100 ದಿನ ಪೂರೈಸಿದ ಅನ್ನ ದಾಸೋಹ
ಹಾಸನ

100 ದಿನ ಪೂರೈಸಿದ ಅನ್ನ ದಾಸೋಹ

July 18, 2019

ಕಾವೇರಿ ದಂಡೆಯ ಮಲ್ಲಿರಾಜಪಟ್ಟಣದ ಶ್ರೀ ಲಕ್ಷಣೇಶ್ವರಸ್ವಾಮಿ ದೇಗುಲದಲ್ಲಿ ನಿತ್ಯ ದಾಸೋಹ
ರಾಮನಾಥಪುರ,ಜು.17- ಇಲ್ಲಿಗೆ ಸಮೀ ಪದ ಮಲ್ಲಿರಾಜಪಟ್ಟಣದಲ್ಲಿನ ಶ್ರೀ ಲಕ್ಷ್ಮಣೇ ಶ್ವರಸ್ವಾಮಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಹಾಗೂ ಹಸಿದವರಿಗೆ ಅನ್ನ ನೀಡುವ ಪುಣ್ಯದ ಕಾಯಕ ದೇವರ ಸೇವೆಗೆ ಸಮ. ಹಾಗಾಗಿ ದಾಸೋಹ ಒದಗಿಸುವ ಕಾರ್ಯಗಳಿಗೆ ದಾನಿಗಳು ಹೆಚ್ಚಿನ ಸಹಕಾರ ನೀಡಬೇಕು ಎಂದು ದೇವಸ್ಥಾನದ ಮುಖ್ಯ ಅರ್ಚಕ ರುದ್ರಪಟ್ಟಣ ವೇ.ಜಗನಾಥ್ ಹೇಳಿದರು.

ಕಾವೇರಿ ನದಿ ದಂಡೆಯಲ್ಲಿರುವ ಮಲ್ಲಿರಾಜ ಪಟ್ಟಣದ ಶ್ರೀ ಲಕ್ಷ್ಮಣೇಶ್ವರಸ್ವಾಮಿ ದೇವಾ ಲಯದಲ್ಲಿ ಕಳೆದ 3 ತಿಂಗಳಿಗೂ ಮೊದಲು ಆರಂಭವಾದ ಅನ್ನದಾಸೋಹ 100ನೇ ದಿನ ಪೂರೈಸಿರುವುದಕ್ಕೆ ಅವರು ಹರ್ಷ ವ್ಯಕ್ತಪಡಿಸಿದರು. ದಾಸೋಹಕ್ಕೆ ಸನಾತನ ಧರ್ಮದಲ್ಲಿ ವಿಶೇಷ ಸ್ಥಾನಮಾನವಿದೆ. ಹಸಿದವರಿಗೆ ಊಟ ನೀಡುವುದು ಪುಣ್ಯದ ಕಾರ್ಯ. ಇದು ಶಾಶ್ವತವಾಗಿ ಈ ದೇವಾಲ ಯದಲ್ಲಿ ನಡೆಯಲಿ ಎಂದು ಆಶಿಸಿದರು.

ಲಕ್ಷ್ಮಣೇಶ್ವರಸ್ವಾಮಿ ದೇವಾಲಯ 2 ವರ್ಷದ ಹಿಂದೆ ಜೀರ್ಣೋದ್ಧಾರವಾಗಿದೆ. ಮೊದಲಿಗೆ ಕಳೆದ ವರ್ಷ ಸಮಾಜ ಸೇವಕ ಚನ್ನೇಗೌಡ ಅವರು ಪ್ರತಿ ಹುಣ್ಣಿಮೆ ಯಂದು ದಾಸೋಹ ವ್ಯವಸ್ಥೆ ಮಾಡಿ ದರು. ಬಳಿಕ ಅವರ ಕೋರಿಕೆಯಂತೆ ಈ ಭಾಗದ ಎಲ್ಲ ಭಕ್ತರು ಹಾಗೂ ಸಮಿತಿಯ ವರ ಜತೆಗೂಡಿ ನಿತ್ಯವೂ ಅನ್ನ ದಾಸೋಹ ನಡೆಸಬೇಕೆಂದು ನಿರ್ಧರಿಸಿದರು. ಹೀಗೆ ಆರಂಭಗೊಂಡ ನಿತ್ಯ ಮಧ್ಯಾಹ್ನದ ದಾಸೋಹ 100 ದಿನವಾಗಿದೆ.

ಈ ವಿಶೇಷ ದಿನದ ಪೂಜೆಗೆ ಗ್ರಾಮೀಣ ಭಾಗದ ನೂರಾರು ಭಕ್ತರು ಆಗಮಿಸಿ ಲಕ್ಷ್ಮಣೇಶ್ವರಸ್ವಾಮಿ ಹಾಗೂ ಊರ್ಮಿಳಾದೇವಿ ದರ್ಶನ ಪಡೆದರು.

Translate »