ಮೈಸೂರು, ಸೆ.25(ಆರ್‍ಕೆಬಿ)- ಬೆಂಗ ಳೂರಿನ ಭಾರತೀಯ ವಿದ್ಯಾಭವನದ (ಬಿವಿಬಿ) ಮಾಜಿ ನಿರ್ದೇಶಕ ದಿವಂಗತ ಡಾ. ಮತ್ತೂರು ಕೃಷ್ಣಮೂರ್ತಿಯವರ ಪುತ್ಥಳಿ ಯನ್ನು `ಸ್ಟಾರ್ ಆಫ್ ಮೈಸೂರ್’ ಮತ್ತು `ಮೈಸೂರು ಮಿತ್ರ’ ಸಂಸ್ಥಾಪಕ ಸಂಪಾದ ಕರೂ ಆಗಿರುವ ಭಾರತೀಯ ವಿದ್ಯಾಭವನ, ಮೈಸೂರು ಘಟಕದ ಛೇರ್ಮನ್ ಕೆ.ಬಿ. ಗಣಪತಿ (ಕೆಬಿಜಿ) ಶನಿವಾರ ಮೈಸೂರಿನ ವಿಜಯನಗರ ಒಂದನೇ ಹಂತದಲ್ಲಿರುವ ಭಾರತೀಯ ವಿದ್ಯಾಭವನದ ಆವರಣ ದಲ್ಲಿ ಅನಾವರಣಗೊಳಿಸಿದರು.
ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ ಮಾತ ನಾಡಿದ ಕೆಬಿಜಿ, ಸಂಸ್ಕøತ ವಿದ್ವಾಂಸ, ಶ್ರೇಷ್ಠ ಬರಹಗಾರರೂ ಆಗಿದ್ದ ಮತ್ತೂರು ಕೃಷ್ಣ ಮೂರ್ತಿ ಉದಾತ್ತ ಧ್ಯೇಯ ಮತ್ತು ದೂರ ದೃಷ್ಟಿಯ ವ್ಯಕ್ತಿಯಾಗಿದ್ದರು. ಲಂಡನ್‍ನಲ್ಲಿ ಭಾರತೀಯ ವಿದ್ಯಾಭವನವನ್ನು ಸ್ಥಾಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಜಯಲಕ್ಷ್ಮಿ ಪುರಂನಲ್ಲಿರುವ ಮಹಾಜನ ಕಾಲೇಜಿನಿಂದ ಪ್ರಾರಂಭವಾದ ಬಿವಿಬಿ ಮೈಸೂರು ಕೇಂದ್ರ, ಬಳಿಕ ವಿಜಯನಗರದಲ್ಲಿ ತನ್ನದೇ ಆದ ಆವರಣಕ್ಕೆ ಸ್ಥಳಾಂತರಗೊಂಡಿತು ಎಂದರು.
ನಾನು ಬಿವಿಬಿ ಬಾಂಬೆ ವಿದ್ಯಾರ್ಥಿ ಯಾಗಿದ್ದ ಬಗ್ಗೆ ಸ್ಮರಿಸಿದ ಅವರು, ಸಂಸ್ಥೆ ಯೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿ ದ್ದೇನೆ. ಬಿವಿಬಿ ಸ್ಥಾಪಿಸಲು ಎನ್.ರಾಮಾನು ಜರ ಜೊತೆಯಲ್ಲಿ ಮತ್ತೂರು ಕೃಷ್ಣಮೂರ್ತಿ ಮೈಸೂರಿಗೆ ಬಂದಿದ್ದರು. ಮತ್ತೂರರು ತಾಯಿ-ಮಗ, ಗುರು-ಶಿಷ್ಯ ಮತ್ತು ದೇಶ-ನಾಗರಿಕ ಸಂಬಂಧವನ್ನು ಬಿವಿಬಿಯೊಂ ದಿಗೆ ಹಂಚಿಕೊಂಡಿದ್ದಾರೆ. ಅವರದ್ದು ಸ್ಫೂರ್ತಿ ದಾಯಕ ಪಾತ್ರ. ಮೈಸೂರಿನಲ್ಲಿ ಬಿವಿಬಿ ಸ್ಥಾಪಿಸಿ ನಮ್ಮೆಲ್ಲರನ್ನು ಪ್ರೋತ್ಸಾಹಿಸಿದರು. ಇಂದು ಬಿವಿಬಿ ಮೈಸೂರಿನ ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ. ಮತ್ತೂ ರರ ವಿದ್ವತ್‍ಪೂರ್ಣ ಭಾಷಣಗಳು ಮೈಸೂರಿನ ಜನರಲ್ಲಿ ಇನ್ನೂ ಅಚ್ಚಳಿ ಯದೇ ಉಳಿದಿವೆ ಎಂದರು.
ಈ ಸಂದರ್ಭದಲ್ಲಿ ಬಿವಿಬಿ ಮೈಸೂರು ಕೇಂದ್ರದ ಗೌರವ ಕಾರ್ಯದರ್ಶಿ ಪಿ.ಎಸ್. ಗಣಪತಿ, ಗೌರವ ಖಜಾಂಚಿ ಡಾ.ಎ.ಟಿ. ಭಾಷ್ಯಂ, ಆಡಳಿತಾಧಿಕಾರಿ ಸುಧೀಂದ್ರ ರಾಜ್, ಕಾರ್ಯಕಾರಿ ಸಮಿತಿ ಸದಸ್ಯ ರಾದ ವಿಂಗ್ ಕಮಾಂಡರ್ ಎಸ್.ಸಿ. ಬಾಲಸುಬ್ರಹ್ಮಣ್ಯಂ, ಬಿ.ಯೋಗೀಶ್, ಕೆ.ಎಂ.ಹರೀಶ್, ಡಾ.ತುಳಸಿ ರಾಮಚಂದ್ರ, ಕೆ.ಕೃಷ್ಣೇಗೌಡ, ಟಿ.ಎಸ್.ಗಂಗಾಧರ್, ಎಸ್.ಎ.ತಿಮ್ಮಯ್ಯ, ಪ್ರಾಂಶುಪಾಲರಾದ ವಿಜಯಾ ನರಸಿಂಹಮ್ ಇನ್ನಿತರರು ಉಪಸ್ಥಿತರಿದ್ದರು.