ಸಿಎ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಮೈಸೂರಿನ ವಿಶ್ವಾಸ್‍ಕುಮಾರ್‍ಗೆ ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟದಿಂದ ಸನ್ಮಾನ
ಮೈಸೂರು

ಸಿಎ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಮೈಸೂರಿನ ವಿಶ್ವಾಸ್‍ಕುಮಾರ್‍ಗೆ ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟದಿಂದ ಸನ್ಮಾನ

September 21, 2021

ಮೈಸೂರು,ಸೆ.20(ಪಿಎಂ)-ಉನ್ನತ ದರ್ಜೆಯಲ್ಲಿ ಸಿಎ (ಚಾರ್ಟರ್ಡ್ ಅಕೌಂಟೆಂಟ್) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಮೈಸೂರಿನ ವಿಶ್ವಾಸ್ ಕುಮಾರ್ ಅವರನ್ನು ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟದ ವತಿಯಿಂದ ಶಾಸಕ ಎಲ್.ನಾಗೇಂದ್ರ ಸೋಮವಾರ ಸನ್ಮಾನಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಏರ್ಪ ಡಿಸಿದ್ದ ಕಾರ್ಯಕ್ರಮದಲ್ಲಿ ಶಾಸಕರು, ವಿಶ್ವಾಸ್ ಕುಮಾರ್ ಅವರನ್ನು ಸನ್ಮಾನಿಸಿದರು. ಇದೇ ವೇಳೆ ಮಾತನಾ ಡಿದ ಶಾಸಕರು, ಚಿಕ್ಕ ವಯಸ್ಸಿನಲ್ಲೇ ವಿಶ್ವಾಸ್‍ಕುಮಾರ್ ಇಂತಹ ಕಠಿಣ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಮೈಸೂರಿಗೆ ಕೀರ್ತಿ ತಂದಿದ್ದಾರೆ. ಇವರನ್ನು ಮೈಸೂ ರಿನ ಜನತೆ ಪರವಾಗಿ ಅಭಿನಂದಿಸುತ್ತೇನೆ. ಇವರನ್ನು ಗುರುತಿಸಿ ಸನ್ಮಾನಿಸುತ್ತಿರುವ ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟಕ್ಕೂ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.

ಸಂಘ ಸಂಸ್ಥೆಗಳ ಒಕ್ಕೂಟದ ಉಪಾಧ್ಯಕ್ಷ ಸಿ.ನಾರಾ ಯಣಗೌಡ ಮಾತನಾಡಿ, ವಿಶ್ವಾಸ್‍ಕುಮಾರ್ ಅವರು ಈಗ ಕೇವಲ 20 ವರ್ಷ ವಯೋಮಾನದವರು. ಇಷ್ಟು ಚಿಕ್ಕ ವಯಸ್ಸಿನಲ್ಲೇ ಸಿಎ ಪರೀಕ್ಷೆ ಪಾಸು ಮಾಡಿ ರುವುದು ದೇಶದಲ್ಲಿ ಭವಿಶಃ ಇವರೇ ಮೊದಲು. ಅಲ್ಲದೆ, ಇವರು ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ 3ನೇ ಸ್ಥಾನ ಪಡೆದಿದ್ದರು. ಇವರ ತಂದೆ ಕೀರ್ತಿ ಕುಮಾರ್ ಆಡಿಟರ್ ಆಗಿದ್ದಾರೆ ಎಂದು ಹೇಳಿದರು.
ಒಕ್ಕೂಟದ ಅಧ್ಯಕ್ಷ ಬಿ.ಎಸ್.ಪ್ರಶಾಂತ್ ಮಾತನಾಡಿ, ವಿಶ್ವಾಸ್‍ಕುಮಾರ್ ಸಿಎ ಪಾಸ್ ಮಾಡಿರುವುದು ಮೈಸೂರಿಗೆ ಹೆಮ್ಮೆಯ ಸಂಗತಿ. ಪರಿಶ್ರಮದಿಂದ ಓದಿ ಸಿಎ ಪಾಸ್ ಮಾಡಿದ ತಕ್ಷಣ ಬಹುತೇಕರು ವಿದೇಶಕ್ಕೆ ಹೋಗುವುದೇ ಹೆಚ್ಚು. ನಿಮ್ಮ ವಿಷಯದಲ್ಲಿ ಹಾಗೇ ಆಗದೇ ದೇಶದಲ್ಲೇ ಸೇವೆ ಸಲ್ಲಿಸಬೇಕೆಂದು ಅವರಲ್ಲಿ ಮನವಿ ಮಾಡಿದ್ದೇನೆ. ಇವರ ಸಾಧನೆ ಇತರ ರಿಗೂ ಸ್ಫೂರ್ತಿಯಾಗಲಿ ಎಂದು ಆಶಿಸಿದರು. ಅಂಬಾರಿ ಕನ್ವೆನ್ಷನಲ್ ಹಾಲ್‍ನ ಪಾಲುದಾರ ಮಹೇಶ್, ವಿಶ್ವಾಸ್‍ಕುಮಾರ್ ತಂದೆ ಕೀರ್ತಿ ಕುಮಾರ್, ತಾಯಿ ಎಂ.ಎಸ್.ನಾಗರತ್ನ ಮತ್ತಿತರರು ಹಾಜರಿದ್ದರು.

Translate »