ದೇವರಾಜ ಮಾರುಕಟ್ಟೆ ಪುನರ್ ನಿರ್ಮಾಣಕ್ಕೆ ಚಿಂತನೆ
News

ದೇವರಾಜ ಮಾರುಕಟ್ಟೆ ಪುನರ್ ನಿರ್ಮಾಣಕ್ಕೆ ಚಿಂತನೆ

September 22, 2021

ಬೆಂಗಳೂರು, ಸೆ.21-ಮೈಸೂರಿನ ಇತಿ ಹಾಸ ಪ್ರಸಿದ್ಧ ಪಾರಂಪರಿಕ ಕಟ್ಟಡವಾದ ದೇವರಾಜ ಮಾರುಕಟ್ಟೆಯ ಹಾಲಿ ಕಟ್ಟಡ ವನ್ನು ತೆರವುಗೊಳಿಸಿ, ಹಾಲಿ ಇರುವ ಎತ್ತರಕ್ಕೆ ಸೀಮಿತವಾಗಿ ಪಾರಂಪರಿಕ ಶೈಲಿಯ ವಿನ್ಯಾಸ ದಲ್ಲಿ, ಅದೇ ಮಾದರಿಯಲ್ಲಿ ಪುನರ್ ನಿರ್ಮಾಣ ಮಾಡಲು ಮೈಸೂರು ನಗರ ವಿಶೇಷ ಪಾರಂ ಪರಿಕ ಸಮಿತಿ ಹಾಗೂ ಕೌನ್ಸಿಲ್ ಸಭೆಯು ತೀರ್ಮಾನಿಸಿದ್ದು, ಈ ಪ್ರಸ್ತಾವನೆಯು ಪರಿ ಶೀಲನೆಯ ಹಂತದಲ್ಲಿದೆ ಎಂದು ನಗರಾಭಿ ವೃದ್ಧಿ ಸಚಿವ ಭೈರತಿ ಬಸವರಾಜ್ ವಿಧಾನಪರಿಷತ್ತಿನಲ್ಲಿ ತಿಳಿಸಿದರು.

ಮೈಸೂರಿನ ದೇವರಾಜ ಮಾರುಕಟ್ಟೆ ಮತ್ತು ಲ್ಯಾನ್ಸ್‍ಡೌನ್ ಕಟ್ಟಡಗಳನ್ನು ಪಾರಂ ಪರಿಕ ಶೈಲಿಯಲ್ಲಿ ಪುನರ್ ನಿರ್ಮಾಣ ಮಾಡುವ ವಿಷಯ ನೆನೆಗುದಿಗೆ ಬಿದ್ದಿದ್ದು, ಈ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಸಂದೇಶ್ ನಾಗರಾಜ್ ಅವರು ಕೇಳಿದ ಪ್ರಶ್ನೆಗೆ ಸಚಿವರು ಉತ್ತರ ನೀಡಿದರು.
ಲ್ಯಾನ್ಸ್‍ಡೌನ್ ಕಟ್ಟಡವನ್ನೂ ಪಾರಂ ಪರಿಕ ಕಟ್ಟಡವೆಂದು ಸರ್ಕಾರ ಘೋಷಿ ಸಿದ್ದು, ಈ ಕಟ್ಟಡದ ಪುನರ್ ನಿರ್ಮಾಣದ ಬಗ್ಗೆ, 10-12-19ರಂದು ನಡೆದ ಮೈಸೂರು ನಗರದ ವಿಶೇಷ ಪಾರಂಪರಿಕ ಸಮಿತಿ ಸಭೆ ಹಾಗೂ 30-1-20ರಂದು ನಡೆದ ಮೈಸೂರು ಮಹಾನಗರ ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ಕೈಗೊಂಡ ನಿರ್ಣ ಯದ ವಿರುದ್ಧ ಸಲ್ಲಿಕೆಯಾಗಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, 2-7-21ರಂದು ನೀಡಿರುವ ಸೂಚನೆ ಪ್ರಕಾರ, ಈ ಪ್ರಸ್ತಾವನೆಯನ್ನು ಮತ್ತೊಮ್ಮೆ ಮೈಸೂರು ವಿಶೇಷ ಪಾರಂಪರಿಕ ಸಮಿತಿ ಮುಂದೆ ಮಂಡಿಸಿ, ಮರುಪರಿಶೀಲಿಸಿ ವರದಿ ಸಲ್ಲಿಸು ವಂತೆ 4-8-21ರಂದು ಜಿಲ್ಲಾಧಿಕಾರಿಯವ ರಿಗೆ ಸೂಚಿಸಲಾಗಿದೆ. ಲ್ಯಾನ್ಸ್‍ಡೌನ್ ಕಟ್ಟಡ ವನ್ನು ಪುನರ್ ನಿರ್ಮಾಣ ಮಾಡಬೇಕೇ ಬೇಡವೇ ಎಂಬ ವಿಷಯದ ಬಗ್ಗೆ ಸೂಕ್ತ ನಿರ್ಣಯಕ್ಕಾಗಿ ವಿಶೇಷ ಪಾರಂಪರಿಕ ಸಮಿತಿ ಮುಂದೆ ವಿಷಯ ಮಂಡನೆ ಹಂತ ದಲ್ಲಿದೆ ಎಂದು ಸಚಿವರು ವಿವರಿಸಿದರು.

ತಾತಯ್ಯ ಪಾರ್ಕ್ ಆಧುನೀಕರಣ: ಲ್ಯಾನ್ಸ್ ಡೌನ್ ಕಟ್ಟಡದ ಮುಂದಿರುವ ತಾತಯ್ಯ ಪಾರ್ಕ್ ಹಾಳು ಬಿದ್ದಿದ್ದು, ಇದನ್ನು ಆಧುನೀ ಕರಣಗೊಳಿಸುವ ಬಗ್ಗೆ ಸಂದೇಶ್ ಕೇಳಿದ್ದ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೋವಿಡ್ ಪ್ರಯುಕ್ತ ಪಾಲಿಕೆಯಲ್ಲಿ ಆದಾಯ ದಲ್ಲಿ ಕೊರತೆ ಇರುವುದರಿಂದ, ಮುಂದಿನ ದಿನಗಳಲ್ಲಿ ಅನುದಾನ ಲಭ್ಯತೆಯ ಮೇರೆಗೆ ತಾತಯ್ಯ ಪಾರ್ಕ್‍ನ್ನು ಆಧುನೀಕರಣಗೊಳಿ ಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

Translate »