ಮೈಸೂರು ಅಪೋಲೋ ಆಸ್ಪತ್ರೆಯಿಂದ ಚೆನ್ನೈಗೆ ವಿಮಾನದಲ್ಲಿ ಹೃದಯ, ಶ್ವಾಸಕೋಶ ರವಾನೆ
ಮೈಸೂರು

ಮೈಸೂರು ಅಪೋಲೋ ಆಸ್ಪತ್ರೆಯಿಂದ ಚೆನ್ನೈಗೆ ವಿಮಾನದಲ್ಲಿ ಹೃದಯ, ಶ್ವಾಸಕೋಶ ರವಾನೆ

July 18, 2019

ಸಂಚಾರ ಪೊಲೀಸರಿಂದ ಝೀರೋ ಟ್ರಾಫಿಕ್ ವ್ಯವಸ್ಥೆ
ಮೈಸೂರು: ಮೈಸೂರಿನಿಂದ ತಮಿಳುನಾಡಿನ ಚೆನ್ನೈಗೆ ಜೀವಂತ ಹೃದಯ ಮತ್ತು ಶ್ವಾಸಕೋಶವನ್ನು ಬುಧವಾರ ಸಂಜೆ ರವಾನಿಸಲಾಯಿತು.ಮೈಸೂರಿನ ಅಪೋಲೋ ಆಸ್ಪತ್ರೆಯಿಂದ ಜೀವಂತ ಹೃದಯವನ್ನು ತಮಿಳುನಾಡಿನ ಚೆನ್ನೈಗೆ ರವಾನಿಸಲು ಪೆÇಲೀಸರು ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿದ್ದರು.

ಮಂಡ್ಯ ಮೂಲದ ವ್ಯಕ್ತಿಯೊಬ್ಬರು ವಾಯುವಿಹಾರಕ್ಕೆ ಹೋಗಿದ್ದಾಗ ಅಪಘಾತ ವಾಗಿ ಜು.16ರಂದು ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಬ್ರೈನ್ ಇಂಜುರಿ ಯಾಗಿ ಬದುಕುಳಿಯುವುದು ಕಷ್ಟಸಾಧ್ಯ ವಾಗಿತ್ತು. ಆದರೆ, ಕುಟುಂಬಸ್ಥರು ಅಂಗಾಂಗ ದಾನ ಮಾಡಲು ಒಪ್ಪಿಗೆ ಸೂಚಿಸಿದರು. ಈ ಹಿನ್ನೆಲೆಯಲ್ಲಿ ಅಪೋಲೋ ಆಸ್ಪತ್ರೆಯಿಂದ ಹೃದಯ ಮತ್ತು ಶ್ವಾಸಕೋಶವನ್ನು ಆ್ಯಂಬುಲೆನ್ಸ್ ಮೂಲಕ ಝೀರೋ ಟ್ರಾಫಿಕ್‍ನಲ್ಲಿ ನ್ಯೂ ಕಾಂತರಾಜ ಅರಸು ರಸ್ತೆ ಕೆ.ಜಿ.ಕೊಪ್ಪಲು, ಬಲ್ಲಾಳ್ ವೃತ್ತ, ಚಾಮುಂಡಿಪುರಂ ವೃತ್ತ, ಎಲೆತೋಟ, ಊಟಿ ರಸ್ತೆ ಮೂಲಕ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ರವಾನಿಸಲಾಯಿತು. ಅಲ್ಲಿಂದ ವಿಮಾನದ ಮೂಲಕ ಚೆನ್ನೈಗೆ ರವಾನಿಸಲಾಯಿತು.

Translate »