ಹನಿ ನೀರು ಉಳಿಸಿ ಜೀವಜಲ ಸಂರಕ್ಷಿಸಿ: ಡಿಸಿ
ಹಾಸನ

ಹನಿ ನೀರು ಉಳಿಸಿ ಜೀವಜಲ ಸಂರಕ್ಷಿಸಿ: ಡಿಸಿ

July 18, 2019

ಅರಸೀಕೆರೆಯಲ್ಲಿ ಜಲಸಂರಕ್ಷಣೆ ಯೋಜನೆ ಅರಿವು ಜಾಥಾಕ್ಕೆ ಚಾಲನೆ ನೀಡಿದ ಅಕ್ರಂ ಪಾಷ
ಅರಸೀಕೆರೆ, ಜು.17- `ಜಲ ಸಂರಕ್ಷಣೆ’ ಅಂದೋ ಲನ ಕೇಂದ್ರ ಸರ್ಕಾರದ ಮಹತ್ವದ ಯೋಜನೆ. ಇದರ ಅನುಷ್ಠಾನಕ್ಕೆ ತಾಲೂಕಿನ ಎಲ್ಲಾ ಇಲಾಖೆ ಗಳ ಅಧಿಕಾರಿಗಳು, ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಕೈ ಜೋಡಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಅರಿವು ಮೂಡಿ ಸುವ ಮೂಲಕ ಅಂತರ್ಜಲ ವೃದ್ಧಿಗೆ ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಅಕ್ರಂಪಾಷ ಕರೆ ನೀಡಿದರು.

ನಗರದ ಹಳೇ ಸರ್ಕಾರಿ ಮಾಧ್ಯಮಿಕ ಪಾಠ ಶಾಲೆ ಆವರಣದಿಂದ ತಾಲೂಕು ಮಟ್ಟದ ಜಲಶಕ್ತಿ ಅಭಿಯಾನ ಜಾಥಾಕ್ಕೆ ಡಿಸಿ ಚಾಲನೆ ನೀಡಿದ ಬಳಿಕ ನಗರದ ಪ್ರಮುಖ ರಸ್ತೆಗಳಲ್ಲಿ ಸ್ತ್ರೀಶಕ್ತಿ ಸಂಘ ಗಳು, ಅಧಿಕಾರಿಗಳು, ವಿವಿಧ ಶಾಲಾ ಕಾಲೇಜು ಗಳ ಸಾವಿರಾರು ವಿದ್ಯಾರ್ಥಿಗಳು ತಾಲೂಕು ಕಚೇರಿ ಮೂಲಕ ಸಾಗುತ್ತಾ ಜಲಸಂರಕ್ಷಣೆ ಬಗ್ಗೆ ಜನರಲ್ಲಿ ಅರಿವು ಮೂಡಿಸಿದರು.

ಇದೇ ಸಮಯದಲ್ಲಿ ಪಿಪಿ ವೃತ್ತದಲ್ಲಿ ಬೃಹತ್ ಮಾನವ ಸರಪಳಿ ಮೂಲಕ ಜಾಗೃತಿ ಮೂಡಿ ಸಿದ ಸ್ಥಳದಲ್ಲಿ ಜಿಲ್ಲಾಧಿಕಾರಿ ಮಾತನಾಡಿ, ಪಂಚ ಸೂತ್ರದಡಿಯ ಯೋಜನೆ ಇದಾಗಿದೆ. ಮಳೆ ನೀರು ಸಂಗ್ರಹಣೆಗೆ ಒತ್ತು ನೀಡುವುದರಿಂದ ಪ್ರತಿ ಹನಿ ನೀರು ವ್ಯರ್ಥವಾಗದಂತೆ ಬಳಸಿ ಜಲ ಸಂರಕ್ಷಣೆ ಮಾಡುವುದರೊಂದಿಗೆ ಅತಿಯಾದ ನೀರಿನ ಬಳಕೆ ನಿಯಂತ್ರಿಸುವುದು ಮತ್ತು ಮುಂದಿನ ಪೀಳಿಗೆಗೆ ನೀರಿನ ಲಭ್ಯತೆ ಯನ್ನು ಉಳಿಸುವುದೇ ಈ ಜಾಗೃತಿ ಮತ್ತು ಆಂದೋಲನದ ಮೂಲ ಉದ್ದೇಶ ಎಂದರು.

ಕೇಂದ್ರ ಸರ್ಕಾರ ಅಂತರ್ಜಲ ವೃದ್ಧಿಗಾಗಿ 2019-20ನೇ ಸಾಲಿನಿಂದ ಜಲಶಕ್ತಿ ಅಭಿಯಾನ ಆರಂಭಿಸಿದೆ. ರಾಜ್ಯ ಸರಕಾರ ಜಲವರ್ಷ ಘೋಷಣೆ ಮಾಡಿದೆ. ಕೇಂದ್ರ ಸರಕಾರ ದೇಶದ 250 ಜಿಲ್ಲೆ ಗಳನ್ನು ಈ ಯೋಜನೆಗಾಗಿ ಗುರುತಿಸಿದೆ. ಕರ್ನಾಟಕದಲ್ಲಿ 19 ಜಿಲ್ಲೆಗಳ 59 ಬ್ಲಾಕ್‍ಗಳನ್ನು ಈ ಯೋಜನೆ ಅನುಷ್ಠಾನಕ್ಕೆ ಆಯ್ಕೆ ಮಾಡಿದೆ. ಹಾಸನ ಜಿಲ್ಲೆಯಲ್ಲಿ ಅರಸೀಕೆರೆ ಮತ್ತು ಚನ್ನ ರಾಯಪಟ್ಟಣ ತಾಲೂಕನ್ನು 2 ಬ್ಲಾಕ್‍ಗಳಾಗಿ ವಿಂಗಡಿಸಲಾಗಿದೆ. ಆ ಮೂಲಕ ನರೇಗಾ, ಅರಣ್ಯ ಇಲಾಖೆ, ಕೃಷಿ, ತೋಟಗಾರಿಕೆ, ತಾ.ಪಂ. ಶಿಕ್ಷಣ ಇಲಾಖೆಗಳ ಮೂಲಕ ಯೋಜನೆಗಳನ್ನು ರೂಪಿಸಿ ಅಂತರ್ಜಲ ಅಭಿವೃದ್ಧಿಗೆ 2 ತಿಂಗಳಲ್ಲಿ ಗುರಿ ಮುಟ್ಟಲು ಪ್ರತಿ ಇಲಾಖಾ ಅಧಿಕಾರಿಗಳು ಶ್ರಮಿಸ ಬೇಕಿದೆ. 2 ತಿಂಗಳಲ್ಲಿ ಈ ಯೋಜನೆ ಕಾರ್ಯ ಗತವಾಗಬೇಕು. ಜಿಲ್ಲೆಯ ಅಧಿಕಾರಿಗಳು ಸಾಮೂ ಹಿಕವಾಗಿ ಶ್ರಮವಹಿಸಿ ಅಂತರ್ಜಲ ಮತ್ತು ಪರಿಸರ ಸಂರಕ್ಷಣೆಗಾಗಿ ಉತ್ತಮ ಸೇವೆ ಮತ್ತು ಜಾಗೃತಿ ಮೂಡಿಸಿದ ಪರಿಣಾಮ ಇಂದು ನಮ್ಮ ಹಾಸನ ಜಿಲ್ಲೆ ರಾಷ್ಟ್ರದಲ್ಲಿಯೇ ಪ್ರಥಮ ರ್ಯಾಂಕ್ ಪಡೆಯಲು ಸಾಧ್ಯವಾಗಿದೆ ಎಂದು ಹೇಳಿದರು.

ನೂರಾರು ವರ್ಷಗಳಿಂದಲೂ ಕೆರೆ, ಕಲ್ಯಾಣಿ ಗಳು ನೀರನ್ನು ಒದಗಿಸುವ ಮೂಲಕ ಜನರ ಜೀವನಾಡಿಯಾಗಿದ್ದವು. ಇಂತಹ ಮೂಲ ನೀರಿನ ಸೆಲೆಗಳು ಇತ್ತೀಚೆಗೆ ಕಣ್ಮರೆಯಾಗಿವೆ. ಇವುಗಳನ್ನು ಹುಡುಕಿ ಪುನಶ್ಚೇತನಗೊಳಿಸುವುದು ಅಗತ್ಯ ಎಂದರು. ಉತ್ತಮ ಮಳೆ ಬರಲು ಯಾವುದೇ ಪ್ರದೇಶದಲ್ಲಿ ಶೇ.32ರಷ್ಟು ಅರಣ್ಯ ಪ್ರದೇಶವಿರಬೇಕು. ಸದ್ಯ ರಾಜ್ಯದಲ್ಲಿ ಕೇವಲ ಶೇ.12ರಷ್ಟು ಅರಣ್ಯವಿದ್ದು ಪರಿಸರದ ಸಮ ತೋಲನ ಇಲ್ಲವಾಗಿದೆ. ಹಾಗಾಗಿ ಅರಣ್ಯ ಇಲಾಖೆಯ ಆಶ್ರಯದಲ್ಲಿ ಪ್ರತಿ ಊರಿನಲ್ಲಿ ಸಸಿ ಗಳನ್ನು ನೆಟ್ಟು ಅರಣ್ಯ ಬೆಳೆಸಲು ಯೋಜನೆ ರೂಪಿ ಸಿದೆ. ಜಿಲ್ಲೆಯಲ್ಲಿ 5 ಲಕ್ಷ ಸಸಿಗಳನ್ನು ನೆಡಿಸುವ ಗುರಿ ಇದೆ. ತಾಲೂಕಿನಲ್ಲಿ ಸಾವಿರ ಅಡಿ ಬೋರ್ ವೆಲ್ ಕೊರೆಸಿದರೂ ನೀರು ಸಿಗದಂತಾಗಿದೆ. ಮಳೆ ನೀರು ಸಂಗ್ರಹಣೆ, ಚೆಕ್‍ಡ್ಯಾಂ, ಇಂಗು ಗುಂಡಿ ನಿರ್ಮಾಣ ಮಾಡಲು ಯೋಜನೆ ರೂಪಿಸ ಬೇಕು. ಈ ಕಾರ್ಯದಲ್ಲಿ ಸ್ವಯಂಸೇವಾ ಸಂಸ್ಥೆ ಗಳು ಮತ್ತು ಸ್ವಯಂ ಸೇವಕರು ಕೈ ಜೋಡಿಸಲಿ ಎಂದು ಮನವಿ ಮಾಡಿದರು.

ಸರ್ಕಾರವು ಎಷ್ಟೇ ಯೋಜನೆಗಳನ್ನು ಅನು ಷ್ಠಾನಕ್ಕೆ ತಂದರೂ ಅದರ ಯಶಸ್ಸಿಗೆ ಸ್ವಯಂ ಸೇವಾ ಸಂಸ್ಥೆಗಳು ಮತ್ತು ಜನಸಾಮಾನ್ಯರ ಪಾತ್ರ ಅತೀ ಮುಖ್ಯ. ಇಂತಹ ಯೋಜನೆಗಳಿಗೆ ನಾಗರಿಕ ಸಮಾಜ ಕೈಜೋಡಿಸಿದಾಗಲಷ್ಟೇ ಯಶಸ್ಸು ಕಾಣಲು ಸಾಧ್ಯ. ಇಂತಹ ಯೋಜನೆಗಳ ಅನುಷ್ಠಾನ ದಲ್ಲಿ ವಿದ್ಯಾರ್ಥಿಗಳ ಪಾತ್ರ ಮುಖ್ಯ ಎಂದರು.

ಪಿಡಿ ಕೃಷ್ಣಮೂರ್ತಿ, ತಹಸಿಲ್ದಾರ್ ಸಂತೋಷ್ ಕುಮಾರ್, ಗ್ರೇಡ್- 2 ತಹಸಿಲ್ದಾರ್ ಪಾಲಾಕ್ಷ, ನಗರಸಭೆ ಪೌರಾಯುಕ್ತ ಪರಮೇಶ್ವರಪ್ಪ, ಮೊದಲಿ ಯಾರ್, ಡಿವೈಎಸ್‍ಪಿ ಸದಾನಂದ ತಿಪ್ಪಣ್ಣನವರ್, ಬಿಇಓ ಮೋಹನ್‍ಕುಮಾರ್, ಆರೋಗ್ಯ ಇಲಾಖೆ ನಾಗಪ್ಪ, ಶಿಕ್ಷಕರು, ಸಾವಿರಾರು ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸಿದ್ದರು.

‘ಜನರನ್ನು ಅಲೆದಾಡಿಸದಿರಿ’
ಸರ್ಕಾರಿ ಯೋಜನೆಗಳ ಸೌಲಭ್ಯಗಳನ್ನು ಸಕಾಲದಲ್ಲಿ ಫಲಾನುಭವಿಗಳಿಗೆ ಒದಗಿಸಿ. ಜನಸಾಮಾನ್ಯರನ್ನು ಅನಗತ್ಯವಾಗಿ ಕಚೇರಿಗೆ ಅಲೆದಾಡಿಸಬೇಡಿ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಜಾವಗಲ್‍ನಲ್ಲಿಂದು ಕಂದಾಯ ಅದಾಲತ್ ಹಾಗೂ ಕುಂದುಕೊರತೆ ಸಭೆ ನಡೆಸಿದ ಅವರು, ಸರ್ಕಾರದ ಜನಪರ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ, ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ. ಸಾಮಾಜಿಕ ಭದ್ರತಾ ಯೋಜನೆಗಳ ಸೌಲಭ್ಯ ಪಡೆಯಲು ಅರ್ಹ ಫಲಾನುಭವಿಗಳು ಕಂದಾಯ ಇಲಾಖೆಗೆ ಸುತ್ತುವಂತಾಗಬಾರದು. ಅದರ ಬದಲು ಗ್ರಾಮಲೆಕ್ಕಿಗರು, ಗ್ರಾಮ ಸಹಾಯಕರು, ಕಂದಾಯ ಪರಿವೀಕ್ಷಕರು, ಗ್ರಾಮ ಪಂಚಾಯಿತಿ ಅಧಿಕಾರಿಗಳೇ ಮುಂದಾಗಿ ಫಲಾನುಭವಿಗಳನ್ನು ಗುರುತಿಸಿ ಅವರ ಮನೆ ಬಾಗಿಲಿಗೇ ಸೌಲಭ್ಯ ಒದಗಿಸುವಂತಾಗಬೇಕು ಎಂದರು.

ಪ್ರತಿ ಹನಿ ನೀರನ್ನೂ ಉಳಿಸುವ ಮೂಲಕ ಜೀವಜಲ ಸಂರಕ್ಷಿಸೋಣ. ಆ ಮೂಲಕ ಮುಂದಿನ ಪೀಳಿಗೆಯನ್ನು ಬರ ಮುಕ್ತವನ್ನಾಗಿ ಸೋಣ. ಅರಸೀಕೆರೆ, ಚನ್ನರಾಯಪಟ್ಟಣ ತಾಲೂಕುಗಳಲ್ಲಿ ಅಂತರ್ಜಲ ಮಟ್ಟ ಕುಸಿ ದಿದ್ದು, ಜಲಶಕ್ತಿ ಯೋಜನೆ ಜಾರಿ ಮೂಲಕ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಮುಖ್ಯವಾಗಿ ವಿದ್ಯಾರ್ಥಿಗಳು ಜಲಸಂರಕ್ಷಣಾ ಕಾರ್ಯದಲ್ಲಿ ತೊಡಗಬೇಕು. ಪೋಷಕರಿಗೆ ಹಾಗೂ ಸುತ್ತಲಿನ ಜನರಿಗೆ ನೀರಿನ ಮಹತ್ವದ ಬಗ್ಗೆ ತಿಳಿಸಿಕೊಡಬೇಕು. ನೀರು ಪೋಲಾಗುವುದನ್ನು ತಡೆಯಬೇಕು.
– ಅಕ್ರಂ ಪಾಷ, ಜಿಲ್ಲಾಧಿಕಾರಿ

Translate »