ಮೈಸೂರು ಶೈಲಿ ನೃತ್ಯ ಪ್ರದರ್ಶನ ಕಾರ್ಯಾಗಾರ
ಮೈಸೂರು

ಮೈಸೂರು ಶೈಲಿ ನೃತ್ಯ ಪ್ರದರ್ಶನ ಕಾರ್ಯಾಗಾರ

July 16, 2019

ಮೈಸೂರು, ಜು.15(ಆರ್‍ಕೆಬಿ)- ಮೈಸೂರಿನ ಜೆ.ಪಿ.ನಗರ 2ನೇ ಹಂತದಲ್ಲಿರುವ ಕಲಾಶ್ರೀ ಕಲಾ ಮತ್ತು ಸಾಂಸ್ಕøತಿಕ ಕೇಂದ್ರದ ವತಿಯಿಂದ ಜು.20ರಿಂದ ಎರಡು ದಿನಗಳ ಮೈಸೂರು ಶೈಲಿ ನೃತ್ಯ ಪ್ರದರ್ಶನ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಅಂತಾರಾಷ್ಟ್ರೀಯ ನೃತ್ಯ ಹಾಗೂ ಯೋಗಪಟು ವಿದ್ವಾನ್ ಡಿ.ಕೇಶವ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 42 ವರ್ಷ ಗಳಿಂದ ವಿದೇಶದಲ್ಲಿ ಪಸರಿಸಿದ್ದ ಈ ನೃತ್ಯ ಕಲೆಗೆ ಮೈಸೂರಿ ನಲ್ಲಿಯೇ ಸೂಕ್ತ ಮನ್ನಣೆ ಇಲ್ಲದಿರುವುದನ್ನು ಮನಗಂಡು ಮೈಸೂರಿನಲ್ಲಿ ಈ ಕಾರ್ಯಾಗಾರ ಆಯೋಜಿಸಲಾಗಿದೆ. ಅಲ್ಲದೆ ಜು.20ರಂದು ಸಂಜೆ ತಮ್ಮ ನೃತ್ಯ ಪ್ರದರ್ಶನವೂ ಇದೆ. ಆಸಕ್ತ ವಿದ್ಯಾರ್ಥಿಗಳು ಮೊ- 9972351312 ಸಂಪರ್ಕಿಸಬಹುದು.

Translate »