ಮೈಸೂರಲ್ಲಿ 6 ದಿನ `ಸಿಲ್ಕ್ ಇಂಡಿಯಾ’ ರೇಷ್ಮೆ ಸೀರೆಗಳ ಮೇಳ
ಮೈಸೂರು

ಮೈಸೂರಲ್ಲಿ 6 ದಿನ `ಸಿಲ್ಕ್ ಇಂಡಿಯಾ’ ರೇಷ್ಮೆ ಸೀರೆಗಳ ಮೇಳ

July 18, 2019

ಮೈಸೂರು,ಜು.17(ವೈಡಿಎಸ್)-ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಹೋಟೆಲ್ ಸದರನ್ ಸ್ಟಾರ್‍ನಲ್ಲಿ ಜು.17ರಿಂದ 22ರವರೆಗೆ 6 ದಿನಗಳ ಕಾಲ ಪರಿಶುದ್ಧ ರೇಷ್ಮೇ ಸೀರೆಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳ `ಸಿಲ್ಕ್ ಇಂಡಿಯಾ-2019’ ಆಯೋಜಿಸಲಾಗಿದೆ.

ಹಸ್ತ ಶಿಲ್ಪಿ ವತಿಯಿಂದ ಆಯೋಜಿಸಿರುವ ಮೇಳದಲ್ಲಿ ಕಾಶ್ಮೀರದಿಂದ ಕಾಂಚಿಪುರಂವರೆಗಿನ ರೇಷ್ಮೆ ಸೀರೆ ಉತ್ಪಾದಕರು, ರೇಷ್ಮೆ ಸೀರೆ ವಿನ್ಯಾಸಗಾರರು ಮತ್ತು ರೇಷ್ಮೆ ಸಹಕಾರ ಸಂಘಗಳು ಭಾಗವಹಿಸಿದ್ದು, 60ಕ್ಕೂ ಹೆಚ್ಚು ಮಳಿಗೆಗಳಲ್ಲಿ ತಮ್ಮ ರಾಜ್ಯಗಳ ಸಾಂಪ್ರದಾಯಿಕ ರೇಷ್ಮೆ ಸೀರೆ ಮತ್ತು ಉತ್ಪನ್ನಗಳ ಪ್ರದರ್ಶಿಸಿ ಮಾರಾಟ ಮಾಡಲಿದ್ದಾರೆ.

ಮೇಳದಲ್ಲಿ ತಸ್ಸರ್ ರೇಷ್ಮೆ ಸೀರೆಗಳು, ಕ್ರೇಪ್ ಮತ್ತು ಜಾರ್ಜೆಟ್ ಸಿಲ್ಕ್ ಸೀರೆಗಳು, ಅರಿಣಿ ರೇಷ್ಮೆ ಸೀರೆಗಳು, ಧರ್ಮಾವರಂ ಸೀರೆಗಳು, ಕಾಂಚಿಪುರಂ ಸಿಲ್ಕ್ ಮತ್ತು ಮದುವೆ ಸೀರೆಗಳು, ರಾ ಸಿಲ್ಕ್ ಮತ್ತು ಕೋಸಾ ಸೀರೆಗಳು, ಕೋಲ್ಕತಾ ಗಣಪತಿ ಸೀರೆಗಳು, ಢಾಕಾ ಸೀರೆಗಳು, ಡಿಸೈ ನರಿ ಎಂಬ್ರಾಯಿಡರಿ ಸೀರೆ ಮತ್ತು ಡ್ರೆಸ್, ಬಲ್‍ಚೂರಿ, ರೇಷ್ಮೆ, ಮಟ್ಕಾ ಸೀರೆಗಳು, ಪ್ರಿಂಟೆಡ್ ಸೀರೆಗಳು, ಪಶ್ಮೀನಾ ಸೀರೆಗಳು, ಡಿಸೈನರಿ ಡ್ರೆಸ್ ಮೆಟೀರಿಯಲ್ಸ್‍ಗಳು ಮತ್ತು ಸೀರೆಗಳು, ಬಾಗಲ್‍ಪುರ್ ರೇಷ್ಮೆ ಸೀರೆ ಮತ್ತು ಡ್ರೆಸ್, ಉಪ್ಪಡಾ ಮತ್ತು ಗೊಡ್ವಾಲ್ ಸೀರೆಗಳು, ಮಹೇಶ್ವರಿ ಮತ್ತು ಕೋಟಾ ಸಿಲ್ಕ್, ಟೆಂಪಲ್ ಬಾರ್ಡರ್ ಉಳ್ಳ ಮುಲ್‍ಬಾರಿ ಸಿಲ್ಕ್, ಕೊಲ್ಕತ್ತಾ ರೇಷ್ಮೆ ಸೀರೆಗಳು ಲಭ್ಯವಿವೆ. 1200 ರೂ.ನಿಂದ 1,70 ಲಕ್ಷ ರೂ. ವರೆಗಿನ ರೇಷ್ಮೆ ಸೀರೆಗಳು ಲಭ್ಯವಿದ್ದು, ಪ್ರತಿ ದಿನ ಬೆಳಿಗ್ಗೆ 10.30ರಿಂದ ರಾತ್ರಿ 8.30ರವರೆಗೆ ತೆರೆದಿರುತ್ತದೆ. ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಬಿ.ಸಿ.ಪರಿಮಳ ಶ್ಯಾಂ ಅವರು ಸಿಲ್ಕ್ ಇಂಡಿಯಾ ಮೇಳಕ್ಕೆ ಚಾಲನೆ ನೀಡಿದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ಮಂಗಳ ಸೋಮಶೇಖರ್, ಚಂದ್ರಿಕಾ, ವ್ಯವಸ್ಥಾಪಕ ನಿರ್ದೇಶಕ ಟಿ.ಅಭಿನಂದ ಮತ್ತಿತರರು ಉಪಸ್ಥಿತರಿದ್ದರು.

Translate »