ಗ್ರಾಮ ಲೆಕ್ಕಾಧಿಕಾರಿಗಳಿಂದ ಲೇಖನಿ ಸ್ಥಗಿತ; ಬೇಡಿಕೆ ಈಡೇರಿಕೆಗೆ ಆಗ್ರಹ
ಹಾಸನ

ಗ್ರಾಮ ಲೆಕ್ಕಾಧಿಕಾರಿಗಳಿಂದ ಲೇಖನಿ ಸ್ಥಗಿತ; ಬೇಡಿಕೆ ಈಡೇರಿಕೆಗೆ ಆಗ್ರಹ

July 18, 2019

ಹಾಸನ, ಜು.17- ನಮ್ಮದು ನ್ಯಾಯ ಸಮ್ಮತ ಬೇಡಿಕೆಗಳು. ಅವನ್ನು ತಕ್ಷಣ ಈಡೇರಿಸಿ ಎಂದು ಒತ್ತಾಯಿಸಿ ಗ್ರಾಮ ಲೆಕ್ಕಾಧಿಕಾರಿಗಳು ಬುಧವಾರ ಲೇಖನಿ ಸ್ಥಗಿತಗೊಳಿಸಿ 1 ದಿನದ ಸಾಂಕೇತಿಕ ಮುಷ್ಕರ ನಡೆಸಿದರು. ಬಳಿಕ ಅಪರ ಜಿಲ್ಲಾಧಿಕಾರಿ ವೈಶಾಲಿ ಅವರಿಗೆ ಮನವಿಪತ್ರ ಸಲ್ಲಿಸಿದರು.

ಗ್ರಾಮ ಸಹಾಯಕರ ಹುದ್ದೆ ಖಾಯಂ ಗೊಳಿಸುವ ಭರವಸೆಯನ್ನು ಈವರೆಗೂ ಈಡೇರಿಸಿಲ್ಲ. ಬೇರೆ ಇಲಾಖೆಗಳ ಕೆಲಸ ಗಳನ್ನು ವಹಿಸುವುದನ್ನು ನಿಷೇಧಿಸಿ ಸರ ಕಾರ ಆದೇಶ ಹೊರಡಿಸಿದ್ದರೂ ಹಲವು ಜಿಲ್ಲೆಗಳಲ್ಲಿ ರಜಾ ದಿನಗಳಲ್ಲಿಯೂ ಕೆಲಸ ಮಾಡಿಸಲಾಗುತ್ತಿದೆ. ಇದರಿಂದ ರಜೆ ದಿನ ಕುಟುಂಬದ ಜತೆ ಕಾಲ ಕಳೆಯಲಾಗದೇ ಸಮಸ್ಯೆಯಾಗುತ್ತಿದೆ. ಇದರಿಂದ ಮನಃ ಪೂರ್ವಕವಾಗಿ ಇಲಾಖೆಯ ಕೆಲಸ ಮಾಡಲು ಕಷ್ಟವಾಗುತ್ತಿದೆ. ರಜೆ ದಿನಗಳ ಲ್ಲಿಯೂ ಕೆಲಸ ಹೇರುವುದನ್ನು ತಪ್ಪಿಸಿ. ಜಾಬ್ ಚಾರ್ಟ್ ಪರಿಷ್ಕರಿಸಿ ಎಂದು ಆಗ್ರಹಿಸಿದ್ದಾರೆ.

ಗ್ರಾಮಲೆಕ್ಕಾಧಿಕಾರಿ ಮುಂಬಡ್ತಿಯಲ್ಲಿ ನಿರಂತರ ಅನ್ಯಾಯವಾಗುತ್ತಿದ್ದು, ಸರಿ ಪಡಿಸಬೇಕು. ದ್ವಿತೀಯ ದರ್ಜೆ ಸಹಾ ಯಕ ಮತ್ತು ಗ್ರಾಮ ಲೆಕ್ಕಿಗರ ಜೇಷ್ಠತೆ ಒಟ್ಟುಗೂಡಿಸಿ ಪದವಿ ನವೀಕರಿಸಬೇಕು. ಗ್ರಾಮ ಲೆಕ್ಕಾಧಿಕಾರಿ ಪ್ರಯಾಣ ಭತ್ಯೆ ಯನ್ನು 1 ಸಾವಿರ ರೂ.ಗೆ ಹೆಚ್ಚಿಸಲು ಕಂದಾಯ ಇಲಾಖೆ ಪ್ರಧಾನ ಕಾರ್ಯ ದರ್ಶಿಗಳೇ ತೀರ್ಮಾನಿಸಿದ್ದರೂ ಅದು ಜಾರಿಯಾಗಲಿಲ್ಲ. ಸರಕಾರ 300 ರೂ. ಇದ್ದ ಭತ್ಯೆಯನ್ನು 500 ರೂ.ಗೆ ಹೆಚ್ಚಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮರಳು ದಂಧೆಕೋರರು ಲಾರಿ ಹರಿಸಿ ಸಾಯಿಸಿದ ಗ್ರಾಮಲೆಕ್ಕಾಧಿಕಾರಿ ಸಾಹೇಬ ಪಾಟೀಲ್ ಅವರ ಕುಟುಂಬಕ್ಕೆ ವಿಶೇಷ ಪರಿಹಾರಧನ ಮಂಜೂರು ಮಾಡಿಲ್ಲ. ಕೂಡಲೇ 20 ಲಕ್ಷ ರೂ. ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.

ಇಂದು ಎಲ್ಲಾ ಜಿಲ್ಲೆಗಳಲ್ಲಿಯೂ ಗ್ರಾಮ ಲೆಕ್ಕಾಧಿಕಾರಿಗಳು ಲೇಖನಿ ಸ್ಥಗಿತಗೊಳಿಸಿ ಡಿಸಿ ಕಚೇರಿ ಮುಂದೆ ಸಾಂಕೇತಿಕ ಮುಷ್ಕರ ನಡೆಸಿದ್ದಾರೆ. ಬೇಡಿಕೆ ಈಡೇರಿಸ ದಿದ್ದರೇ ಮುಂದೆ ಬೆಂಗಳೂರಿನಲ್ಲಿ ಕುಟುಂಬ ಸಮೇತರಾಗಿ ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಈ ಸಂದರ್ಭ ರಾಜ್ಯ ಗ್ರಾಮಲೆಕ್ಕಾಧಿಕಾರಿ ಗಳ ಸಂಘದ ಜಿಲ್ಲಾಧ್ಯಕ್ಷ ಚಂದ್ರೇಗೌಡ, ಉಪಾಧ್ಯಕ್ಷ ಮುಕುಂದರಾಜು, ಪ್ರಧಾನ ಕಾರ್ಯದರ್ಶಿ ಜೆ.ಪಿ. ವಿಶ್ವನಾಥ್, ಗೌರವಾ ಧ್ಯಕ್ಷ ಬಿ.ಹೆಚ್ ಮೋಹನ್ ಕುಮಾರ್ ಇತರರು ಪಾಲ್ಗೊಂಡಿದ್ದರು.

Translate »