ಜು.18ರಿಂದ ನವಕಲ್ಪನೋತ್ಸವ ನೃತ್ಯ ಸ್ಪರ್ಧೆ
ಮೈಸೂರು

ಜು.18ರಿಂದ ನವಕಲ್ಪನೋತ್ಸವ ನೃತ್ಯ ಸ್ಪರ್ಧೆ

July 16, 2019

ಮೈಸೂರು, ಜು.15(ಆರ್‍ಕೆಬಿ)- ಮೈಸೂರಿನ ನವಕಲ್ಪನಾ ಪಫಾರ್ಮಿಂಗ್ ಆಟ್ರ್ಸ್ ಸೆಂಟರ್‍ನ ವಾರ್ಷಿಕೋತ್ಸವ ಅಂಗವಾಗಿ ಮೈಸೂರಿನ ಪುರಭವನದಲ್ಲಿ ಜುಲೈ 18ರಿಂದ ಮೂರು ದಿನಗಳ `ನವಕಲ್ಪ ನೋತ್ಸವ’ ನೃತ್ಯ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಕಲಾವಿದ ಮೈಕ್ ಚಂದ್ರು ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದ ಅವರು, ಜು.18ರಂದು ಬೆಳಿಗ್ಗೆ ಜೂನಿಯರ್, ಮಧ್ಯಾಹ್ನ ಸೀನಿಯರ್ ವಿಭಾಗದ ಕ್ಲಾಸಿಕಲ್ ನೃತ್ಯ ಸ್ಪರ್ಧೆ ನಡೆಯಲಿದೆ. ಜು.19ರಂದು ಪಾಶ್ಚಿಮಾತ್ಯ ನೃತ್ಯ, ಜು.20ರಂದು ಕಲಾಮಂದಿರದಲ್ಲಿ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಶಾಸಕರಾದ ಎಸ್.ಎ.ರಾಮ ದಾಸ್, ಎಲ್.ನಾಗೇಂದ್ರ, ನೃತ್ಯ ನಿರ್ದೇಶಕ ಮೂಗೂರು ಸುಂದರಂ, ಚಲನಚಿತ್ರ ನೃತ್ಯ ನಿರ್ದೇಶಕ ಎ.ಹರ್ಷ ಭಾಗವಹಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಡಾ.ನಾಗೇಂದ್ರ, ಸಂಧ್ಯಾ, ಶ್ರೀಧರ್ ಉಪಸ್ಥಿತರಿದ್ದರು.

Translate »