ಸೋಮವಾರ ಬಂದ್ ಇದ್ದರೂ SSಐಅ ಪೂರಕ ಪರೀಕ್ಷೆ
News

ಸೋಮವಾರ ಬಂದ್ ಇದ್ದರೂ SSಐಅ ಪೂರಕ ಪರೀಕ್ಷೆ

September 26, 2021

ಬೆಂಗಳೂರು: ಸೆಪ್ಟೆಂಬರ್ 27ರಂದು ಸೋಮವಾರ ರೈತರು ಕೇಂದ್ರ ಸರ್ಕಾರದ ವಿರುದ್ಧ ದೇಶವ್ಯಾಪಿ ಪ್ರತಿಭಟನೆ ಮಾಡಲು ಸಜ್ಜಾಗಿ ಭಾರತ್ ಬಂದ್‍ಗೆ ಕರೆ ನೀಡಿದ್ದಾರೆ. ಈ ಮಧ್ಯೆ ಸೋಮವಾರ ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆ ನಡೆಯಲಿದೆ ಎಂದು ಎಸ್‍ಎಸ್‍ಎಲ್‍ಸಿ ಬೋರ್ಡ್‍ನ ನಿರ್ದೇಶಕಿ ಸುಮಂಗಲ ಹೇಳಿದ್ದಾರೆ.

ಸೋಮವಾರ ಬಂದ್ ಹಿನ್ನೆಲೆ ರಾಜ್ಯದ ನಾನಾ ರೈತ ಸಂಘ ಟನೆಗಳು ಹಾಗೂ ಹತ್ತು ಹಲವು ಸಂಘ ಸಂಸ್ಥೆಗಳು ಕರ್ನಾಟಕ ಬಂದ್ ಮಾಡಲು ಮುಂದಾಗಿವೆ. ಇದೇ ವೇಳೆ ಸೋಮವಾರದಿಂದ ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆ ಶುರುವಾಗಲಿದೆ. ಹಾಗಾಗಿ ಬಂದ್‍ನಿಂದ ಪರೀಕ್ಷೆ ಇರುತ್ತೋ, ಇಲ್ವೋ ಎಂದು ಪೂರಕ ಪರೀಕ್ಷೆಗೆ ಸಿದ್ಧರಾಗಿರುವ ವಿದ್ಯಾರ್ಥಿಗಳು ಮತ್ತು ಅವರ ಪೆÇೀಷಕರು ಗೊಂದಲದಲ್ಲಿದ್ದಾರೆ. ಈ ಗೊಂದಲಕ್ಕೆ ಎಸ್‍ಎಸ್‍ಎಲ್‍ಸಿ ಬೋರ್ಡ್ ತೆರೆ ಎಳೆದಿದೆ. ಸೋಮವಾರ ಪರೀಕ್ಷೆ ನಡೆಯಲಿದೆ. ಯಾವುದೇ ಆತಂಕ ಬೇಡ ಎಂದು ಎಸ್‍ಎಸ್‍ಎಲ್‍ಸಿ ಬೋರ್ಡ್‍ನ ನಿರ್ದೇಶಕಿ ಸುಮಂಗಲ ತಿಳಿಸಿದ್ದಾರೆ. ಅಲ್ಲದೇ ಸೋಮವಾರದ ಬಂದ್ ದಿನ ಬಿಎಂಟಿಸಿ, ಕೆಎಸ್‍ಆರ್‍ಟಿಸಿ ಎಂದಿ ನಂತೆ ಕಾರ್ಯನಿರ್ವಹಿಸಲಿದೆ. ಜೊತೆಗೆ ತಮ್ಮ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಹಾಲ್ ಟಿಕೆಟ್ ತೋರಿಸಿ ಉಚಿತವಾಗಿ ಬಸ್‍ನಲ್ಲಿ ಸಂಚಾರ ಮಾಡಲು ಅವಕಾಶವನ್ನು ಮಾಡಿಕೊಡಲಾಗಿದೆ. ಬಂದ್ ಇದ್ದರೂ ಪರೀಕ್ಷೆ ನಡೆಯುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಸೋಮವಾರ ನಡೆಯುವ ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆಯಲ್ಲಿ ಒಟ್ಟು 53,041 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಳ್ಳಲಿದ್ದಾರೆ. ಕೋವಿಡ್ ನಿಯಮಗಳ ಪ್ರಕಾರವೇ ಪರೀಕ್ಷೆ ನಡೆಯಲಿದೆ. ಯಾವುದೇ ಆತಂಕವಿಲ್ಲದೇ ವಿದ್ಯಾರ್ಥಿಗಳು ಬಂದು ಪರೀಕ್ಷೆ ಬರೆಯಬೇಕು ಎಂದು ಸುಮಂಗಲ ಹೇಳಿದ್ದಾರೆ.

Translate »