ಕಸಾಯಿಖಾನೆಗೆ ಸಾಗಿಸುತ್ತಿದ್ದ 34 ಜಾನುವಾರುಗಳ ರಕ್ಷಣೆ
ಮೈಸೂರು

ಕಸಾಯಿಖಾನೆಗೆ ಸಾಗಿಸುತ್ತಿದ್ದ 34 ಜಾನುವಾರುಗಳ ರಕ್ಷಣೆ

July 18, 2019

ಮೈಸೂರು,ಜು.17(ಆರ್‍ಕೆ)- ಇಂದು ಬೆಳ್ಳಂಬೆಳಿಗ್ಗೆ ಕಾರ್ಯಾ ಚರಣೆ ನಡೆಸಿದ ಮೈಸೂರಿನ ಸಿಸಿಬಿ ಪೊಲೀಸರು, ಕಸಾಯಿಖಾನೆಗೆ ಸಾಗಿ ಸುತ್ತಿದ್ದ 34 ಜಾನುವಾರುಗಳನ್ನು ರಕ್ಷಿಸಿ ಇಬ್ಬರನ್ನು ಬಂಧಿಸಿರುವ ಘಟನೆ ಶುಭೋದಿನಿ ಕನ್ವೆನ್ಷನ್ ಹಾಲ್ ಬಳಿ ಹೆಬ್ಬಾಳು ರಿಂಗ್ ರಸ್ತೆಯಲ್ಲಿ ಸಂಭವಿಸಿದೆ.

ಮೈಸೂರಿನ ಲಷ್ಕರ್ ಮೊಹಲ್ಲಾ, ಮಹಮದ್ ಸೇಠ್ ಬ್ಲಾಕ್ ನಿವಾಸಿ ಫಾರೂಕ್(30) ಹಾಗೂ ಮೈಸೂರು ತಾಲೂಕು, ಕಾಮನಕೆರೆ ಹುಂಡಿ ಬಳಿಯ ಅಮೃತ ಬಡಾವಣೆ ನಿವಾಸಿ ಮೌಸಿನ್ (35) ಬಂಧಿತ ಆರೋಪಿಗಳು.

ಭಾತ್ಮೀದಾರರು ನೀಡಿದ ಖಚಿತ ಮಾಹಿತಿ ಮೇರೆಗೆ ಇಂದು ಮುಂಜಾನೆ 6.30 ಗಂಟೆ ವೇಳೆಗೆ ದಾಳಿ ನಡೆಸಿ ಕೆ.ಆರ್. ನಗರ ತಾಲೂಕಿನ ಚುಂಚನಕಟ್ಟೆ ಕಡೆ ಯಿಂದ ಮೈಸೂರಿನ ಕಸಾಯಿಖಾನೆಗೆ ಜಾನುವಾರುಗಳನ್ನು ಸಾಗಿಸುತ್ತಿದ್ದ ಬೊಲೆರೋ ಪಿಕಪ್ ವಶಪಡಿಸಿಕೊಂಡು ಪಿಂಜರಾ ಪೋಲ್ ಸೊಸೈಟಿಗೆ ಒಪ್ಪಿಸಿದರು.

ಅನಧಿಕೃತವಾಗಿ 34 ದನಕರುಗಳನ್ನು ಸಾಗಿಸುತ್ತಿದ್ದ ಆರೋಪಿಗಳಿಬ್ಬರನ್ನು ಬಂಧಿಸಿ ಹೆಬ್ಬಾಳು ಠಾಣೆ ಪೊಲೀಸರಿಗೆ ಒಪ್ಪಿಸಲಾಯಿತು. ಪ್ರಕರಣ ದಾಖಲಿಸಿ ಕೊಂಡಿರುವ ಪೊಲೀಸರು ತನಿಖೆ ನಡೆಸು ತ್ತಿದ್ದಾರೆ. ಡಿಸಿಪಿ ಎಂ. ಮುತ್ತುರಾಜ್ ಅವರ ಮಾರ್ಗದರ್ಶನದಲ್ಲಿ ನಡೆದ ಪತ್ತೆ ಕಾರ್ಯಾಚರಣೆಯಲ್ಲಿ ಸಿಸಿಬಿ ಎಸಿಪಿ ಬಿ.ಆರ್. ಲಿಂಗಪ್ಪ, ಇನ್ಸ್‍ಪೆಕ್ಟರ್ ಎ. ಮಲ್ಲೇಶ್, ಸಿಬ್ಬಂದಿಗಳಾದ ರಾಜು, ಜೋಸೆಫ್, ನರೋನ, ಪುರುಷೋತ್ತಮ್, ಅರುಣ್, ರಘು, ಮೋಹನ್ ಹಾಗೂ ಶ್ರೀನಿವಾಸ ಪ್ರಸಾದ್ ಪಾಲ್ಗೊಂಡಿದ್ದರು.

Translate »