ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡೀರಿ ಎಚ್ಚರ
ಮೈಸೂರು

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡೀರಿ ಎಚ್ಚರ

July 18, 2019

ಮೈಸೂರು,ಜು.17(ಆರ್‍ಕೆಬಿ)- ಧೂಮಪಾನ ಮಾಡದವರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಕೋಟ್ಪಾ ಕಾಯಿದೆ ಯಡಿ ಮೈಸೂರಿನ ಸಾರ್ವಜನಿಕ ಸ್ಥಳ ಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡು, ಮೈಸೂರು ನಗರವನ್ನು ಧೂಮಪಾನ ಮುಕ್ತಗೊಳಿಸಲು ಮೈಸೂರು ಮಹಾ ನಗರಪಾಲಿಕೆ ಮುಂದಾಗಿದೆ.

ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಬುಧವಾರ ಮೈಸೂರು ಮಹಾನಗರ ಪಾಲಿಕೆಯ ಆರೋಗ್ಯ ನಿರೀಕ್ಷಕರಿಗೆ ಹಮ್ಮಿ ಕೊಂಡಿದ್ದ ತಂಬಾಕು ನಿಯಂತ್ರಣ ಕಾಯಿದೆ ಕೋಟ್ಪಾ 2013 (ಅigಚಿಡಿeಣಣes ಚಿಟಿಜ ಔಣheಡಿ ಖಿobಚಿಛಿಛಿo Pಡಿoಜuಛಿಣs ಂಛಿಣ) ಅಡಿ ತರಬೇತಿ ಕಾರ್ಯಾಗಾರ ಹಮ್ಮಿಕೊಂಡಿತ್ತು. ಧೂಮಪಾನ ಮಾಡ ದವರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಕೋಟ್ಪಾ ಕಾಯಿದೆ ಸೆಕ್ಷನ್ 4, 5, 6ಎ, 6ಬಿ ಮತ್ತು 7ರ ಅನ್ವಯ ಮೈಸೂರು ಪಾಲಿಕೆ ವ್ಯಾಪ್ತಿಯಲ್ಲಿ ಸಮರ್ಪಕ ಅನು ಷ್ಠಾನಗೊಳಿಸುವಂತೆ ಹಾಗೂ ಸಾರ್ವಜ ನಿಕ ಸ್ಥಳಗಳಾದ ಶಾಲಾ-ಕಾಲೇಜು, ಬಸ್ ನಿಲ್ದಾಣ, ಸರ್ಕಾರಿ ಕಚೇರಿಗಳ ಆವರಣ, ಬಾರ್ ಮತ್ತು ರೆಸ್ಟೋರೆಂಟ್, ಪಬ್, ಕ್ಲಬ್, ಹೋಟೆಲ್‍ಗಳು ಇನ್ನಿತರ ಕಡೆ ಗಳಲ್ಲಿ `ಧೂಮಪಾನ ಮುಕ್ತ’ ಮಾಡುವ ನಿಟ್ಟಿನಲ್ಲಿ ಪೌರಾಡಳಿತ ನಿರ್ದೇಶನಾಲಯ ಸೂಚನೆ ನೀಡಿದೆ. ಇದನ್ನು ಕಟ್ಟುನಿಟ್ಟಾಗಿ ಪಾಲಿಸಲು ಮಹಾನಗರಪಾಲಿಕೆ ಆಯುಕ್ತರು ಪಾಲಿಕೆಯ ಮುಖ್ಯ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದರ ಅನ್ವಯ ಇಂದಿನ ಕಾರ್ಯಾಗಾರ ನಡೆಸಲಾಯಿತು.

ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಆರ್.ವೆಂಕಟೇಶ್ ಕಾರ್ಯಾಗಾರಕ್ಕೆ ಚಾಲನೆ ನೀಡಿದರು. ನಗರಪಾಲಿಕೆ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಮಾರಾಟ ಮಾಡುತ್ತಿರುವವರ ಮೇಲೂ ಕಠಿಣ ಕ್ರಮ ಕೈಗೊಂಡು ಮಾರಾಟ ಕಡಿತಗೊಳಿಸಿ, ನಗರವನ್ನು ಧೂಮಪಾನ ಮುಕ್ತಗೊಳಿಸಲು ಕಾರ್ಯ ಪ್ರವೃತ್ತರಾಗು ವಂತೆ ಸೂಚಿಸಿದರು.

ನಗರಪಾಲಿಕೆ ಮುಖ್ಯ ಆರೋಗ್ಯಾಧಿ ಕಾರಿ ಡಾ.ಜಯಂತ್ ಮಾತನಾಡಿ, ಧೂಮಪಾನ ಮಾಡದವರ ಆರೋಗ್ಯ ಕಾಪಾಡುವುದು ನಮ್ಮ ಧ್ಯೇಯವಾಗಿದೆ. ಜೊತೆಗೆ ಕಾನೂನು ಪಾಲನೆಯೂ ಮುಖ್ಯ ವಾಗಿದೆ. ಇನ್ನು ಮುಂದೆ ಪಾಲಿಕೆಯ ವ್ಯಾಪ್ತಿಯಲ್ಲಿ ಧೂಮಪಾನ ಮಾಡಲು ಅವಕಾಶ ನೀಡದಿ ರುವಂತೆ ತಿಳುವಳಿಕೆ ನೀಡಲಾಗಿದೆ ಎಂದರು.

ಧೂಮಪಾನ ವಲಯಗಳನ್ನು ಕಾನೂ ನಾತ್ಮಕವಾಗಿ ಸ್ಥಾಪಿಸಿ, ಸಾರ್ವಜನಿಕ ಸ್ಥಳ ಗಳಲ್ಲಿ ಸಂಪೂರ್ಣವಾಗಿ ನೀಷೇಧಿಸು ವಂತೆ ಪಾಲಿಕೆಯ ಆರೋಗ್ಯ ನಿರೀಕ್ಷಕರು ಕಾರ್ಯಪ್ರವೃತ್ತರಾಗಿ ಉಲ್ಲಂಘಿಸಿದವರ ವಿರುದ್ಧ ಕೋಟ್ಪಾ ಕಾಯಿದೆಯನ್ವಯ ಕಠಿಣ ಕ್ರಮವಹಿಸಿ ಮೃಸೂರು ನಗರವನ್ನು ಧೂಮಪಾನ ಮುಕ್ತ ನಗರವನ್ನಾಗಿ ಮಾಡಲು ಪಣ ತೊಡುವಂತೆ ಇನ್ಸ್ ಪೆಕ್ಟರ್‍ಗಳಿಗೆ ತಿಳಿಸಿದರು.

ಕೋಟ್ಪಾ ಕಾಯಿದೆ ಕುರಿತು ತರಬೇತಿ ನೀಡಿದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸರ್ವೇಕ್ಷಾಣಾಧಿಕಾರಿ ಡಾ.ಶಿವಪ್ರಸಾದ್ ಮಾತನಾಡಿ, ಪ್ರತೀ ವರ್ಷ ದೇಶದ 10 ಲಕ್ಷ ಜನರು ತಂಬಾಕಿಗೆ ಬಲಿಯಾಗುತ್ತಿದ್ದಾರೆ. ಇದನ್ನು ತಡೆ ಗಟ್ಟಲು ಹಾಗೂ ಧೂಮಪಾನ ಮಾಡ ದವರ ಆರೋಗ್ಯ ಕಾಪಾಡಲು ಆರೋಗ್ಯ ಇಲಾಖೆಯು ಕೋಟ್ಪಾ 2003 ಕಾಯಿದೆಯನ್ನು ಜಾರಿಗೆ ತಂದಿದೆ. ಶಾಲಾ-ಕಾಲೇಜು, ಬಸ್ ನಿಲ್ದಾಣ, ರೈಲ್ವೆ ಸ್ಟೇಷನ್, ಚಿತ್ರಮಂದಿರ, ಹೋಟೆಲ್, ಬಾರ್ ಮತ್ತು ರೆಸ್ಟೋ ರೆಂಟ್, ಪಬ್, ಕ್ಲಬ್, ಸಮುದಾಯ ಭವನ, ಸಾರ್ವಜನಿಕ ಕಚೇರಿ ಮತ್ತು ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧವಿದೆ. ಗ್ಯಾಟ್ಸ್ 2 (ಉಂಖಿS 2) ಪ್ರಕಾರ ಬಾರ್ ಮತ್ತು ರೆಸ್ಟೋರೆಂಟ್, ಪಬ್, ಕ್ಲಬ್ ಹಾಗೂ ಹೋಟೆಲ್‍ಗಳಲ್ಲಿ ಧೂಮಪಾನಕ್ಕೆ ಅವಕಾಶ ಮಾಡಿಕೊಡುವುದರಿಂದ ಧೂಮಪಾನ ಮಾಡದವರ ಆರೋಗ್ಯ ವನ್ನು ತೊಂದರೆಗೆ ಒಳಪಡಿಸುವುದು ಅಪರಾಧ ಎಂದು ತಿಳಿಸಿದರು.

ಕಾರ್ಯಾಗಾರದಲ್ಲಿ ವಸಂತ ಕುಮಾರ್ ಮೈಸೂರುಮಠ್, ಜಿಲ್ಲೆಯ ತಂಬಾಕು ನಿಯಂತ್ರಣ ಕೋಶದ ಅಧಿಕಾರಿಗಳು, ಪಾಲಿಕೆಯ ಆರೋಗ್ಯ ನಿರೀಕ್ಷಕರು ಹಾಗೂ ಬೆಂಗಳೂರಿನ ಮಾಯಾ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Translate »