ಬೆಂಗಳೂರು, ಅ. 4(ಕೆಎಂಶಿ)- ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಕುಟುಂಬವನ್ನು ರಾಜಕೀಯವಾಗಿ ಪರದೆ ಹಿಂದಕ್ಕೆ ತಳ್ಳಲು ಬಿಜೆಪಿ ಮುಂದಾಗಿದೆ. ರಾಜ್ಯದ ಹಾನಗಲ್ ಹಾಗೂ ಸಿಂದಗಿ ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾ ವಣಾ ಉಸ್ತುವಾರಿ ಪಟ್ಟಿಯಲ್ಲಿ ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ಪಕ್ಷದ ವರಿಷ್ಠರು ಜಾಗ ನೀಡಿರಲಿಲ್ಲ. ಯಡಿಯೂರಪ್ಪ ಅವರು, ಪಕ್ಷದ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಅವರೊಟ್ಟಿಗೆ ಸಮಾಲೋಚನೆ ನಡೆಸಿದ ನಂತರ ಹಾನಗಲ್ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಪಟ್ಟಿಯಲ್ಲಿ…
ಎಸ್.ಟಿ.ಸೋಮಶೇಖರ್‍ಗೆ ಎಸ್.ಎಂ.ಕೃಷ್ಣ ಧನ್ಯವಾದ
September 30, 2021ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟಕರನ್ನಾಗಿ ರಾಜ್ಯ ಸರ್ಕಾರ ಅವಕಾಶ ನೀಡಿದ್ದಕ್ಕೆ ಸಹಕಾರ ಸಚಿವರು ಹಾಗೂ ಮೈಸೂರು-ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಧನ್ಯವಾದ ತಿಳಿಸಿದ್ದಾರೆ. ಎಸ್.ಟಿ. ಸೋಮಶೇಖರ್ ಅವರು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಆ ಭಾಗದ ಜನರ ಜೊತೆ ಬೆರೆತು ಕಳೆದ ಒಂದೂವರೆ ವರ್ಷದಲ್ಲಿ ಹಲವು ಜನಪರ ಕೆಲಸಗಳ ಮೂಲಕ ಮನೆ ಮಾತಾಗಿದ್ದಾರೆ. ಕೋವಿಡ್ ಸಂಕಷ್ಟ ಸಮಯದಲ್ಲಿ ಜನರ ನೋವಿಗೆ ಸ್ಪಂದಿಸುವ ಜೊತೆಗೆ 127 ವರ್ಷದ ಮೈಸೂರು ಮೃಗಾಲಯದಲ್ಲಿ…
ಸಾಮಾನ್ಯ ವರ್ಗಕ್ಕೆ 5.50, ಪರಿಶಿಷ್ಟರಿಗೆ 5 ಲಕ್ಷ ರೂ.ಗೆ ಮನೆ
September 29, 2021ಬೆಂಗಳೂರು, ಸೆ.28(ಕೆಎಂಶಿ)-ಮುಖ್ಯಮಂತ್ರಿಗಳ ಒಂದು ಲಕ್ಷ ವಸತಿ ಯೋಜನೆಯಡಿ ಫಲಾನುಭವಿಗಳಿಗೆ ಅಗ್ಗದ ದರದಲ್ಲಿ ಮನೆ ವಿತರಣೆ ಕಾರ್ಯ ಆರಂಭವಾಗಲಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ವಿಕಾಸಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ಯೋಜನೆಯಡಿ ಸಾಮಾನ್ಯ ವರ್ಗದವರಿಗೆ ಐದೂವರೆ ಲಕ್ಷ ರೂಗಳಿಗೆ ಒಂದು ಮನೆ ಒದಗಿಸಲಾಗುವುದು ಎಂದರು. ಇದೇ ರೀತಿ ಪರಿಶಿಷ್ಟರಿಗೆ ಐದು ಲಕ್ಷ ರೂ ದರದಲ್ಲಿ ಮನೆ ಒದಗಿಸಲಾಗುವುದು ಎಂದ ಅವರು, ಈ ಯೋಜನೆಯಡಿ ಈಗಾಗಲೇ ನಲವತ್ತಾರು ಸಾವಿರ ಮನೆಗಳ ಕಾಮಗಾರಿ ಮುಕ್ತಾಯ ಹಂತದಲ್ಲಿದೆ ಎಂದರು….
ಎಲ್ಲೆಡೆ ಅನ್ನದಾತರ ಆರ್ಭಟ
September 28, 2021ಬೆಂಗಳೂರು,ಸೆ.27-ಕೇಂದ್ರದ ನೂತನ ಕೃಷಿ ಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ ಸಂಯುಕ್ತ ರೈತ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್‍ಗೆ ರಾಜ್ಯದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲ ಜಿಲ್ಲೆಗಳಲ್ಲಿ ಬಂದ್ ಜನಜೀವನದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಮತ್ತೆ ಕೆಲವು ಜಿಲ್ಲೆಗಳಲ್ಲಿ ಭಾಗಶಃ ಪ್ರತಿಕ್ರಿಯೆ ವ್ಯಕ್ತ ವಾಗಿದೆ. ಕೆಲವು ಜಿಲ್ಲೆಗಳಲ್ಲಿ ರೈತ ಮುಖಂ ಡರನ್ನು ಪೆÇಲೀಸರು ವಶಕ್ಕೆ ಪಡೆದಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಹೆದ್ದಾರಿ ತಡೆಗೆ ಮುಂದಾದ 20ಕ್ಕೂ ಹೆಚ್ಚು ರೈತರನ್ನು ಬಂಧಿ ಸಿದ್ದಾರೆ. ಜಿಲ್ಲಾದ್ಯಂತ ಬಂದ್‍ಗೆ ನೀರಸ…
ಹೆಚ್.ಡಿ.ಕುಮಾರಸ್ವಾಮಿ ನಾಯಕತ್ವದಲ್ಲಿ 2023ಕ್ಕೆ ರಾಜ್ಯದಲ್ಲಿ ಜನತಾ ಸರ್ಕಾರ
September 28, 2021ಬೆಂಗಳೂರು,ಸೆ.27(ಕೆಎಂಶಿ)-ರಾಜ್ಯದ ಜನರ ಉಸಿರಿನಲ್ಲಿ ಉಸಿರಾಗಿರುವ ಜೆಡಿಎಸ್ ಪಕ್ಷವನ್ನು ಮುಗಿಸಲು ಸಿದ್ದರಾಮಯ್ಯ ಅವರಿಂದ ಮಾತ್ರವಲ್ಲ ಯಾರಿಂದಲೂ ಸಾಧ್ಯವಿಲ್ಲ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ ಹಾಗೂ ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ.ದೇವೇಗೌಡರು ಹೇಳಿದರು. 2023ಕ್ಕೆ ಜಾತ್ಯತೀತ ಜನತಾದಳ ಹಾಗೂ ಹೆಚ್.ಡಿ.ಕುಮಾರಸ್ವಾಮಿ ನಾಯಕತ್ವದ ಜನತಾ ಸರಕಾರ ರಚನೆ ಮಾಡುವ ಗುರಿ ಯೊಂದಿಗೆ ಬಿಡದಿ ಫಾರ್ಮ್‍ಹೌಸ್‍ನಲ್ಲಿ ಆರಂಭವಾದ 4 ದಿನಗಳ ‘ಜನತಾ ಪರ್ವ 1.0’ ಕಾರ್ಯಾಗಾರವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು. ಅಪಪ್ರಚಾರ ಮಾಡುವುದಕ್ಕೂ ಒಂದು ಮಿತಿ ಬೇಡವೇ. ತಾವು ನಾಯಕರಾಗಿ ಬಂದಿದ್ದು…
ಬೆಂಗಳೂರಲ್ಲಿ ರಾಷ್ಟ್ರೀಯ ಸಹಕಾರಿ ವಸತಿ ಮಹಾಮಂಡಳಿ ಮುಂದಿನ ವಾರ್ಷಿಕ ಸಭೆ
September 27, 2021ನವದೆಹಲಿ,ಸೆ.26-ರಾಷ್ಟ್ರೀಯ ಸಹಕಾರಿ ವಸತಿ ಮಹಾಮಂಡಳಿಯ ಮುಂದಿನ ವಾರ್ಷಿಕ ಸಭೆಯನ್ನು 2022ರ ಜನವರಿ ಯಲ್ಲಿ ಬೆಂಗಳೂರಿನಲ್ಲಿ ನಡೆಸುವಂತೆ ಮಹಾ ಮಂಡಳಿಯ ನಿರ್ದೇಶಕರೂ ಆದ ಕರ್ನಾ ಟಕದ ಸಹಕಾರ ಸಚಿವ ಎಸ್.ಟಿ.ಸೋಮ ಶೇಖರ್ ಮನವಿ ಮಾಡಿದ್ದಾರೆ. ನವದೆಹಲಿಯಲ್ಲಿ ರಾಷ್ಟ್ರೀಯ ಸಹಕಾರಿ ವಸತಿ ಮಹಾಮಂಡಳಿ ಅಧ್ಯಕ್ಷ ಬಿಜಯ್ ಕುಮಾರ್ ಸಿಂಗ್ ನೇತೃತ್ವದಲ್ಲಿ ಮಹಾ ಮಂಡಳಿ ಕಚೇರಿಯಲ್ಲಿ ಭಾನುವಾರ ನಡೆದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ, ಮಾತನಾಡಿದ ಅವರು, ಮುಂದಿನ ಸಭೆಯನ್ನು ಬೆಂಗ ಳೂರಿನಲ್ಲಿ ನಡೆಸುವಂತೆ ಒತ್ತಾಯಿಸಿದರು. ಸಭೆಯಲ್ಲಿ ಮಹಾರಾಷ್ಟ್ರ, ಕೇರಳ, ಪಂಜಾಬ್, ಪಶ್ಚಿಮ…
ಅಮೆರಿಕಾದಿಂದ 157 ಪುರಾತನ ವಸ್ತುಗಳು ಭಾರತಕ್ಕೆ ಹಸ್ತಾಂತರ
September 27, 2021ನವದೆಹಲಿ,ಸೆ.26-ಡ್ಯಾನ್ಸಿಂಗ್ ಗಣೇಶ ಹಾಗೂ 900 ವರ್ಷದ ನಟರಾಜ ಮೂರ್ತಿ ಸೇರಿದಂತೆ ಕಳ್ಳ ಸಾಗಣೆ ಮಾಡಲಾಗಿದ್ದ ಸುಮಾರು 157 ಪುರಾತನ ವಸ್ತುಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಮೆರಿಕಾ ಹಸ್ತಾಂತರಿಸಿದೆ. ಈ ಮೂಲಕ ನರೇಂದ್ರ ಮೋದಿ ಅಮೆರಿಕ ಪ್ರವಾಸವು ಅಂತ್ಯವಾಗಿದೆ. ಅಮೆರಿಕವು ಭಾರತಕ್ಕೆ ಸೇರಿದ ಪುರಾತನ ವಸ್ತುಗಳನ್ನು ಭಾರತಕ್ಕೆ ವಾಪಸ್ ನೀಡಿರುವ ಈ ಮಾಹಿತಿಯನ್ನು ಪ್ರಧಾನ ಮಂತ್ರಿ ಕಚೇರಿ ಹಾಗೂ ವಿದೇ ಶಾಂಗ ಸಚಿವಾಲಯದ ವಕ್ತಾರ ಅರೀಂ ದಾಮ್ ಬಾಗ್ಚಿ ಟ್ವೀಟ್ ಮೂಲಕ ನೀಡಿದ್ದಾರೆ. ಈ 157 ಪುರಾತನ…
ಇಂದು ಭಾರತ್ ಬಂದ್
September 27, 2021ಬೆಂಗಳೂರು,ಸೆ.26-ಕೊರೊನಾ ಸಾಂಕ್ರಾಮಿಕ ರೋಗದ ಸಂಕಷ್ಟ, ಲಾಕ್‍ಡೌನ್ ಹೊಡೆತ ಎಲ್ಲಾ ಮುಗಿಯಿತು ಎನ್ನು ವಷ್ಟರಲ್ಲಿ ಕೊರೊನಾ ಮೂರನೇ ಅಲೆಯ ಜೊತೆಗೆ ದುಬಾರಿಯಾದ ಪೆಟ್ರೋಲ್, ಡೀಸೆಲ್, ಅನಿಲ ದರ, ಆಹಾರ ಸಾಮಾಗ್ರಿಗಳ ಬೆಲೆ ಏರಿಕೆಯಿಂದಾಗಿ ಜನರು ದುಡಿದ ಹಣ ಹೊಟ್ಟೆಗೆ ಸಾಕಾಗುತ್ತಿಲ್ಲ. ಈ ಕುರಿತು ಜನರ ಆಕ್ರೋಶ ಒಂದೆಡೆಯಾದರೆ, ಮತ್ತೊಂದೆಡೆ ಅನ್ನದಾತರೂ ಸರ್ಕಾರದ ನೀತಿ ವಿರುದ್ಧ ಭಾರತ್ `ಬಂದ್’ಗೆ ಕರೆ ನೀಡಿದ್ದಾರೆ. ಆದರೆ, ಈ ಭಾರತ್ ಬಂದ್ ಯಶಸ್ಸು ಕಾಣುವ ಸಾಧ್ಯತೆಗಳು ಕಡಿಮೆ ಇದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಕೋವಿಡ್…
ಸೋಮವಾರ ಬಂದ್ ಇದ್ದರೂ SSಐಅ ಪೂರಕ ಪರೀಕ್ಷೆ
September 26, 2021ಬೆಂಗಳೂರು: ಸೆಪ್ಟೆಂಬರ್ 27ರಂದು ಸೋಮವಾರ ರೈತರು ಕೇಂದ್ರ ಸರ್ಕಾರದ ವಿರುದ್ಧ ದೇಶವ್ಯಾಪಿ ಪ್ರತಿಭಟನೆ ಮಾಡಲು ಸಜ್ಜಾಗಿ ಭಾರತ್ ಬಂದ್‍ಗೆ ಕರೆ ನೀಡಿದ್ದಾರೆ. ಈ ಮಧ್ಯೆ ಸೋಮವಾರ ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆ ನಡೆಯಲಿದೆ ಎಂದು ಎಸ್‍ಎಸ್‍ಎಲ್‍ಸಿ ಬೋರ್ಡ್‍ನ ನಿರ್ದೇಶಕಿ ಸುಮಂಗಲ ಹೇಳಿದ್ದಾರೆ. ಸೋಮವಾರ ಬಂದ್ ಹಿನ್ನೆಲೆ ರಾಜ್ಯದ ನಾನಾ ರೈತ ಸಂಘ ಟನೆಗಳು ಹಾಗೂ ಹತ್ತು ಹಲವು ಸಂಘ ಸಂಸ್ಥೆಗಳು ಕರ್ನಾಟಕ ಬಂದ್ ಮಾಡಲು ಮುಂದಾಗಿವೆ. ಇದೇ ವೇಳೆ ಸೋಮವಾರದಿಂದ ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆ ಶುರುವಾಗಲಿದೆ. ಹಾಗಾಗಿ ಬಂದ್‍ನಿಂದ…
ದೇವರಾಜ ಮಾರುಕಟ್ಟೆ ಪುನರ್ ನಿರ್ಮಾಣಕ್ಕೆ ಚಿಂತನೆ
September 22, 2021ಬೆಂಗಳೂರು, ಸೆ.21-ಮೈಸೂರಿನ ಇತಿ ಹಾಸ ಪ್ರಸಿದ್ಧ ಪಾರಂಪರಿಕ ಕಟ್ಟಡವಾದ ದೇವರಾಜ ಮಾರುಕಟ್ಟೆಯ ಹಾಲಿ ಕಟ್ಟಡ ವನ್ನು ತೆರವುಗೊಳಿಸಿ, ಹಾಲಿ ಇರುವ ಎತ್ತರಕ್ಕೆ ಸೀಮಿತವಾಗಿ ಪಾರಂಪರಿಕ ಶೈಲಿಯ ವಿನ್ಯಾಸ ದಲ್ಲಿ, ಅದೇ ಮಾದರಿಯಲ್ಲಿ ಪುನರ್ ನಿರ್ಮಾಣ ಮಾಡಲು ಮೈಸೂರು ನಗರ ವಿಶೇಷ ಪಾರಂ ಪರಿಕ ಸಮಿತಿ ಹಾಗೂ ಕೌನ್ಸಿಲ್ ಸಭೆಯು ತೀರ್ಮಾನಿಸಿದ್ದು, ಈ ಪ್ರಸ್ತಾವನೆಯು ಪರಿ ಶೀಲನೆಯ ಹಂತದಲ್ಲಿದೆ ಎಂದು ನಗರಾಭಿ ವೃದ್ಧಿ ಸಚಿವ ಭೈರತಿ ಬಸವರಾಜ್ ವಿಧಾನಪರಿಷತ್ತಿನಲ್ಲಿ ತಿಳಿಸಿದರು. ಮೈಸೂರಿನ ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್‍ಡೌನ್ ಕಟ್ಟಡಗಳನ್ನು…