ಬುಡಕಟ್ಟು ಜನರಿಗೆ ಎನ್‍ಜಿಓಗಳೇ ವಿಲನ್; ನಿಷೇಧ ಸೂಕ್ತ
ಮೈಸೂರು

ಬುಡಕಟ್ಟು ಜನರಿಗೆ ಎನ್‍ಜಿಓಗಳೇ ವಿಲನ್; ನಿಷೇಧ ಸೂಕ್ತ

July 18, 2019

ಮೈಸೂರು, ಜು.17(ಎಂಟಿವೈ)- ಬಹು ತೇಕ ಸ್ವಯಂ ಸೇವಾ ಸಂಸ್ಥೆ(ಎನ್‍ಜಿಓ) ಗಳು ಬುಡಕಟ್ಟು ಜನರ ಹೆಸರು ಹೇಳಿ ಕೊಂಡು ಕೇಂದ್ರ ಹಾಗೂ ರಾಜ್ಯ ಸರ್ಕಾರ ದಿಂದ ಕಾಲ ಕಾಲಕ್ಕೆ ಅನುದಾನ ಪಡೆದು ಹೊಟ್ಟೆ ತುಂಬಿಸಿಕೊಳ್ಳುತ್ತಿವೆ. ಇದರಿಂದಾಗಿ ಇಂದಿಗೂ ಬುಡಕಟ್ಟು ಜನರ ಸ್ಥಿತಿ ಶೋಚನೀಯವಾಗಿದೆ ಎಂದು ಧಾರ ವಾಡದ ಕರ್ನಾಟಕ ವಿಶ್ವವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ಸಂಯೋಜಕ ಪೆÇ್ರ.ಸುಭಾಷ್ ಚಂದ್ರ ನಾಟಿಕರ್ ವಿಷಾದಿಸಿದರು.

ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ಸಭಾಂಗಣದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಬುಧ ವಾರ ಆಯೋಜಿಸಿದ್ದ `ಭಾರತದಲ್ಲಿ ಬುಡ ಕಟ್ಟು ಸಮುದಾಯಗಳ ಅಭಿವೃದ್ಧಿ: ಸಮಸ್ಯೆಗಳು ಮತ್ತು ಸವಾಲುಗಳು’ ಕುರಿತ ಎರಡು ದಿನಗಳ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಸ್ವಾತಂತ್ರ್ಯ ದೊರೆತು ಹಲವು ದಶಕ ಕಳೆದರೂ ಬುಡಕಟ್ಟು ಜನರ ಸ್ಥಿತಿ ಇಂದಿಗೂ ಶೋಚನೀಯ ವಾಗಿದೆ. ಸಮಾಜದ ಮುಖ್ಯವಾಹಿನಿಗೆ ಬುಡಕಟ್ಟು ಸಮುದಾಯವನ್ನು ತರಬೇ ಕೆಂಬ ಚರ್ಚೆ ವ್ಯಾಪಕವಾಗಿ ನಡೆಯುತ್ತಿದೆ. ಇದಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೋಟ್ಯಾಂತರ ರೂ. ಖರ್ಚು ಮಾಡುತ್ತಿವೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬುಡಕಟ್ಟು ಜನರ ಶ್ರೇಯೋಭಿವೃದ್ಧಿ ಗಾಗಿ ಶ್ರಮಿಸುವುದಾಗಿ ಹಲವು ಸಂಘ-ಸಂಸ್ಥೆಗಳು ಹೇಳಿಕೊಳ್ಳುತ್ತಿವೆ. ಆದರೆ ಆದಿವಾಸಿಗಳ ಏಳಿಗೆಗಾಗಿ ಪ್ರಾಮಾಣಿಕ ವಾಗಿ ಕೆಲಸ ಮಾಡುತ್ತಿಲ್ಲ. ಬುಡಕಟ್ಟು ಸಮು ದಾಯ ಅಕ್ಷರಸ್ಥರಾದರೆ, ಮನೆ ಸೇರಿದಂತೆ ಮೂಲ ಸೌಲಭ್ಯ ಅವರಿಗೆ ದೊರೆತರೆ ಎನ್‍ಜಿಓಗಳಿಗೆ ಕೆಲಸವೇ ಇಲ್ಲದಂತಾಗು ತ್ತದೆ. ಈ ಹಿನ್ನೆಲೆಯಲ್ಲಿ ತಮ್ಮ ಜೀವಂತಿಕೆ ಗಾಗಿ ಶೇ.80ರಷ್ಟು ಎನ್‍ಜಿಓಗಳು ಬಂದ ಸವಲತ್ತುಗಳನ್ನೆಲ್ಲಾ ತಮ್ಮ ಶ್ರೇಯೋಭಿವೃದ್ಧಿಗೆ ಬಳಸಿಕೊಳ್ಳುತ್ತಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಎನ್‍ಜಿಓಗಳನ್ನು ನಿಷೇಧಿಸ ಬೇಕು ಎಂದು ಮನವಿ ಮಾಡಿದರು.

ಬುಡಕಟ್ಟು ಸಮುದಾಯಗಳು ಈ ದೇಶದ ಸಂಪತ್ತು. ಅರಣ್ಯ ಉಳಿವಿಗೆ ಬುಡಕಟ್ಟು ಜನರೇ ಕಾರಣ. ಈ ಜನಾಂ ಗಕ್ಕೆ ಸೌಲಭ್ಯ ಓದಗಿಸುವುದೇ ದೊಡ್ಡ ಸವಾಲಾಗಿದೆ. ಉತ್ತರ ಭಾರತದ ಕೆಲ ಬುಡಕಟ್ಟು ಪ್ರದೇಶಕ್ಕೆ ತೆರಳುವುದೇ ಕಷ್ಟ. ಅವರಿಗೆ ಸೌಲಭ್ಯ ಕಲ್ಪಿಸದಿದ್ದರೂ ಪರ ವಾಗಿಲ್ಲ. ಅವರನ್ನು ಸ್ವತಂತ್ರವಾಗಿ ಬದುಕಲು ಬಿಡಬೇಕು. ಇದರಿಂದ ಅವರ ಜೀವನವೂ ಉತ್ತಮವಾಗಿರುತ್ತದೆ, ಕಾಡಿನ ಸಂಪತ್ತೂ ಸುರಕ್ಷಿತವಾಗಿರುತ್ತದೆ ಎಂದರು.

ಬುಡಕಟ್ಟು ಸಮುದಾಯಗಳು ಕಾಡನ್ನು ನಾಶ ಮಾಡುತ್ತವೆ ಎಂದು ಒಕ್ಕಲೆಬ್ಬಿಸಲಾ ಗುತ್ತದೆ. ಬದಲಾಗಿ ಬುಡಕಟ್ಟು ಜನಾಂಗ ವಾಸಿಸುವ ಪ್ರದೇಶವನ್ನು ಕಂದಾಯ ಗ್ರಾಮವೆಂದು ಘೋಷಿಸಬೇಕು. ಸಮ ರ್ಪಕವಾಗಿ ಮೀಸಲಾತಿ ಒದಗಿಸಬೇಕು. ಸರ್ಕಾರವು ನಾಗರಿಕ ಸಮಾಜಕ್ಕೆ ನೀಡ ಲಾಗುತ್ತಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಿ ಅವರ ಸರ್ವತೋಮುಖ ಅಭಿವೃದ್ಧಿ ಮಾಡಬೇಕು ಎಂದು ಕೋರಿದರು.

ಬುಡಕಟ್ಟು ಸಂಸ್ಕøತಿ, ಅವರ ಚಿಂತನೆ, ಪರಿಸರ ಸಂರಕ್ಷಣೆ, ಜ್ಞಾನ ಅಮೂಲ್ಯ. ಇದಕ್ಕೆಲ್ಲ ಸರ್ಕಾರ ಹಕ್ಕು ಸ್ವಾಮ್ಯ ಹಾಗೂ ಮಾನ್ಯತೆ ನೀಡಬೇಕು. ಬುಡಕಟ್ಟು ಜನರ ಸಮಸ್ಯೆ ಬಗೆಹರಿಸುವುದು ಮತ್ತು ಅವರ ಸಂರ ಕ್ಷಣೆ ಕೇವಲ ಸಂಶೋಧನೆಗೆ, ಪ್ರಬಂಧ ಮಂಡನೆ, ಉಪನ್ಯಾಸ ಮತ್ತು ಭಾಷಣಕ್ಕೆ ಸೀಮಿತವಾ ಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ನಿರ್ದೇ ಶಕ ಡಾ.ಟಿ.ಟಿ.ಬಸವನಗೌಡ ಮಾತನಾಡಿ, ಎರಡು ದಿನಗಳ ಕಾಲ ನಡೆಯುವ ವಿಚಾರ ಸಂಕಿರಣದಲ್ಲಿ ಬುಡಕಟ್ಟು ಜನಾಂಗದ ಸಮಸ್ಯೆಗಳು ಮತ್ತು ಸವಾಲುಗಳ ಕುರಿತು ಚರ್ಚಿಸಲಾಗುತ್ತದೆ. ಮಂಡನೆಯಾಗುವ ಪ್ರಬಂಧಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಕಳುಹಿಸ ಲಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಬಿ.ಶಿವಪ್ಪ, ಮಾನಸ ಗಂಗೋ ತ್ರಿಯ ಮಾನವಶಾಸ್ತ್ರ ವಿಭಾಗದ ಮುಖ್ಯಸ್ಥ ಪೆÇ್ರ.ಎಂ.ಆರ್.ಗಂಗಾಧರಪ್ಪ, ರಾಜ್ಯ ಬುಡ ಕಟ್ಟು ಸಂಶೋಧನಾ ಸಂಸ್ಥೆಯ ಸಂಶೋ ಧನಾ ಅಧಿಕಾರಿ ಎಸ್.ಪ್ರತಿಭಾ ಇದ್ದರು.

Translate »