ಇಂದು ಭಾರತ್ ಬಂದ್
News

ಇಂದು ಭಾರತ್ ಬಂದ್

September 27, 2021

ಬೆಂಗಳೂರು,ಸೆ.26-ಕೊರೊನಾ ಸಾಂಕ್ರಾಮಿಕ ರೋಗದ ಸಂಕಷ್ಟ, ಲಾಕ್‍ಡೌನ್ ಹೊಡೆತ ಎಲ್ಲಾ ಮುಗಿಯಿತು ಎನ್ನು ವಷ್ಟರಲ್ಲಿ ಕೊರೊನಾ ಮೂರನೇ ಅಲೆಯ ಜೊತೆಗೆ ದುಬಾರಿಯಾದ ಪೆಟ್ರೋಲ್, ಡೀಸೆಲ್, ಅನಿಲ ದರ, ಆಹಾರ ಸಾಮಾಗ್ರಿಗಳ ಬೆಲೆ ಏರಿಕೆಯಿಂದಾಗಿ ಜನರು ದುಡಿದ ಹಣ ಹೊಟ್ಟೆಗೆ ಸಾಕಾಗುತ್ತಿಲ್ಲ. ಈ ಕುರಿತು ಜನರ ಆಕ್ರೋಶ ಒಂದೆಡೆಯಾದರೆ, ಮತ್ತೊಂದೆಡೆ ಅನ್ನದಾತರೂ ಸರ್ಕಾರದ ನೀತಿ ವಿರುದ್ಧ ಭಾರತ್ `ಬಂದ್’ಗೆ ಕರೆ ನೀಡಿದ್ದಾರೆ.

ಆದರೆ, ಈ ಭಾರತ್ ಬಂದ್ ಯಶಸ್ಸು ಕಾಣುವ ಸಾಧ್ಯತೆಗಳು ಕಡಿಮೆ ಇದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಕೋವಿಡ್ ಸಾಕಷ್ಟು ಸಮಸ್ಯೆಗಳನ್ನು ತಂದೊಡ್ಡಿದ್ದು, ಈಗಷ್ಟೇ ಜನಜೀವನ ಸಾಮಾನ್ಯ ಸ್ಥಿತಿಗೆ ತಿರುಗಿದೆ. ಸಾಕಷ್ಟು ಸಂಘಟನೆಗಳು ರೈತರಿಗೆ ನೈತಿಕ ಬೆಂಬಲ ನೀಡುವುದಾಗಿ ಹೇಳುತ್ತಿವೆ. ಆದರೆ, ಬಂದ್’ಗೆ ಆಸಕ್ತಿ ತೋರುತ್ತಿಲ್ಲ. ರೈತರು ಕರೆ ಕೊಟ್ಟಿ ರುವ ಬಂದ್‍ಗೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘ ನೈತಿಕ ಬೆಂಬಲ ನೀಡಿದ್ದು, ಸಂಪೂರ್ಣ ಬೆಂಬಲ ನೀಡಿಲ್ಲ. ಹೀಗಾಗಿ ನಾಳೆ ಎಂದಿನಂತೆ ಹೋಟೆಲ್ ಓಪನ್ ಇರಲಿದೆ. ಅಲ್ಲದೇ, ಕೆಎಸ್ ಆರ್’ಟಿಸಿ ಮತ್ತು ಬಿಎಂಟಿಸಿ ನೌಕರರ ಸಂಘವೂ ಬಂದ್‍ನಿಂದ ದೂರ ಉಳಿದಿದ್ದು, ಎಂದಿನಂತೆ ಬಸ್ ಓಡಿಸಲು ನೌಕ ರರು ನಿರ್ಧರಿಸಿದ್ದಾರೆ. ಅಲ್ಲದೇ ಲಾರಿ ಮಾಲೀಕರ ಸಂಘಟನೆ ಕೂಡಾ ನೈತಿಕ ಬೆಂಬಲವಷ್ಟೇ ನೀಡಿದ್ದು, ನಾಳೆ ಎಂದಿನಂತೆ ಲಾರಿ ಗಳನ್ನು ರಸ್ತೆ ಗಿಳಿಸಲು ತೀರ್ಮಾನಿಸಿದೆ. ನಮ್ಮ ಮೆಟ್ರೋ ಕೂಡಾ ಎಂದಿನಂತೆ ಸಂಚರಿಸಲಿದೆ. ರಾಜ್ಯ ಟ್ಯಾಕ್ಸಿ ಮಾಲೀಕರ ಸಂಘಟನೆಯೂ ಬಂದ್‍ಗೆ ಬೆಂಬಲ ನೀಡಿಲ್ಲ. ಹೀಗಾಗಿ ಓಲಾ ಉಬರ್ ಸೇರಿ ಎಲ್ಲಾ ರೀತಿಯ ಟ್ಯಾಕ್ಸಿಗಳು ಸಂಚರಿಸಲಿವೆ. ಆಟೋ ಚಾಲಕರ ಸಂಘವೂ ನೈತಿಕ ಬೆಂಬಲ ವಷ್ಟೇ ನೀಡಿದ್ದು, ನಾಳೆ ಆಟೋ ಸಂಚಾರ ಇರಲಿದೆ. ಬೀದಿ ಬದಿ ವ್ಯಾಪಾರಿಗಳು ಕೂಡಾ ಕೊರೊನಾದಿಂದ ಕಂಗೆಟ್ಟು ಹೋಗಿದ್ದು, ಮತ್ತೊಂದು ಬಂದ್ ಮಾಡಲು ಆಸಕ್ತಿ ತೋರುತ್ತಿಲ್ಲ. ಇನ್ನು ಮಕ್ಕಳು ವರ್ಷದ ಬಳಿಕ ಶಾಲೆಗಳ ಮುಖ ನೋಡುತ್ತಿದ್ದು, ಮಕ್ಕಳ ಶಿಕ್ಷಣದ ದೃಷ್ಟಿಯಿಂದ ಶಾಲಾ ಕಾಲೇಜು ಬಂದ್ ಮಾಡದೇ ಇರಲು ಖಾಸಗಿ ಶಾಲಾ-ಕಾಲೇಜುಗಳ ಒಕ್ಕೂಟ ನಿರ್ಧರಿಸಿದೆ.

ಬೆಂಗಳೂರು ವಕೀಲರ ಸಂಘಟನೆಯೂ ನೈತಿಕ ಬೆಂಬಲ ನೀಡಿದ್ದು, ಕೋರ್ಟ್ ಕಲಾಪಗಳು ಎಂದಿನಂತೆ ನಡೆಯಲಿವೆ. ರೈತರ ಹೋರಾ ಟಕ್ಕೆ ಕರವೇ ನಾರಾಯಣಗೌಡ ಬಣವೂ ಕೂಡಾ ನೈತಿಕ ಬೆಂಬಲ ನೀಡಿದ್ದು, ಬಂದ್‍ನಲ್ಲಿ ಭಾಗವಹಿಸುತ್ತಿಲ್ಲ ಎಂದು ತಿಳಿದುಬಂದಿದೆ. ಈಗಷ್ಟೇ ಕೊರೊನಾದಿಂದ ಪರಿಸ್ಥಿತಿ ಸುಧಾರಿಸುತ್ತಿದ್ದು, ಬಂದ್ ನಿಂದ ಮತ್ತೆ ಸಂಕಷ್ಟ ಎದುರಾಗಲಿದೆ. ಹೀಗಾಗಿ ಮತ್ತೆ ಬಂದ್ ಬೇಡ ಎಂದು ಸಾಕಷ್ಟು ಸಂಘಟನೆಯ ಮುಖಂಡರು ಹೇಳುತ್ತಿದ್ದಾರೆ.

ಇನ್ನುಳಿದಂತೆ, ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ಕಬ್ಬು ಬೆಳೆಗಾರರ ಸಂಘ, ದಲಿತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳ ಯೂನಿಯನ್, ಗ್ರಾಮೀಣ ಬ್ಯಾಂಕ್ ನೌಕರರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಮತ್ತು ಎಪಿಎಂಸಿ ವರ್ತಕರ ಸಂಘದವರು ಮಾತ್ರ ಬಂದ್‍ಗೆ ಬೆಂಬಲ ನೀಡಿದ್ದಾರೆ. ಹೆದ್ದಾರಿ ತಡೆಯಲು ಪ್ರತಿ ಭಟನಾಕಾರರು ಯೋಜನೆಗಳನ್ನು ರೂಪಿಸಿದ್ದಾರೆ. ಆದರೆ, ರಸ್ತೆ ತಡೆಗೆ ಅವಕಾಶ ಕೊಡುವುದಿಲ್ಲ ಎಂದು ಬೆಂಗಳೂರು ನಗರ ಪೆÇಲೀಸ್ ಆಯುಕ್ತ ಕಮಲ್ ಪಂತ್ ಅವರು ಹೇಳಿದ್ದಾರೆ.

ಸೋಮವಾರ ರಾಜಧಾನಿಯಲ್ಲಿ ರೈತ ಪರ ಸಂಘಟನೆಗಳಿಂದ ಪ್ರತಿಭಟನೆ, ಮೆರವಣಿಗೆ, ಹೆದ್ದಾರಿ ಬಂದ್‍ಗೆ ಸಿದ್ಧತೆ ನಡೆದಿದೆ. ನಾಳೆ ಬೆಳಗ್ಗೆ 11 ಗಂಟೆಗೆ ಟೌನ್ ಹಾಲ್‍ನಿಂದ ಮೈಸೂರು ಬ್ಯಾಂಕ್ ಸರ್ಕಲ್‍ವರೆಗೆ ರೈತರಿಂದ ಬೃಹತ್ ಪ್ರತಿಭಟನಾ ರ್ಯಾಲಿ ನಡೆಯಲಿದೆ. ಕೆ.ಆರ್. ಮಾರುಕಟ್ಟೆಯಿಂದ ಟೌನ್ ಹಾಲ್‍ವರೆಗೆ ಸಾವಿರಾರು ರೈತರು ಜಾಥಾ ನಡೆಸಲಿದ್ದಾರೆ.

ಕಾಂಗ್ರೆಸ್ ಬೆಂಬಲ: ರೈತರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೋಮವಾರ (ಸೆ.27) ನಡೆಯಲಿರುವ `ಭಾರತ್ ಬಂದ್’ ಕರೆಗೆ ರಾಜ್ಯ ಕಾಂಗ್ರೆಸ್ ಬೆಂಬಲ ವ್ಯಕ್ತಪಡಿಸಿದೆ.

`ರೈತರ ಹಕ್ಕೊತ್ತಾಯದ ಶಾಂತಿಯುತ ಬಂದ್ ಕರೆಗೆ ಪಕ್ಷದ ಬೆಂಬಲವಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. `ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ರೈತ ವಿರೋಧಿ ಧೋರಣೆಯಿಂದ ದೇಶದ ಬಹುಸಂಖ್ಯಾತ ಅನ್ನದಾತ ಸಮುದಾಯ ವಿಷಮ ಪರಿಸ್ಥಿತಿ ಎದುರಿಸುತ್ತಿದೆ. ಕೆಲವೇ ಮಂದಿ ಉದ್ಯಮಿಗಳ ಬೆಂಬಲಕ್ಕೆ ನಿಂತಿರುವ ಬಿಜೆಪಿ ಇಡೀ ಶ್ರಮಿಕ ಜನ ಸಮುದಾಯವನ್ನು ವಂಚಿಸುತ್ತಿದೆ’ ಎಂದು ಅವರು ದೂರಿದ್ದಾರೆ.
`ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಕರಾಳ ಶಾಸನ, ನೀತಿ ಹಾಗೂ ಧೋರಣೆ ವಿರುದ್ಧ ರೈತರು ದಿಲ್ಲಿಯ ರಸ್ತೆಗಳಲ್ಲಿ ವರ್ಷಗಳಿಂದ ಹೋರಾಟ ನಡೆಸಿದ್ದಾರೆ. ರೈತರ ಹೋರಾಟವನ್ನು ಹತ್ತಿಕ್ಕುವ ನಿರಂತರ ಪ್ರಯತ್ನ ನಡೆಸಿದ ಬಿಜೆಪಿ ಸರ್ಕಾರಕ್ಕೆ, ಅವರ ನ್ಯಾಯಯುತ ಬೇಡಿಕೆಗಳನ್ನು ಕೇಳುವ ಕನಿಷ್ಠ ಸೌಜನ್ಯ ತೋರಿಲ್ಲ. ಇದು ಬಿಜೆಪಿಯ ಅಮಾನವೀಯ ಮನಃಸ್ಥಿತಿಗೆ ನಿದರ್ಶನ’ ಎಂದು ಅವರು ಕಿಡಿಕಾರಿದ್ದಾರೆ.

ಖಾಸಗಿ ಶಾಲಾ-ಕಾಲೇಜು ಒಕ್ಕೂಟ: ಒಂದು ವರ್ಷದ ಬಳಿಕ ಮಕ್ಕಳು ಶಾಲೆ ಮುಖ ನೋಡುತ್ತಿವೆ. ಹೀಗಾಗಿ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಾಲಾ ಕಾಲೇಜುಗಳನ್ನು ಬಂದ್ ಮಾಡಲು ಸಾಧ್ಯ ವಿಲ್ಲ. ಹಸಿರು ಬಟ್ಟೆ ಅಥವಾ ಹಸಿರು ಪಟ್ಟಿಯನ್ನು ಧರಿಸಿ ಈ ಮೂಲಕ ಭಾರತ್ ಬಂದ್‍ಗೆ ನೈತಿಕ ಬೆಂಬಲ ಸೂಚಿಸಲಾಗು ವುದು ಖಾಸಗಿ ಶಾಲಾ-ಕಾಲೇಜುಗಳ ಒಕ್ಕೂಟ ಹೇಳಿದೆ. ಭಾರತ್ ಬಂದ್ ಕುರಿತು ಹೇಳಿಕೆ ನೀಡಿರುವ ಕ್ಯಾಮ್ಸ್ ಕಾರ್ಯದರ್ಶಿ ಶಶಿಕುಮಾರ್ ಅವರು, ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘ ಟನೆಗಳು ಸೆ.27ರಂದು ಭಾರತ್ ಬಂದ್‍ಗೆ ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ಖಾಸಗಿ ಶಾಲಾ ಸಂಘಟನೆಗಳು ಬಂದ್‍ಗೆ ನೈತಿಕ ಬೆಂಬಲವಷ್ಟೇ ನೀಡಲು ತೀರ್ಮಾನಿಸಿವೆ ಎಂದು ಹೇಳಿದ್ದಾರೆ.

Translate »