ಮೈಸೂರು ವಿವಿ ಶತಮಾನೋತ್ಸವ ಘಟಿಕೋತ್ಸವಕ್ಕೆಪ್ರಧಾನಿ ಮೋದಿ ಅವರಿಗೆ ಆಹ್ವಾನ
ಮೈಸೂರು

ಮೈಸೂರು ವಿವಿ ಶತಮಾನೋತ್ಸವ ಘಟಿಕೋತ್ಸವಕ್ಕೆಪ್ರಧಾನಿ ಮೋದಿ ಅವರಿಗೆ ಆಹ್ವಾನ

July 17, 2019

ಮೈಸೂರು,ಜು.16(ಎಸ್‍ಬಿಡಿ)- ಮೈಸೂರು ವಿಶ್ವವಿದ್ಯಾನಿಲಯದ ಶತಮಾ ನೋತ್ಸವ ಘಟಿಕೋತ್ಸವಕ್ಕೆ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಲಾಗಿದೆ.

ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತ್‍ಕುಮಾರ್ ಅವರು ಸೋಮ ವಾರ ನವದೆಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ, 2020ರಲ್ಲಿ ಜರುಗುವ ವಿವಿಯ ಶತಮಾನೋತ್ಸವ ಘಟಿಕೋತ್ಸವಕ್ಕೆ ಸಾಕ್ಷಿಯಾಗಬೇಕೆಂಬ ಮನವಿಯೊಂದಿಗೆ ಅವರನ್ನು ಅಧಿಕೃತ ವಾಗಿ ಆಹ್ವಾನಿಸಿದರು.

ಸಂತಸದಿಂದಲೇ ಆಹ್ವಾನ ಸ್ವೀಕರಿಸಿದ ಮೋದಿ ಅವರು, ಕಾರ್ಯಕ್ರಮ ಕಾರ್ಯ ದೊತ್ತಡವನ್ನು ಪರಿಶೀಲಿಸಿ, ಘಟಿಕೋ ತ್ಸವಕ್ಕೆ ಆಗಮಿಸುವ ಸಾಧ್ಯತೆ ಬಗ್ಗೆ ಸದ್ಯ ದಲ್ಲೇ ಸ್ಪಷ್ಟಪಡಿಸುವುದಾಗಿ ತಿಳಿಸಿದರ ಲ್ಲದೆ, ಶತಮಾನೋತ್ಸವ ಪೂರೈಸಿರುವ ಮೈಸೂರು ವಿಶ್ವವಿದ್ಯಾನಿಲಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಪ್ರೊ.ಹೇಮಂತ್‍ಕುಮಾರ್ ಅವರು ವಿವಿ ಆರಂಭ, ನಡೆದು ಬಂದ ಹಾದಿ, ಕಾರ್ಯ ಚಟುವಟಿಕೆ ಬಗ್ಗೆ ಮಾಹಿತಿ ನೀಡಿದರು. ‘ಇನ್ಸಿಟಿಟ್ಯೂಟ್ ಆಫ್ ಎಮಿನೆನ್ಸ್ ಪ್ರಾಜೆಕ್ಟ್’ಗೆ ಮೈಸೂರು ವಿವಿಯನ್ನೂ ಪರಿಗಣಿಸುವಂತೆ ಮನವಿ ಮಾಡಿದರು. ಈ ಯೋಜನೆಯಡಿ ಈಗಾಗಲೇ ಅನೇಕ ವಿವಿಗಳಿಗೆ ಕೇಂದ್ರ ಸರಕಾರ ನೆರವು ನೀಡಿದೆ. ಹಾಗೆಯೇ ಮೈಸೂರು ವಿವಿ ಸಾವಿರ ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದ್ದು, ಅದನ್ನು ಮರು ಪರಿಶೀಲಿಸಿ ಅನುದಾನ ನೀಡುವಂತೆ ಕೋರಿಕೊಂಡರು. ಈ ಸಂದರ್ಭದಲ್ಲಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸಂಬಂಧಿಸಿದ ಕಾಫಿ ಟೇಬಲ್ ಬುಕ್ ಅನ್ನು ಪ್ರಧಾನಿ ಮೋದಿ ಅವರಿಗೆ ಪ್ರೊ.ಹೇಮಂತ್‍ಕುಮಾರ್ ನೀಡಿದರು. ಮೈಸೂರು-ಕೊಡಗು ಸಂಸದ ಪ್ರತಾಪಸಿಂಹ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಸಂಸದ ತೇಜಸ್ವಿ ಸೂರ್ಯ ಉಪಸ್ಥಿತರಿದ್ದರು.