ಚಿಂತನೆಯ ದಾರಿದ್ರ್ಯದಿಂದಾಗಿ ಶಿಕ್ಷಣ ಚರ್ಚೆಯಲ್ಲಿ ಹಿನ್ನಡೆ
ಮೈಸೂರು

ಚಿಂತನೆಯ ದಾರಿದ್ರ್ಯದಿಂದಾಗಿ ಶಿಕ್ಷಣ ಚರ್ಚೆಯಲ್ಲಿ ಹಿನ್ನಡೆ

July 18, 2019

ಮೈಸೂರು,ಜು.17(ಆರ್‍ಕೆಬಿ)-ನಮ್ಮ ಲ್ಲಿರುವ ಚಿಂತನೆಯ ದಾರಿದ್ರ್ಯದಿಂದಾಗಿ ಶಿಕ್ಷಣದ ಚರ್ಚೆಯಲ್ಲಿ ನಾವು ಹಿಂದುಳಿ ದಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ ಅಭಿಪ್ರಾಯಪಟ್ಟರು.

ಮೈಸೂರು ವಿವಿ ಮಾನಸಗಂಗೋತ್ರಿಯ ಕಾನೂನು ಶಾಲೆ ಸಭಾಂಗಣದಲ್ಲಿ ಬುಧ ವಾರ `ರಾಷ್ಟ್ರೀಯ ಶಿಕ್ಷಣ ನೀತಿ-2019’ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದ ಶಿಕ್ಷಣದ ಇತಿಹಾಸ ನೋಡಿ ದರೆ ನಾವು ಶೈಕ್ಷಣಿಕವಾಗಿ ಹಿಂದುಳಿದಿ ರುವುದು ಕಾಣುತ್ತದೆ. ಶಿಕ್ಷಣ ನೀತಿಯನ್ನು ಒಂದಲ್ಲ, ಹತ್ತಾರು ಬಾರಿ ಓದಿ ಮನನ ಮಾಡಿಕೊಳ್ಳಬೇಕು ಎಂದರು.

ಶಿಕ್ಷಣ ನೀತಿಯ ಬಗ್ಗೆ ನಿಖರ ಸಲಹೆ ಗಳನ್ನು ನೀಡಬೇಕು. 6ನೇ ವಯಸ್ಸಿನವ ರೆಗೂ ಮಗುವಿಗೆ ಔಪಚಾರಿಕ ಶಿಕ್ಷಣ ನೀಡು ವಂತಿಲ್ಲ. ಎನ್.ಮಹೇಶ್ ಪ್ರಾಥಮಿಕ ಶಿಕ್ಷಣ ಸಚಿವರಾಗಿದ್ದಾಗ ಬಜೆಟ್ ಪುಸ್ತಕದಲ್ಲಿ ಸರ್ಕಾರಿ ಶಾಲೆಗಳಲ್ಲಿ ಎಲ್‍ಕೆಜಿ, ಯುಕೆಜಿ ಆರಂಭಿಸಲಾಗುವುದು ಎಂದು ಹೇಳಿದ್ದರು. ಹಾಗಾದರೆ ಮಾಂಟೆಸ್ಸರಿ ಮಾಡೆಲ್ ಆರಂ ಭಿಸುತ್ತೀರಾ? ಎಂದು ನಾನು ಸದನದಲ್ಲಿ ಮುಖ್ಯಮಂತ್ರಿಗಳನ್ನು ಪ್ರಶ್ನಿಸಿದ್ದೆ. ನಿಮ್ಮ ಅಧಿಕಾರಿಗಳಿಗೆ ಎಲ್‍ಕೆಜಿ, ಯುಕೆಜಿ, ಪ್ರೀ ಪ್ರೈಮರಿಯ ವ್ಯತ್ಯಾಸವೇ ಗೊತ್ತಿಲ್ಲವೇ? ಎಂದು ಸಹ ಪ್ರಶ್ನಿಸಿದ್ದೇ ಎಂದು ಹೇಳಿದರು.

ಮಕ್ಕಳ ಮೆದುಳಿನ ಬೆಳವಣಿಗೆ ಐದು ವರ್ಷದವರೆಗೆ ಬೇಗ ಆಗುತ್ತದೆ. 3ನೇ ವಯ ಸ್ಸಿನಿಂದ ಶಿಕ್ಷಣ ಆರಂಭಿಸಬೇಕು ಎಂಬ ಹೊಸ ಅಂಶವನ್ನು ಶಿಕ್ಷಣ ನೀತಿ ಹೊಂದಿದೆ. 3ನೇ ತರಗತಿಯಿಂದ ಮಕ್ಕಳಿಗೆ ಅಕ್ಷರಾ ಭ್ಯಾಸ, ಅಂಕೆಗಳನ್ನು ಬರೆಯಲು ಬರಬೇಕು. ಈ ಬಗ್ಗೆ ಚರ್ಚೆ ಆಗಬೇಕು ಎಂದರು.

ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸಂವಾದದಲ್ಲಿನ ಉತ್ತಮ ವಿಚಾರಗಳನ್ನು ಸರ್ಕಾರದ ಮುಂದಿಡ ಬೇಕು. ಶೈಕ್ಷಣಿಕ ಸರ್ವತೋಮುಖ ಅಭಿ ವೃದ್ಧಿಗೆ ಯೋಜನೆ ರೂಪಿಸಬೇಕು ಎಂದು ಸಲಹೆ ನೀಡಿದರು. ದೆಹಲಿಯ ಅಖಿಲ ಭಾರತ ರಾಷ್ಟ್ರೀಯ ಶೈಕ್ಷಿಕ್ ಮಹಾಸಂಘ (ಎಬಿಆರ್‍ಎಸ್‍ಎಂ)ದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಸಿಂಧನಕೇರಾ, ಕಾನೂನು ಶಾಲೆಯ ನಿರ್ದೇಶಕ ಪ್ರೊ.ಸಿ. ಬಸವರಾಜು, ಸಿಂಡಿಕೇಟ್ ಸದಸ್ಯ ಲಿಂಗ ರಾಜು, ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ವಿಶ್ವನಾಥ್, ಕರ್ನಾಟಕ ರಾಜ್ಯ ಮಹಾವಿದ್ಯಾ ಲಯ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೊ.ಜಿ.ಸಿ.ರಾಜಣ್ಣ ಇದ್ದರು.

Translate »