಟ್ ವರ್ಜಿನಿಯಾದಲ್ಲಿ ಜು.21ರಿಂದ ಆಗಸ್ಟ್ 2ರವರೆಗೆ ನಡೆಯಲಿರುವ ಸ್ಕೌಟ್ಸ್ ಮತ್ತು ಗೈಡ್ಸ್‍ನ ವಲ್ರ್ಡ್ ಜಾಂಬೂರಿಗೆ ನಗರದ ಪ್ರತಿಭಾವಂತ, ಯುವ ಸಾಧಕಿ ಕು.ಲಾಸ್ಯ ಜೈನ್ ಆಯ್ಕೆಯಾಗಿದ್ದಾರೆ. ಬಹುಮುಖ ಪ್ರತಿಭೆಯಾದ ಲಾಸ್ಯ ಜೈನ್, ಭರತನಾಟ್ಯದ ಉತ್ತಮ ಕಲಾವಿದೆಯಾಗಿದ್ದು, ಅರಮನೆ ವೇದಿಕೆ, ಯುವ ದಸರಾ ಮುಂತಾದೆಡೆ ನೂರಕ್ಕಿಂತಲೂ ಹೆಚ್ಚು ಕಾರ್ಯಕ್ರಮ ನೀಡಿದ್ದಾರೆ. ಹಿಂದೂ ಸ್ಥಾನಿ ಸಂಗೀತ, ಚಿತ್ರಕಲೆ, ಕರಾಟೆ, ಈಜು ಮತ್ತು ಕ್ರೀಡೆ ಯಲ್ಲೂ ಉತ್ತಮ ಸಾಧನೆಗೈದಿದ್ದಾರೆ. ಓದಿನಲ್ಲೂ ಮುಂದಿರುವ ಇವರು ಈಶ್ವರ್ ವಿದ್ಯಾಲಯದ ಗೈಡ್ಸ್ ವಿಂಗ್‍ನಿಂದ ವಲ್ರ್ಡ್ ಜಾಂಬೂರಿಗೆ…
ಬುಡಕಟ್ಟು ಜನರಿಗೆ ಎನ್‍ಜಿಓಗಳೇ ವಿಲನ್; ನಿಷೇಧ ಸೂಕ್ತ
July 18, 2019ಮೈಸೂರು, ಜು.17(ಎಂಟಿವೈ)- ಬಹು ತೇಕ ಸ್ವಯಂ ಸೇವಾ ಸಂಸ್ಥೆ(ಎನ್‍ಜಿಓ) ಗಳು ಬುಡಕಟ್ಟು ಜನರ ಹೆಸರು ಹೇಳಿ ಕೊಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರ ದಿಂದ ಕಾಲ ಕಾಲಕ್ಕೆ ಅನುದಾನ ಪಡೆದು ಹೊಟ್ಟೆ ತುಂಬಿಸಿಕೊಳ್ಳುತ್ತಿವೆ. ಇದರಿಂದಾಗಿ ಇಂದಿಗೂ ಬುಡಕಟ್ಟು ಜನರ ಸ್ಥಿತಿ ಶೋಚನೀಯವಾಗಿದೆ ಎಂದು ಧಾರ ವಾಡದ ಕರ್ನಾಟಕ ವಿಶ್ವವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ಸಂಯೋಜಕ ಪೆÇ್ರ.ಸುಭಾಷ್ ಚಂದ್ರ ನಾಟಿಕರ್ ವಿಷಾದಿಸಿದರು. ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಬುಡಕಟ್ಟು…
ಇಂದು ಮೈಸೂರು ಅರಮನೆಯಲ್ಲಿ ಜಯಚಾಮರಾಜ ಒಡೆಯರ್ ಜನ್ಮ ಶತಮಾನೋತ್ಸವಅದ್ಧೂರಿ ಸಮಾರಂಭ
July 18, 2019ಮೈಸೂರು: ಮೈಸೂರು ಸಂಸ್ಥಾನದ ಮಹಾರಾಜ ಶ್ರೀ ಜಯಚಾಮ ರಾಜ ಒಡೆಯರ್ ಅವರ ಜನ್ಮ ಶತಮಾ ನೋತ್ಸವ ಸಮಾರಂಭ ನಾಳೆ(ಜು.18) 11.15ಕ್ಕೆ ಅರಮನೆಯ ದರ್ಬಾರ್ ಹಾಲ್ ನಲ್ಲಿ ವಿಜೃಂಭಣೆಯಿಂದ ನೆರವೇರಲಿದ್ದು, ರಾಜ್ಯಪಾಲ ವಜುಭಾಯಿ ರೂಡಭಾಯ್ ವಾಲಾ ಸೇರಿದಂತೆ ಅನೇಕ ಗಣ್ಯರು ಪಾಲ್ಗೊ ಳ್ಳಲಿದ್ದಾರೆ. ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಹಾಗೂ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಫೌಂಡೇಷನ್ ವತಿಯಿಂದ ದರ್ಬಾರ್ ಹಾಲ್‍ನಲ್ಲಿ ಆಯೋ ಜಿಸಿರುವ ಶ್ರೀ ಜಯಚಾಮರಾಜ ಒಡೆ ಯರ್ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮಕ್ಕೆ ಬುಧವಾರ ಸಕಲ ಸಿದ್ಧತೆ…










