ಮೈಸೂರಿನ ಪ್ರತಿಭಾವಂತ ಯುವ ಸಾಧಕಿ ಲಾಸ್ಯಜೈನ್ ಅಮೇರಿಕಾದ ವಲ್ರ್ಡ್ ಜಾಂಬೂರಿಗೆ ಆಯ್ಕೆ
ಮೈಸೂರು

ಮೈಸೂರಿನ ಪ್ರತಿಭಾವಂತ ಯುವ ಸಾಧಕಿ ಲಾಸ್ಯಜೈನ್ ಅಮೇರಿಕಾದ ವಲ್ರ್ಡ್ ಜಾಂಬೂರಿಗೆ ಆಯ್ಕೆ

July 18, 2019

ಮೈಸೂರು,ಜು.17-ಅಮೇರಿಕಾದ ವೆಸ್ಟ್ ವರ್ಜಿನಿಯಾದಲ್ಲಿ ಜು.21ರಿಂದ ಆಗಸ್ಟ್ 2ರವರೆಗೆ ನಡೆಯಲಿರುವ ಸ್ಕೌಟ್ಸ್ ಮತ್ತು ಗೈಡ್ಸ್‍ನ ವಲ್ರ್ಡ್ ಜಾಂಬೂರಿಗೆ ನಗರದ ಪ್ರತಿಭಾವಂತ, ಯುವ ಸಾಧಕಿ ಕು.ಲಾಸ್ಯ ಜೈನ್ ಆಯ್ಕೆಯಾಗಿದ್ದಾರೆ. ಬಹುಮುಖ ಪ್ರತಿಭೆಯಾದ ಲಾಸ್ಯ ಜೈನ್, ಭರತನಾಟ್ಯದ ಉತ್ತಮ ಕಲಾವಿದೆಯಾಗಿದ್ದು, ಅರಮನೆ ವೇದಿಕೆ, ಯುವ ದಸರಾ ಮುಂತಾದೆಡೆ ನೂರಕ್ಕಿಂತಲೂ ಹೆಚ್ಚು ಕಾರ್ಯಕ್ರಮ ನೀಡಿದ್ದಾರೆ. ಹಿಂದೂ ಸ್ಥಾನಿ ಸಂಗೀತ, ಚಿತ್ರಕಲೆ, ಕರಾಟೆ, ಈಜು ಮತ್ತು ಕ್ರೀಡೆ ಯಲ್ಲೂ ಉತ್ತಮ ಸಾಧನೆಗೈದಿದ್ದಾರೆ. ಓದಿನಲ್ಲೂ ಮುಂದಿರುವ ಇವರು ಈಶ್ವರ್ ವಿದ್ಯಾಲಯದ ಗೈಡ್ಸ್ ವಿಂಗ್‍ನಿಂದ ವಲ್ರ್ಡ್ ಜಾಂಬೂರಿಗೆ ಆಯ್ಕೆಯಾಗಿ ದ್ದಾರೆ. ಪ್ರಸ್ತುತ ಪ್ರಥಮ ಪಿಯುಸಿಯನ್ನು ವಿಜ್ಞಾನ ಟೆರೇಷಿಯನ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. 5ನೇ ತರಗತಿಯವರೆಗೂ ಕನ್ನಡ ಮಾಧ್ಯಮದಲ್ಲಿ ಓದಿರುವ ಲಾಸ್ಯ `ಆಪ್ತಮಿತ್ರ’ ಖ್ಯಾತಿಯ ನೃತ್ಯಪಟು ವಿದ್ವಾನ್ ಶ್ರೀಧರ್ ಜೈನ್ ಮತ್ತು ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಸಂಗೀತ ಶಿಕ್ಷಕಿ ವಿದುಷಿ ಸೌಮ್ಯ ಜೈನ್‍ರವರ ಪುತ್ರಿಯಾಗಿದ್ದಾರೆ.

Translate »