70 ವರ್ಷವಾದರೂ ಸಿಗದ ಗುಣಾತ್ಮಕ ಶಿಕ್ಷಣ
ಮೈಸೂರು

70 ವರ್ಷವಾದರೂ ಸಿಗದ ಗುಣಾತ್ಮಕ ಶಿಕ್ಷಣ

July 19, 2019

ಮೈಸೂರು, ಜು.18(ಆರ್‍ಕೆಬಿ)- ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಸಿಕ್ಕಿಲ್ಲ. ಅದನ್ನು ಇನ್ನೂ ಹುಡುಕುತ್ತಲೇ ಇದ್ದೇವೆ ಎಂದು ಪ್ರಗತಿಪರ ಚಿಂತಕ ಪ.ಮಲ್ಲೇಶ್ ಇಂದಿಲ್ಲಿ ಬೇಸರ ವ್ಯಕ್ತಪಡಿಸಿದರು.

ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ (ಆರ್‍ಎಲ್‍ಹೆಚ್‍ಪಿ) ಗುರುವಾರ ಆಯೋ ಜಿಸಿದ್ದ `ಶಾಲಾಭಿವೃದ್ಧಿ ಯೋಜನೆ ಮತ್ತು ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ಮಹತ್ವ’ ಕುರಿತ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಗುಣಾ ತ್ಮಕ ಶಿಕ್ಷಣ ಬೇಕು ಎಂಬುದಾದರೆ ಅದಕ್ಕೆ ಬದ್ಧತೆ ಅಗತ್ಯ. ಅದು ಇಲ್ಲದಿದ್ದರೆ ನಾವು ಎಷ್ಟು ಮಾತನಾಡಿದರೂ ಯಾವ ಪ್ರಯೋ ಜನವೂ ಆಗುವುದಿಲ್ಲ ಎಂದು ಹೇಳಿದರು.

ಜನಸಂಖ್ಯೆಯಲ್ಲಿ ಬಹು ಎತ್ತರಕ್ಕೆ ಬೆಳೆದಿ ರುವ ನಾವು ವ್ಯವಸ್ಥೆಯಲ್ಲಿ ಮಾತ್ರ ಹಿಂದು ಳಿದಿದ್ದೇವೆ. ಆರೋಗ್ಯ ಮತ್ತು ಶಿಕ್ಷಣವನ್ನು ಖಾಸಗಿಯವರಿಗೆ ಬಿಟ್ಟು ಕೊಟ್ಟಿದ್ದೇವೆ. ಆರೋಗ್ಯ ಮತ್ತು ಶಿಕ್ಷಣವನ್ನು ಪಟ್ಟಭದ್ರ ಹಿತಾಸಕ್ತಿಗಳು ವ್ಯಾಪಾರದ ಸರಕನ್ನಾಗಿಸಿ, ಶಿಕ್ಷಣ ಶ್ರೀಮಂತರಿಗೆ ಮಾತ್ರ ಎಂಬಂತಾ ಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇಂಥ ಪರಿಸ್ಥಿತಿಯಲ್ಲಿ ನಮ್ಮ ಮಕ್ಕಳ ಬಗ್ಗೆ ಗಮನ ಹರಿಸಲು ಸಾಧ್ಯವೇ? ಯಾವ ವ್ಯವಸ್ಥೆ ಇದನ್ನು ಸರಿಪಡಿಸಲು ಸಾಧ್ಯ? ಎಂದು ಪ್ರಶ್ನಿಸಿದರು.

ಐದನೇ ತರಗತಿವರೆಗೆ ಮಾತ್ರ ಮಾತೃ ಭಾಷಾ ಶಿಕ್ಷಣ ಎಂಬುದು ನಮ್ಮ ಮಕ್ಕಳ ಮೇಲೆ ಭಾರೀ ಹೊಡೆತ ಬೀಳುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಕೆಟ್ಟ ವ್ಯವಸ್ಥೆಯಲ್ಲಿ ರುವ ನಾವು ಬದಲಾಗಬೇಕಾದರೆ ನಮ್ಮ ಮಕ್ಕಳ ಭವಿಷ್ಯಕ್ಕಾದರೂ ಧ್ವನಿ ಎತ್ತಬೇಕು, ಹೋರಾಡಬೇಕು ಎಂದು ಸಲಹೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಆರ್‍ಎಲ್ ಹೆಚ್‍ಪಿ ನಿರ್ದೇಶಕಿ ಸರಸ್ವತಿ, ಸರ್ಕಾರಿ ಶಾಲೆಗಳಲ್ಲಿ 7ರಿಂದ 13 ವರ್ಷದ ವಯ ಸ್ಸಿನ 70,000 ಮಕ್ಕಳು ಶಾಲೆಯಿಂದ ಹೊರ ಗುಳಿದಿದ್ದಾರೆ ಎಂಬ ಮಾಹಿತಿ ಮಾಧ್ಯಮ ಗಳಿಂದ ದೊರೆತಿದೆ. ನಮ್ಮೂರ ಶಾಲೆ ಎಂಬ ಅಭಿಮಾನದಿಂದ ಶಾಲಾಭಿವೃದ್ಧಿ ಸಮಿತಿ ಗಳು ಮಕ್ಕಳ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಕೈಜೋಡಿಸಿದರೆ ಅಂಥ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ಸಿಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ನಂತರ ನಡೆದ ವಿಚಾರ ಗೋಷ್ಠಿಯಲ್ಲಿ `ಶಾಲಾಭಿವೃದ್ಧಿ ಯೋಜನೆ ಮತ್ತು ಎಸ್‍ಡಿ ಎಂಸಿ ಮಹತ್ವ’ ಕುರಿತು ಬಾಲಕಾರ್ಮಿಕ ಪದ್ಧತಿ ವಿರೋಧಿ ಆಂದೋಲನ (ಅಂಅಐ-ಏ) ಮಾಜಿ ಸಂಚಾಲಕ ರೆನ್ನಿ ಡಿಸೋಜಾ, `ಪೋಷಕರು ಮತ್ತು ಶಿಕ್ಷಕರ ಸಭೆಯ ಮಹತ್ವ’ ಕುರಿತು ಶಿಕ್ಷಣ ತಜ್ಞೆ ಪ್ರೊ.ಪ್ರೇಮಾ ರಾವ್ ವಿಚಾರ ಮಂಡಿಸಿದರು. ಕಾರ್ಯಕ್ರಮ ದಲ್ಲಿ ಮಂಗಳೂರು ಎಸ್‍ಡಿಎಂಸಿ ಸಮ ನ್ವಯ ಸಮಿತಿಯ ಮೊಹಿದ್ದೀನ್ ಕುಟ್ಟಿ ಅಧ್ಯ ಕ್ಷತೆ ವಹಿಸಿದ್ದರು. ಮಕ್ಕಳ ಕ್ಷೇಮಾಭಿ ವೃದ್ಧಿ ಸಮಿತಿ ಅಧ್ಯಕ್ಷೆ ಕಮಲಾ, ಸದಸ್ಯ ಇ.ಧನಂ ಜಯ, ವಿದ್ಯೋದಯ ಮಕ್ಕಳ ಒಕ್ಕೂಟದ ಸ್ಮಿತಾ ಇನ್ನಿತರರು ಉಪಸ್ಥಿತರಿದ್ದರು.

Translate »