ಪರಿಣಾಮಕಾರಿ ಲಾರ್ವಾ ಪರೀಕ್ಷೆಗೆ ಎಡಿಸಿ ಸೂಚನೆ
ಹಾಸನ

ಪರಿಣಾಮಕಾರಿ ಲಾರ್ವಾ ಪರೀಕ್ಷೆಗೆ ಎಡಿಸಿ ಸೂಚನೆ

July 18, 2019

ಹಾಸನ, ಜು.17- ಕುಡಿಯುವ ನೀರಿನ ಲ್ಲಿಯೂ ಸೊಳ್ಳೆಯ ಲಾರ್ವಾಗಳು ಇರು ತ್ತವೆ. ಹಾಗಾಗಿ ಕುಡಿಯುವ ನೀರಿನ ಸಂಗ್ರಹದಲ್ಲಿಯೂ ಪರೀಕ್ಷೆ ಇನ್ನಷ್ಟು ಪರಿ ಣಾಮಕಾರಿಯಾಗಿ ಆಗಬೇಕು. ಡೆಂಗ್ಯೂ ನಿಯಂತ್ರಣ ಜಾಗೃತಿ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು ಎಂದು ಜಿಲ್ಲಾ ಪಂಚಾಯಿತಿ ಪ್ರಭಾರಿ ಸಿಇಒ ಎಂ.ಎಲ್. ವೈಶಾಲಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಪಂ ಕಚೇರಿಯಲ್ಲಿ ಬುಧವಾರ ನಡೆದ ರಾಷ್ಟ್ರೀಯ ಡೆಂಗ್ಯೂ ವಿರೋಧಿ ಮಾಸಾ ಚರಣೆ ಹಾಗೂ ಅಂತರ್ ಇಲಾಖಾ ಸಮ ನ್ವಯ ಸಭೆಯಲ್ಲಿ ಮಾತನಾಡಿ, ಅರಸೀಕೆರೆ, ಹಾಸನ, ಬೇಲೂರು ತಾಲೂಕುಗಳಲ್ಲಿ ಹೆಚ್ಚು ಜಾಗೃತಿ ಕಾರ್ಯಕ್ರಮಗಳು ನಡೆಯಬೇಕು. ಅರಸೀಕೆರೆ ತಾಲೂಕಿನ ರಾಮ್‍ಜಿಹಳ್ಳಿಯಲ್ಲೊಂದರಲ್ಲೇ 5 ಡೆಂಗ್ಯೂ ಪ್ರಕರಣ ದಾಖಲಾಗಿವೆ. ಅಲ್ಲಿನ ಜನರಿಗೆ ಸ್ವಚ್ಛತೆ ಬಗ್ಗೆ ಹೆಚ್ಚಿನ ಅರಿವು ಮೂಡಿಸ ಬೇಕು. ರೇಡಿಯೊ, ಮುದ್ರಣ ಮಾಧ್ಯಮ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಈ ಬಗ್ಗೆ ಅರಿವು ಮೂಡಿಸುವುದು ಸೂಕ್ತ ಎಂದರು.

ಅಂಬೇಡ್ಕರ್ ನಗರ, ಸಿದ್ದಯ್ಯನಗರ, ಶ್ರೀನಗರ, ಪೆನ್ಷನ್ ಮೊಹಲ್ಲಾಗಳಂತಹ ಪ್ರದೇಶಗಳಲ್ಲಿ ಹೆಚ್ಚು ಜಾಗೃತಿ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಬೇಕು. ಡೆಂಗ್ಯೂ ನಿಯಂತ್ರಣ ಅರಿವು ಕಾರ್ಯಕ್ರಮಗಳು ಆಂದೋಲನದ ರೂಪದಲ್ಲಾಗಬೇಕು. ಸಾರ್ವಜನಿಕರು ಸಹ ಕೈ ಜೋಡಿಸಬೇಕು ಎಂದು ವೈಶಾಲಿ ತಿಳಿಸಿದರು.

ಎಲ್ಲಾ ವಿದ್ಯಾರ್ಥಿನಿಲಯಗಳಲ್ಲಿ ಲಾರ್ವಾ ಸಮೀಕ್ಷೆ ನಡೆಸವಂತೆ ವಾರ್ಡನ್‍ಗಳಿಗೆ ಸೂಚಿಸಬೇಕು. ಎಳನೀರು ಒಡೆದ ಚಿಪ್ಪು ಗಳನ್ನು ಸರಿಯಾಗಿ ವಿಲೇವಾಗಿ ಮಾಡು ವಂತೆ ಎಳನೀರು ಮಾರಾಟಗಾರರಿಗೆ ಸೂಚಿಸಬೇಕು. ಗ್ಯಾರೇಜ್ ಮಾಲೀಕರು ಟೈರ್‍ಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಲಾರ್ವಾ ನಿವಾರಣೆಗೆ ಕ್ವಾರೆ ಹಾಗೂ ಈಜು ಕೊಳಗಳಿಗೆ ಗಪ್ಪಿ, ಗ್ಯಾಂಬೂ ಸಿಯಾ ಮೀನುಗಳನ್ನು ಬಿಡಬೇಕು ಎಂದು ಸೂಚಿಸಿದರು.

ಜಿಲ್ಲೆಯಲ್ಲಿ ಲಾರ್ವಾ ಸಮೀಕ್ಷೆ ನಡೆಯು ತ್ತಿದೆ. ಪ್ರತಿ ಮನೆಗೂ ಆಶಾ ಕಾರ್ಯಕರ್ತೆ ಯರು, ಅಂಗನವಾಡಿ ಸಹಾಯಕಿಯರ ಜೊತೆ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿ ಗಳಿಗೂ ಈ ಬಗ್ಗೆ ಅರಿವು ಮೂಡಿಸಲಾಗು ತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸತೀಶ್ ಸಭೆಗೆ ತಿಳಿಸಿದರು.

ಕೈಗಾರಿಕೆ ಪ್ರದೇಶಗಳಲ್ಲಿ, ಬೃಹತ್ ಕಟ್ಟಡ ಕಾಮಗಾರಿಗಳಲ್ಲಿ ತೊಡಗಿರುವ ಕಾರ್ಮಿಕರ ರಕ್ತ ಪರೀಕ್ಷೆ ಮಾಡಿಸಿ ಡೆಂಗ್ಯೂ ಲಕ್ಷಣ ಕಂಡು ಬಂದರೆ ಕೂಡಲೇ ಚಿಕಿತ್ಸೆ ಕೊಡಿಸಬೇಕು ಎಂದು ಡಾ.ರಾಜ ಗೋಪಾಲ್ ಸಲಹೆ ನೀಡಿದರು.
ಡಾ.ಸುರೇಶ್, ಡಾ.ನಾಗೇಶ್ ಆರಾಧ್ಯ, ಡಾ.ವಿಜಯ್ ಅವರು ಈವರೆಗೆ ಕೈಗೊಂಡಿ ರುವ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಸಭೆಗೆ ತಿಳಿಸಿದರು. ವಿವಿಧ ಇಲಾಖಾ ಅಧಿಕಾರಿ ಗಳು ಸಭೆಯಲ್ಲಿ ಹಾಜರಿದ್ದರು.

Translate »