ಮೈಸೂರು

ವಿಧಾನಪರಿಷತ್‍ನಲ್ಲಿ ಆಡಳಿತ, ವಿಪಕ್ಷ ಸದಸ್ಯರ ವಾಕ್ಸಮರ
ಮೈಸೂರು

ವಿಧಾನಪರಿಷತ್‍ನಲ್ಲಿ ಆಡಳಿತ, ವಿಪಕ್ಷ ಸದಸ್ಯರ ವಾಕ್ಸಮರ

July 16, 2019

ಬೆಂಗಳೂರು, ಜು. 15(ಕೆಎಂಶಿ)- ಬಹುಮತವಿಲ್ಲದ ಸರ್ಕಾರ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಪ್ರತಿಪಕ್ಷ ಬಿಜೆಪಿ ಮೇಲ್ಮನೆ ಯಲ್ಲಿ ಧರಣಿ ನಡೆಸಿದರೆ, ಆಡಳಿತ ಪಕ್ಷದ ಸದಸ್ಯರು ರಾಜ್ಯ ಸರ್ಕಾರ ವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನ ನಡೆಸುತ್ತಿದೆ ಎಂದು ದೂರಿದ ಘಟನೆಯೂ ನಡೆಯಿತು. ಅಧಿವೇಶನ ಆರಂಭಗೊಳ್ಳುತ್ತಿ ದ್ದಂತೆ ಪ್ರತಿಪಕ್ಷದ ಸದಸ್ಯರು ಬಹುಮತವಿಲ್ಲದವರು ಹೇಗೆ ಸರ್ಕಾರ ನಡೆಸುತ್ತಾರೆ ಎಂದು ಏರುಧ್ವನಿಯಲ್ಲಿ ಆಡಳಿತ ಪಕ್ಷದ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಆಡಳಿತ ಪಕ್ಷದ ಸದಸ್ಯರು ಬಿಜೆಪಿ ವಿರುದ್ಧ ಹರಿಹಾಯ್ದು, ಘೋಷಣೆಗಳನ್ನು ಕೂಗಲಾರಂಭಿಸಿದರು. ಸದನದಲ್ಲಿ…

ಠೇವಣಿ ಹಣ ವಂಚನೆ ಪ್ರಕರಣ: ಲ್ಯಾನ್ಸರ್ ಫೈನಾನ್ಸ್ ಕಂಪನಿ ಆಸ್ತಿ ಮುಟ್ಟುಗೋಲಿಗೆ ಸರ್ಕಾರ ಆದೇಶ
ಮೈಸೂರು

ಠೇವಣಿ ಹಣ ವಂಚನೆ ಪ್ರಕರಣ: ಲ್ಯಾನ್ಸರ್ ಫೈನಾನ್ಸ್ ಕಂಪನಿ ಆಸ್ತಿ ಮುಟ್ಟುಗೋಲಿಗೆ ಸರ್ಕಾರ ಆದೇಶ

July 16, 2019

ಮೈಸೂರು, ಜು.15(ಆರ್‍ಕೆ)- ಸಾವಿರಾರು ಮಂದಿಯಿಂದ ಸಂಗ್ರಹಿಸಿದ ಠೇವಣಿ ಹಣ ಹಿಂತಿರುಗಿಸದೆ ಕೋಟ್ಯಾಂತರ ರೂ. ವಂಚಿಸಿದ್ದ ಮೆ. ಲ್ಯಾನ್ಸರ್ ಫೈನಾನ್ಸ್ ಕಂಪನಿ ಪ್ರೈ.ಲಿ. ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಸರ್ಕಾರ ಆದೇಶ ನೀಡಿದೆ. ಈ ಸಂಬಂಧ ಜೂನ್ 20ರಂದು ಅಧಿಸೂಚನೆ ಹೊರಡಿಸಿರುವ ಕಂದಾಯ ಇಲಾಖೆ (ವಿಶೇಷ ಘಟಕ) ಅಧೀನ ಕಾರ್ಯದರ್ಶಿ ಕೆ.ಆರ್. ರವಿಕುಮಾರ್ ಅವರು, ಠೇವಣಿ ವಂಚಿಸಿರುವ ಲ್ಯಾನ್ಸರ್ ಫೈನಾನ್ಸ್ ಕಂಪನಿಯ ಟಿ.ಸಿ. ರಾಜೇಂದ್ರ, ಪತ್ನಿ ಅನಿತಾ ಹಾಗೂ ಇ.ಎಸ್. ಅಶೋಕ್ ಅವರ ಪತ್ನಿ ವಿನೋದಾ ಅವರಿಗೆ ಸೇರಿದ ಸ್ಥಿರಾಸ್ತಿಗಳನ್ನು…

ಜು.18ರಿಂದ ನವಕಲ್ಪನೋತ್ಸವ ನೃತ್ಯ ಸ್ಪರ್ಧೆ
ಮೈಸೂರು

ಜು.18ರಿಂದ ನವಕಲ್ಪನೋತ್ಸವ ನೃತ್ಯ ಸ್ಪರ್ಧೆ

July 16, 2019

ಮೈಸೂರು, ಜು.15(ಆರ್‍ಕೆಬಿ)- ಮೈಸೂರಿನ ನವಕಲ್ಪನಾ ಪಫಾರ್ಮಿಂಗ್ ಆಟ್ರ್ಸ್ ಸೆಂಟರ್‍ನ ವಾರ್ಷಿಕೋತ್ಸವ ಅಂಗವಾಗಿ ಮೈಸೂರಿನ ಪುರಭವನದಲ್ಲಿ ಜುಲೈ 18ರಿಂದ ಮೂರು ದಿನಗಳ `ನವಕಲ್ಪ ನೋತ್ಸವ’ ನೃತ್ಯ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಕಲಾವಿದ ಮೈಕ್ ಚಂದ್ರು ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದ ಅವರು, ಜು.18ರಂದು ಬೆಳಿಗ್ಗೆ ಜೂನಿಯರ್, ಮಧ್ಯಾಹ್ನ ಸೀನಿಯರ್ ವಿಭಾಗದ ಕ್ಲಾಸಿಕಲ್ ನೃತ್ಯ ಸ್ಪರ್ಧೆ ನಡೆಯಲಿದೆ. ಜು.19ರಂದು ಪಾಶ್ಚಿಮಾತ್ಯ ನೃತ್ಯ, ಜು.20ರಂದು ಕಲಾಮಂದಿರದಲ್ಲಿ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಮುಖ್ಯ ಅತಿಥಿಗಳಾಗಿ…

ವಿವಿಧ ಖಾಸಗಿ ಕಂಪನಿಗಳಲ್ಲಿ 107 ಮಂದಿಗೆ ಉದ್ಯೋಗ ಭಾಗ್ಯ
ಮೈಸೂರು

ವಿವಿಧ ಖಾಸಗಿ ಕಂಪನಿಗಳಲ್ಲಿ 107 ಮಂದಿಗೆ ಉದ್ಯೋಗ ಭಾಗ್ಯ

July 16, 2019

ಮೈಸೂರು, ಜು.15(ಪಿಎಂ)- ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಮೈಸೂರು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ಸೋಮ ವಾರ ಹಮ್ಮಿಕೊಂಡಿದ್ದ ಉದ್ಯೋಗ ಮೇಳದಲ್ಲಿ ವಿವಿಧ ಖಾಸಗಿ ಸಂಸ್ಥೆಗಳ ಒಟ್ಟು 600ಕ್ಕೂ ಹೆಚ್ಚು ಹುದ್ದೆಗಳ ಭರ್ತಿಗೆ ನೇರ ಸಂದರ್ಶನ ನಡೆಸಲಾಯಿತು. ಮೈಸೂರಿನ ಎನ್‍ಆರ್ ಮೊಹ ಲ್ಲಾದ ಸರ್ಕಾರಿ ಕೈಗಾರಿಕಾ ತರ ಬೇತಿ ಸಂಸ್ಥೆ ಆವರಣದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ವಿಶ್ವ ಕೌಶಲ್ಯ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಉದ್ಯೋಗ ಮೇಳ ದಲ್ಲಿ ನೂರಾರು ಮಂದಿ ಉದ್ಯೋಗಾಕಾಂಕ್ಷಿಗಳು ಪಾಲ್ಗೊಂಡಿದ್ದರು….

ಮೈಸೂರು ಶೈಲಿ ನೃತ್ಯ ಪ್ರದರ್ಶನ ಕಾರ್ಯಾಗಾರ
ಮೈಸೂರು

ಮೈಸೂರು ಶೈಲಿ ನೃತ್ಯ ಪ್ರದರ್ಶನ ಕಾರ್ಯಾಗಾರ

July 16, 2019

ಮೈಸೂರು, ಜು.15(ಆರ್‍ಕೆಬಿ)- ಮೈಸೂರಿನ ಜೆ.ಪಿ.ನಗರ 2ನೇ ಹಂತದಲ್ಲಿರುವ ಕಲಾಶ್ರೀ ಕಲಾ ಮತ್ತು ಸಾಂಸ್ಕøತಿಕ ಕೇಂದ್ರದ ವತಿಯಿಂದ ಜು.20ರಿಂದ ಎರಡು ದಿನಗಳ ಮೈಸೂರು ಶೈಲಿ ನೃತ್ಯ ಪ್ರದರ್ಶನ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಅಂತಾರಾಷ್ಟ್ರೀಯ ನೃತ್ಯ ಹಾಗೂ ಯೋಗಪಟು ವಿದ್ವಾನ್ ಡಿ.ಕೇಶವ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 42 ವರ್ಷ ಗಳಿಂದ ವಿದೇಶದಲ್ಲಿ ಪಸರಿಸಿದ್ದ ಈ ನೃತ್ಯ ಕಲೆಗೆ ಮೈಸೂರಿ ನಲ್ಲಿಯೇ ಸೂಕ್ತ ಮನ್ನಣೆ ಇಲ್ಲದಿರುವುದನ್ನು ಮನಗಂಡು ಮೈಸೂರಿನಲ್ಲಿ ಈ ಕಾರ್ಯಾಗಾರ ಆಯೋಜಿಸಲಾಗಿದೆ. ಅಲ್ಲದೆ ಜು.20ರಂದು…

ವಿಧಾನಸಭೆ ವಿಸರ್ಜಿಸಲು ಬಡಗಲಪುರ ನಾಗೇಂದ್ರ ಒತ್ತಾಯ
ಮೈಸೂರು

ವಿಧಾನಸಭೆ ವಿಸರ್ಜಿಸಲು ಬಡಗಲಪುರ ನಾಗೇಂದ್ರ ಒತ್ತಾಯ

July 16, 2019

ಮೈಸೂರು, ಜು.15(ಆರ್‍ಕೆಬಿ)- ರಾಜ್ಯ ರಾಜಕಾರಣ ಅಸಹ್ಯಕರವಾಗಿದ್ದು, ಕೂಡಲೇ ವಿಧಾನಸಭೆಯನ್ನು ವಿಸರ್ಜನೆ ಮಾಡಿ ಜನತೆಯ ತೀರ್ಪಿಗೆ ಹೋಗು ವುದು ಸೂಕ್ತ ಎಂದು ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ. ಎಲ್ಲಾ ಪಕ್ಷದವರ ನಡವಳಿಕೆಗಳು ನಾಚಿಕೆ ತರಿಸುವಂತಿದ್ದು, ಇವರೆಲ್ಲರೂ ಜನತಂತ್ರ ವ್ಯವಸ್ಥೆಯ ಗೌರವಕ್ಕೆ ಕುಂದು ತರುತ್ತಿದ್ದಾರೆ. ಮಾನ ಮರ್ಯಾದೆ ಇಲ್ಲದೇ ನಡೆದುಕೊಳ್ಳುತ್ತಾ ಇಡೀ ರಾಜ್ಯದ ಜನತೆ ತಲೆ ತಗ್ಗಿಸುವಂತೆ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ. ರಾಜ್ಯದ ರಾಜಕಾರಣ ಅತ್ಯಂತ ಕೀಳು ಮಟ್ಟಕ್ಕೆ ಹೋಗುತ್ತಿರುವುದನ್ನು ತಡೆಗಟ್ಟಲು…

ಜಿಎಸ್‍ಎಸ್‍ಎಸ್ ವಿದ್ಯಾರ್ಥಿಗಳಿಗೆ ಜನಪದೋತ್ಸವದಲ್ಲಿ ಪ್ರಶಸ್ತಿ
ಮೈಸೂರು

ಜಿಎಸ್‍ಎಸ್‍ಎಸ್ ವಿದ್ಯಾರ್ಥಿಗಳಿಗೆ ಜನಪದೋತ್ಸವದಲ್ಲಿ ಪ್ರಶಸ್ತಿ

July 16, 2019

ಮೈಸೂರು, ಜು.15- ಮೈಸೂರು ಸಿದ್ಧಾರ್ಥನಗರದಲ್ಲಿರುವ ಗೀತಾ ಶಿಶು ಶಿಕ್ಷಣ ಸಂಘದ ಬದರಿಪ್ರಸಾದ್‍ಜಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮೈಸೂರು-ಹೆಚ್.ಡಿ. ಕೋಟೆ ರಸ್ತೆಯಲ್ಲಿರುವ ಮೈಸೂರು ಪಬ್ಲಿಕ್ ಸ್ಕೂಲ್‍ನಲ್ಲಿ ಆಯೋಜಿಸಿದ್ದ ಎಂ.ಪಿ.ಎಸ್. ಜನಪದೋತ್ಸವದಲ್ಲಿ ಭಾಗವಹಿಸಿದ್ದರು. ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಮೊಹಮ್ಮದ್ ರಹೀಶ್ ಕಾವ್ಯ ವಾಚನ ಹಾಗೂ ಶೀರ್ಷಿಕೆ ರಚನೆ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನದೊಂದಿಗೆ ಟ್ರೋಫಿ, ಪ್ರಶಸ್ತಿ ಪತ್ರ ಮತ್ತು ರೂ. 1000/- ನಗದು ಹಾಗೂ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ರಚನಾ ಎಂ. ಭಾರದ್ವಾಜ ಕಾವ್ಯ…

ಮೈತ್ರಿ ಸರ್ಕಾರಕ್ಕೆ ಮರ್ಮಾಘಾತ
ಮೈಸೂರು

ಮೈತ್ರಿ ಸರ್ಕಾರಕ್ಕೆ ಮರ್ಮಾಘಾತ

July 15, 2019

ಬೆಂಗಳೂರು,ಜು.14-ಕಳೆದ ರಾತ್ರಿ ರಾಜೀನಾಮೆ ವಾಪಸ್ ಪಡೆಯುತ್ತೇನೆ, ಜೊತೆಗೆ ಡಾ.ಕೆ.ಸುಧಾಕರ್ ಅವರನ್ನು ಮನವೊಲಿಸುತ್ತೇನೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಘೋಷಿಸಿದ್ದ ಹೊಸಕೋಟೆ ಕಾಂಗ್ರೆಸ್ ಶಾಸಕ ಎಂಟಿಬಿ ನಾಗರಾಜ್, ಇಂದು ಬೆಳಿಗ್ಗೆ ವಿಮಾನದಲ್ಲಿ ಮುಂಬೈಗೆ ಹಾರಿ ಅತೃಪ್ತ ಶಾಸಕರ ಜೊತೆ ಸೇರುವ ಮೂಲಕ ಮೈತ್ರಿ ಸರ್ಕಾರಕ್ಕೆ ಮರ್ಮಾಘಾತ ನೀಡಿದ್ದಾರೆ. ಜಾತ್ರೆಗೆ ಹೋಗಿ ಬರುವುದಾಗಿ ಕಾಂಗ್ರೆಸ್ ಮುಖಂಡ ರಿಗೆ ತಿಳಿಸಿ ಹೋಗಿದ್ದ ಶಾಸಕ ಎಂಟಿಬಿ ನಾಗರಾಜ್ ಅವರು, ಇಂದು ಬೆಳಿಗ್ಗೆ 10.30ರ ಸುಮಾರಿನಲ್ಲಿ ಕೆಂಪೇಗೌಡ…

ಬಿಜೆಪಿಯವರಿಗೆ ಮಾನ ಮರ್ಯಾದೆ ಇದ್ದರೆ ಆಪರೇಷನ್ ಮಾಡಿದ್ದನ್ನು ಒಪ್ಪಿಕೊಳ್ಳಲಿ: ಡಿಕೆಶಿ ಕಿಡಿ
ಮೈಸೂರು

ಬಿಜೆಪಿಯವರಿಗೆ ಮಾನ ಮರ್ಯಾದೆ ಇದ್ದರೆ ಆಪರೇಷನ್ ಮಾಡಿದ್ದನ್ನು ಒಪ್ಪಿಕೊಳ್ಳಲಿ: ಡಿಕೆಶಿ ಕಿಡಿ

July 15, 2019

ಬೆಂಗಳೂರು,ಜು.14- ಕಾಂಗ್ರೆಸ್-ಜೆಡಿಎಸ್ ಅತೃಪ್ತ ಶಾಸಕರು ದೋಸ್ತಿ ನಾಯಕ ರಿಗೆ ಕೈಕೊಟ್ಟು ಮುಂಬೈಗೆ ಹಾರಿದ್ದಾರೆ. ಅತೃಪ್ತ ಕಾಂಗ್ರೆಸ್ ಶಾಸಕ ಎಂಟಿಬಿ ನಾಗರಾಜ್, ಸುಧಾಕರ್ ಮುಂಬೈಗೆ ಹೋಗು ವಾಗ ಬಿಜೆಪಿ ನಾಯಕ ಆರ್.ಅಶೋಕ್ ಉಪಸ್ಥಿತರಿದ್ದ ಹಿನ್ನೆಲೆ ಬಿಜೆಪಿ ವಿರುದ್ಧ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಶಾಸಕರ ರಾಜೀನಾಮೆ ವಿಚಾರದಲ್ಲಿ ಬಿಜೆಪಿ ಸ್ನೇಹಿತರು ಎಲ್ಲರಿಗೂ ಕಿವಿ ಮೇಲೆ ಹೂ ಇಡುತ್ತಿದ್ದರು. ನಮಗೂ ಇದಕ್ಕೂ ಸಂಬಂಧವಿಲ್ಲ. ಇದು ಅವರ ಪಕ್ಷದ ಆಂತರಿಕ ವಿಚಾರ. ನಾವು ಯಾವುದಕ್ಕೂ ತಲೆ ಹಾಕಲ್ಲ ಎಂದು ಹೇಳುತ್ತಿದ್ದರು. ಆದರೆ ಹೋಟೆಲ್,…

ಸರ್ಕಾರ ಉಳಿಸಿಕೊಳ್ಳಲು ಮೈತ್ರಿ ಮುಖಂಡರ ಕೊನೇ ಕಸರತ್ತು
ಮೈಸೂರು

ಸರ್ಕಾರ ಉಳಿಸಿಕೊಳ್ಳಲು ಮೈತ್ರಿ ಮುಖಂಡರ ಕೊನೇ ಕಸರತ್ತು

July 15, 2019

ಬೆಂಗಳೂರು, ಜು.14-ಶನಿವಾರ ಇಡೀ ದಿನ ಕಸರತ್ತು ನಡೆಸಿ ಮನವೊಲಿಸಲ್ಪಟ್ಟಿದ್ದ ಹೊಸಕೋಟೆ ಶಾಸಕ ಬೆಳಗಾಗುವುದರೊಳಗೆ ಮುಂಬೈಗೆ ಹಾರಿದ್ದ ರಿಂದ ಮರ್ಮಾಘಾತಕ್ಕೊಳಗಾದ ಮೈತ್ರಿ ಪಕ್ಷದ ಮುಖಂಡರು ಸರ್ಕಾರ ಉಳಿಸಿಕೊಳ್ಳಲು ಕೊನೇ ಕಸರತ್ತಿಗೆ ಮುಂದಾಗಿದ್ದು, ಇಂದು ಶಾಸಕ ರಾಮ ಲಿಂಗಾ ರೆಡ್ಡಿ ಅವರ ಮನವೊಲಿಸಲು ಹರಸಾಹಸ ಪಟ್ಟರು. ಹಿರಿಯ ಮುಖಂಡ ರಾಮಲಿಂಗಾರೆಡ್ಡಿ ಯವರ ಮನವೊಲಿಸಿದರೆ ಬೆಂಗಳೂರಿನ ನಾಲ್ವರು ಶಾಸಕರು ಹಿಂತಿರುಗುತ್ತಾರೆ ಎಂಬ ವಿಶ್ವಾಸದಲ್ಲಿ ರುವ ಮೈತ್ರಿ ಮುಖಂಡರು ರೆಡ್ಡಿಯವರ ಮನ ವೊಲಿಕೆಗೆ ಇನ್ನಿಲ್ಲದ ಕಸರತ್ತು ನಡೆಸಿದರು. ಇಂದು ಬೆಳಿಗ್ಗೆ ಲಕ್ಕಸಂದ್ರದಲ್ಲಿರುವ ರಾಮ…

1 895 896 897 898 899 1,611
Translate »