ನಿರಂಜನ ಮಠದ ವಿರುದ್ಧ ಚಕ್ರವರ್ತಿ ಸೂಲಿಬೆಲೆ  ಹೇಳಿಕೆಗೆ ಮಠ ಸಂರಕ್ಷಣಾ ಸಮಿತಿ ಆಕ್ಷೇಪ
ಮೈಸೂರು

ನಿರಂಜನ ಮಠದ ವಿರುದ್ಧ ಚಕ್ರವರ್ತಿ ಸೂಲಿಬೆಲೆ ಹೇಳಿಕೆಗೆ ಮಠ ಸಂರಕ್ಷಣಾ ಸಮಿತಿ ಆಕ್ಷೇಪ

September 22, 2021

ಮೈಸೂರು,ಸೆ.21(ಆರ್‍ಕೆಬಿ)- ಮೈಸೂ ರಿನ ನಿರಂಜನ ಮಠದ ಬಗ್ಗೆ ಮಾಧ್ಯಮ ದಲ್ಲಿ ಹೇಳಿಕೆ ನೀಡಿರುವ ಚಿಂತಕ, ಸಾಮಾ ಜಿಕ ಕಾರ್ಯಕರ್ತ ಚಕ್ರವರ್ತಿ ಸೂಲಿಬೆಲೆ ವಿರುದ್ಧ ನಿರಂಜನ ಮಠ ಸಂರಕ್ಷಣಾ ಸಮಿತಿ ಟೀಕಾ ಪ್ರಹಾರ ನಡೆಸಿದೆ.

ನಿರಂಜನ ಮಠ ಆವರಣದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಸಂರಕ್ಷಣಾ ಸಮಿತಿಯ ಮುಖ್ಯಸ್ಥ ಟಿ.ಎಸ್.ಲೋಕೇಶ್, ನಿರಂಜನ ಮಠದ ಬಗ್ಗೆ ಸೂಕ್ತ, ವಾಸ್ತವ ಮಾಹಿತಿ ಅರಿತುಕೊಳ್ಳದೇ ಸೂಲಿಬೆಲೆ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿ ದ್ದಾರೆ. ರಾಮಕೃಷ್ಣ ಆಶ್ರಮದ ಪರವಾಗಿ ಹೇಳಿಕೆ ನೀಡುವ ಭರದಲ್ಲಿ ಅವರು ಆಡಿ ರುವ ಮಾತುಗಳು ಕೋಮು ಸೌಹಾ ರ್ದತೆಗೆ ಧಕ್ಕೆ ಉಂಟು ಮಾಡುತ್ತದೆ. ಜಾತಿ, ಕೋಮು ಅಂಶಗಳನ್ನಿಟ್ಟುಕೊಂಡು ವೀರ ಶೈವ ಲಿಂಗಾಯಿತರು, ಬ್ರಾಹ್ಮಣ ಸಹೋದ ರತ್ವದ ನಡುವೆ ಸಂಘರ್ಷ ತರುವ ರೀತಿ ಯಲ್ಲಿ ಅವರು ಹೇಳಿಕೆ ನೀಡಿದ್ದಾರೆ. ಇದು ಸಮುದಾಯಗಳನ್ನು ಒಡೆಯುವ ಹುನ್ನಾರ ವಾಗಿದೆ ಎಂದು ಆರೋಪಿಸಿದರು.

ವೀರಶೈವ ಮಠಾಧಿಪತಿಗಳಿಗೆ ನೀಡು ವಷ್ಟೇ ಭಕ್ತಿ, ಗೌರವ ರಾಮಕೃಷ್ಣ ಪರಮ ಹಂಸರು, ಮಾತೆ ಶಾರದಾದೇವಿ, ಸ್ವಾಮಿ ವಿವೇಕಾನಂದರ ಬಗ್ಗೆಯೂ ನಮಗಿದೆ. ಹಾಗಾಗಿಯೇ ಎನ್‍ಟಿಎಂ ಶಾಲೆಯೂ ಉಳಿಯಬೇಕು. ನಿರಂಜನ ಮಠವೂ ಉಳಿ ಯಲಿ, ವಿವೇಕ ಸ್ಮಾರಕವೂ ನಿರ್ಮಾಣ ವಾಗಲಿ ಎಂಬುದು ನಮ್ಮ ಹೋರಾಟ. ಆದರೆ ಚಕ್ರವರ್ತಿ ಸೂಲಿಬೆಲೆ ಅನಗತ್ಯ ವಾಗಿ ಈ ವಿಚಾರದಲ್ಲಿ ಸಾಮರಸ್ಯ ಹಾಳು ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ. ರಾಮಕೃಷ್ಣ ಆಶ್ರಮದ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಈ ಹಕ್ಕನ್ನು ಅವರಿಗೆ ಬಿಜೆಪಿಯವರು ಕೊಟ್ಟಿದ್ದಾರೆಯೇ? ಎಂದು ಆರೋಪಿಸಿದರು.

ವೀರಶೈವ ಲಿಂಗಾಯಿತರು ಶಾಂತಿ ಪ್ರಿಯರು. ಬಿಜೆಪಿ ಅಧಿಕಾರಕ್ಕೆ ಬರಲು ವೀರಶೈವ ಲಿಂಗಾಯಿತರ ಪಾತ್ರವೂ ಇದೆ. ಈ ಸಮುದಾಯ ಹೆಚ್ಚಿನ ಮತಗಳನ್ನು ಕೊಟ್ಟಿದ್ದರ ಫಲವಾಗಿ ಬಿಜೆಪಿ ಇಂದು ಆಡಳಿತಕ್ಕೆ ಬಂದಿದೆ. ಮುಂದಿನ ಚುನಾ ವಣೆಯಲ್ಲಿ ಈ ಜನರನ್ನು ರೊಚ್ಚಿಗೆಬ್ಬಿಸಿ, ಒಕ್ಕಲೆಬ್ಬಿಸುವ ಕೆಲಸವನ್ನು ಸೂಲಿಬೆಲೆ ಮಾಡುತ್ತಿದ್ದಾರೆಯೇ? ಎಂಬ ಅನು ಮಾನ ವ್ಯಕ್ತಪಡಿಸಿದರು.

ಸೂಲಿಬೆಲೆ ಅವರು ವೀರಶೈವ ಲಿಂಗಾ ಯಿತ ಬಿಜೆಪಿ ನಾಯಕರನ್ನು ನಿರಂಜನ ಮಠದ ಪರ ಹೋಗದಂತೆ ತಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ವೀರ ಶೈವ ಮುಖಂಡರು ನಿರಂಜನ ಮಠದ ಪರವಾಗಿಯೇ ಇರುವುದಾಗಿ ಅವರಿಗೆ ಸ್ಪಷ್ಪಪಡಿಸಿದ್ದಾರೆ ಎಂದರು.
ವೀರಶೈವ ಲಿಂಗಾಯಿತರು ವಿವೇಕಾ ನಂದರ ನಿಜವಾದ ಭಕ್ತರು. ಆದರೆ ವಿವೇ ಕಾನಂದರ ಹೆಸರನ್ನು ಬಳಸಿಕೊಂಡು ರಾಮಕೃಷ್ಣ ಆಶ್ರಮದವರು ಚಕ್ರವರ್ತಿ ಸೂಲಿಬೆಲೆಯನ್ನು ಬಳಸಿಕೊಂಡು ಕೋಮು, ಜಾತಿ ಹೆಸರು ಹಿಡಿದು ಮಾತನಾಡು ತ್ತಿದ್ದಾರೆ. ಸೂಲಿಬೆಲೆಯವರು ಯಾವ ಉದ್ದೇಶಕ್ಕಾಗಿ ನಿರಂಜನ ಮಠ ವಿಚಾರಕ್ಕೆ ಇಳಿದಿದ್ದಾರೆ ಮೊದಲು ಸ್ಪಷ್ಪಪಡಿಸ ಬೇಕು. ಕೋಮುವಾದ ಸೃಷ್ಟಿ ಮಾಡಿ, ಜಾತಿ ಜಾತಿ ನಡುವೆ ಎತ್ತಿಕಟ್ಟುವ ಕೆಲಸ ಮಾಡಬೇಡಿ ಎಂದು ಮನವಿ ಮಾಡಿದರು.

ನಮ್ಮ ಹೋರಾಟ ಕ್ಯಾಬಿನೆಟ್‍ನಲ್ಲಿ ಆಗಿರುವ ನಿರ್ಧಾರ ರದ್ದುಪಡಿಸಬೇಕು. ಎನ್‍ಟಿಎಂ ಶಾಲೆ, ನಿರಂಜನ ಮಠ ಎರಡೂ ಉಳಿಯಬೇಕು. ವಿವೇಕಾ ನಂದರ ಸ್ಮಾರಕವೂ ನಿರ್ಮಾಣವಾಗ ಬೇಕು ಎಂಬ ನಮ್ಮ ನಿಲುವು ಇನ್ನಷ್ಟು ಗಟ್ಟಿಯಾಗಲಿದೆ ಎಂದು ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾ ಮೈಸೂರು ಜಿಲ್ಲಾ ಮಾಜಿ ಅಧ್ಯಕ್ಷ ಹಿನಕಲ್ ಬಸವರಾಜು, ಕೇಬಲ್ ಮಹೇಶ್, ಪ್ರತಿಧ್ವನಿ ವೇದಿಕೆಯ ಪ್ರತಿಧ್ವನಿ ಪ್ರಸಾದ್, ಮಹಾಸಭಾ ತಾಲೂಕು ಅಧ್ಯಕ್ಷ ಬ್ಯಾತಳ್ಳಿ ನಾಗರಾಜು, ನಗರ ಘಟಕದ ಅಧ್ಯಕ್ಷ ಪ್ರಕಾಶ್ ಇನ್ನಿತರರು ಸುದ್ದಿ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Translate »