ಮೈಸೂರಲ್ಲಿ ಚೇತರಿಸಿಕೊಳ್ಳುತ್ತಿದೆ ಹೋಟೆಲ್ ಉದ್ಯಮ
ಮೈಸೂರು

ಮೈಸೂರಲ್ಲಿ ಚೇತರಿಸಿಕೊಳ್ಳುತ್ತಿದೆ ಹೋಟೆಲ್ ಉದ್ಯಮ

September 22, 2021

ಮೈಸೂರು,ಸೆ.21(ಆರ್‍ಕೆ)-ಕೊರೊನಾ ವೈರಸ್ ಮಹಾಮಾರಿ ಸೋಂಕಿನಿಂದಾಗಿ ನೆಲ ಕಚ್ಚಿದ್ದ ಹೋಟೆಲ್ ಉದ್ಯಮ ಲಾಕ್‍ಡೌನ್ ನಿರ್ಬಂ ಧದ ನಂತರ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ.

2020ರ ಫೆಬ್ರವರಿ ಮಾಹೆಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆಯೇ ಅಂತರ ರಾಷ್ಟ್ರೀಯ ಮತ್ತು ಅಂತರ ರಾಜ್ಯ ಪ್ರವಾಸಿಗರು ಮೈಸೂರಿಗೆ ಭೇಟಿ ನೀಡುವುದು ಕಡಿಮೆಯಾ ಯಿತು. ಸೋಂಕು ಉತ್ತುಂಗಕ್ಕೇರಿದ ಸಂದರ್ಭ ಇಡೀ ದೇಶದಲ್ಲಿ ಲಾಕ್‍ಡೌನ್ ನಿರ್ಬಂಧ ವಿಧಿಸಿ ದ್ದರಿಂದ ಎಲ್ಲಾ ವಹಿವಾಟು ಸ್ಥಗಿತಗೊಂಡಿತ್ತು.

ಅದೇ ರೀತಿ ಎರಡನೇ ಅಲೆಯಲ್ಲಿ ರೂಪಾಂ ತರಿ ಕೊರೊನಾ ಹಲವರನ್ನು ಬಲಿ ತೆಗೆದು ಕೊಂಡ ಮೇಲಂತೂ ಪ್ರವಾಸಿಗರು ಮೈಸೂರಿ ನತ್ತ ತಲೆ ಹಾಕಲಿಲ್ಲ. ಇದೀಗ ಕೊರೊನಾ ಪಾಸಿಟಿವ್ ಪ್ರಕರಣ ಕಡಿಮೆಯಾಗಿದೆಯಲ್ಲದೇ ವಾರಾಂತ್ಯ ಕಫ್ರ್ಯೂವನ್ನೂ ತೆರವುಗೊಳಿಸಿರು ವುದರಿಂದ ಅಂತರ ಜಿಲ್ಲಾ ಪ್ರವಾಸಿಗರು ಮೈಸೂರಿನತ್ತ ಬರಲಾರಂಭಿಸಿದ್ದಾರೆ.

ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳೆ ಲ್ಲವೂ ಆರಂಭವಾಗಿರುವುದ ರಿಂದ ವಾರಾಂತ್ಯದ ದಿನ ಗಳು ಹಾಗೂ ಸಾರ್ವತ್ರಿಕ ರಜಾ ದಿನಗಳಲ್ಲಿ ಮೈಸೂರಿನಲ್ಲಿ ರುವ ಹೋಟೆಲ್, ಲಾಡ್ಜ್ ಗಳಲ್ಲಿನ ಶೇ.50ರಷ್ಟು ಕೊಠಡಿ ಗಳು ಭರ್ತಿಯಾಗುತ್ತಿವೆ. ಸೋಮ ವಾರದಿಂದ ಶುಕ್ರವಾರದವರೆಗೂ ಶೇ.25ರಷ್ಟು ಮಂದಿ ಕೊಠಡಿಗಳಲ್ಲಿ ವಾಸ್ತವ್ಯ ಹೂಡುತ್ತಿದ್ದಾರೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ತಿಳಿಸಿದ್ದಾರೆ.
ಮೈಸೂರು ನಗರದ 416 ಹೋಟೆಲ್, ಲಾಡ್ಜ್‍ಗಳಲ್ಲಿ 10,000 ಕೊಠಡಿಗಳಿದ್ದು, ಪ್ರವಾ ಸಿಗರಿಲ್ಲದೇ ಮಾಲೀಕರು ತೀವ್ರ ನಷ್ಟ ಅನು ಭವಿಸುತ್ತಿದ್ದರು. ಕೆಲವರು ಬಾಡಿಗೆ ಕಟ್ಟಲಾರದೇ ಪರಿತಪಿಸುತ್ತಿದ್ದಾಗ ಪರಿಸ್ಥಿತಿ ಅರ್ಥ ಮಾಡಿ ಕೊಂಡು ಮಾಲೀಕರು ರಿಯಾಯಿತಿ ನೀಡಿ ಮಾನ ವೀಯತೆ ಮೆರೆದಿದ್ದರಿಂದ ಇನ್ನೂ ಉದ್ಯಮ ಉಳಿದಿದೆ ಎಂದು ಅವರು ತಿಳಿಸಿದರು.

ನಷ್ಟದ ಹೊರೆ ಹೊರಲಾರದೆ ಕೆಲ ಉದ್ಯಮಿ ಗಳು ಹೋಟೆಲ್ ವೃತ್ತಿಯನ್ನೇ ತ್ಯಜಿಸಿರುವುದೂ ಉಂಟು. ಆದರೆ ಇದೀಗ ಪರಿಸ್ಥಿತಿ ಸುಧಾರಿ ಸುತ್ತಿರುವುದರಿಂದ ಮುಂದೆ ಒಳ್ಳೆಯದಾಗಬಹು ದೆಂಬ ಆಶಾಭಾವನೆಯಿಂದ ಹೋಟೆಲ್ ಉದ್ಯಮ ವನ್ನು ನಂಬಿ ಬಹುತೇಕ ಮಂದಿ ಮುಂದು ವರಿಸುತ್ತಿದ್ದಾರೆ ಎಂದು ಅವರು ನುಡಿದರು.

ಕಳೆದ ಬಾರಿ ದಸರಾ ಹಬ್ಬವನ್ನು ಸರಳವಾಗಿ ಆಚರಿಸಲಾಯಿತು. ಎಲ್ಲಾ ಪ್ರವಾಸಿ ತಾಣಗಳೂ ಬಂದ್ ಆಗಿದ್ದರಿಂದ ಹೋಟೆಲ್‍ನಲ್ಲಿ ವಾಸ್ತವ್ಯ ಹೂಡಿದವರ ಸಂಖ್ಯೆ ತೀವ್ರ ಕಡಿಮೆಯಾಗಿತ್ತು. ಆದರೆ ಈ ವರ್ಷ ಪರಿಸ್ಥಿತಿ ತುಸು ಚೇತರಿಸಿ ಕೊಂಡಿರುವುದರಿಂದ ಆತಂಕವಿಲ್ಲ. ಈಗಾಗಲೇ ಹೊರ ಜಿಲ್ಲೆಗಳ ಪ್ರವಾಸಿಗರು ಬರಲಾರಂಭಿಸಿ ರುವುದರಿಂದ ಹೋಟೆಲ್ ನಿರ್ವಹಣೆಗೆ ಕಳೆದ ವರ್ಷದಂತೆ ತೊಂದರೆ ಆಗಲಾರದು ಎಂದು ನಾರಾಯಣಗೌಡರು ಅಭಿಪ್ರಾಯಪಟ್ಟರು.

ಸರ್ಕಾರ ರಾತ್ರಿ ಕಫ್ರ್ಯೂವನ್ನೂ ತೆರವುಗೊಳಿಸಿ ದಲ್ಲಿ ಜನರು ಸರಾಗವಾಗಿ ಓಡಾಡಲು ಅನುಕೂಲ ವಾಗುತ್ತದೆ. ಅದರಿಂದ ಆಹಾರ ಪೂರೈಸುವ ಹೋಟೆಲ್‍ಗಳು, ಹಾಸ್ಪಿಟಾಲಿಟಿ ಸೇವೆ ಒದಗಿ ಸುತ್ತಿರುವ ಹೋಟೆಲ್‍ಗಳಿಗೂ ನಿರೀಕ್ಷಿತ ವಹಿ ವಾಟು ಸಾಧ್ಯವಾಗಲಿದೆ ಎಂದು ತಿಳಿಸಿದರು.

Translate »