ಮೈಸೂರು, ಜು.15(ಆರ್‍ಕೆಬಿ)- ರಾಜ್ಯ ರಾಜಕಾರಣ ಅಸಹ್ಯಕರವಾಗಿದ್ದು, ಕೂಡಲೇ ವಿಧಾನಸಭೆಯನ್ನು ವಿಸರ್ಜನೆ ಮಾಡಿ ಜನತೆಯ ತೀರ್ಪಿಗೆ ಹೋಗು ವುದು ಸೂಕ್ತ ಎಂದು ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ. ಎಲ್ಲಾ ಪಕ್ಷದವರ ನಡವಳಿಕೆಗಳು ನಾಚಿಕೆ ತರಿಸುವಂತಿದ್ದು, ಇವರೆಲ್ಲರೂ ಜನತಂತ್ರ ವ್ಯವಸ್ಥೆಯ ಗೌರವಕ್ಕೆ ಕುಂದು ತರುತ್ತಿದ್ದಾರೆ. ಮಾನ ಮರ್ಯಾದೆ ಇಲ್ಲದೇ ನಡೆದುಕೊಳ್ಳುತ್ತಾ ಇಡೀ ರಾಜ್ಯದ ಜನತೆ ತಲೆ ತಗ್ಗಿಸುವಂತೆ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ. ರಾಜ್ಯದ ರಾಜಕಾರಣ ಅತ್ಯಂತ ಕೀಳು ಮಟ್ಟಕ್ಕೆ ಹೋಗುತ್ತಿರುವುದನ್ನು ತಡೆಗಟ್ಟಲು ಚಾರಿತ್ರ್ಯವುಳ್ಳ ರಾಜಕೀಯ ವ್ಯಕ್ತಿಗಳು, ಸಮಾಜ ಚಿಂತಕರು ಎಲ್ಲಾ ಜನಪರ ಚಳವಳಿಗಾರರು ಗಂಭೀರ ವಾಗಿ ಆಲೋಚನೆ ಮಾಡಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.