ಮೈಸೂರಲ್ಲಿ ಮಿಶ್ರ ಪ್ರತಿಕ್ರಿಯೆ ಸಂಭವ
ಮೈಸೂರು

ಮೈಸೂರಲ್ಲಿ ಮಿಶ್ರ ಪ್ರತಿಕ್ರಿಯೆ ಸಂಭವ

September 27, 2021

ಮೈಸೂರು,ಸೆ.26(ಎಂಟಿವೈ)- ಕೃಷಿ ಕ್ಷೇತ್ರಕ್ಕೆ ಮಾರಕ ವಾಗಿರುವ ತಿದ್ದುಪಡಿ ಮಾಡಿರುವ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ರೈತಪರ ಸಂಘಟನೆಗಳು ಕರೆ ನೀಡಿರುವ `ಭಾರತ್ ಬಂದ್’ಗೆ ಮೈಸೂರಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುವ ಸಾಧ್ಯತೆ ಹೆಚ್ಚಾಗಿದೆ.

ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಸಂಯುಕ್ತ ಕಿಸಾನ್ ಮೋರ್ಚಾ, ವಿವಿಧ ರೈತಪರ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು ಕೇಂದ್ರ್ರ ಸರ್ಕಾರ ಕೃಷಿ ಕಾಯ್ದೆ ಗಳಿಗೆ ತಿದ್ದುಪಡಿ ಮಾಡಿರುವುದನ್ನು ಖಂಡಿಸಿ, ಸೆ.27ರಂದು `ಭಾರತ್ ಬಂದ್’ಗೆ ಕರೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಮೈಸೂರಲ್ಲಿ ಹಲವು ಸಂಘಟನೆಗಳು `ಭಾರತ್ ಬಂದ್’ಗೆ ಬೆಂಬಲ ನೀಡು ವುದಾಗಿ ಘೋಷಿಸಿದ್ದವು. ಈ ನಡುವೆ ಕೆಲವು ಸಂಘಟನೆಗಳು ನೈತಿಕ ಬೆಂಬಲವನ್ನು ಮಾತ್ರ ನೀಡುವುದಾಗಿ ಘೋಷಿಸಿದ್ದವು. ಈ ಹಿನ್ನೆಲೆಯಲ್ಲಿ ಮೈಸೂರಲ್ಲಿ `ಭಾರತ್ ಬಂದ್’ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುವ ಸಾಧ್ಯತೆ ಕಂಡು ಬರುತ್ತಿದೆ.

ಹೋಟೆಲ್ ಕಾರ್ಯಾರಂಭಿಸಲಿವೆ: ನಾಳಿನ ಭಾರತ್ ಬಂದ್‍ಗೆ ಹಲವು ಸಂಘಟನೆಗಳು ಬಾಹ್ಯ ಬೆಂಬಲ ನೀಡುವುದಾಗಿ ಘೋಷಣೆ ಮಾಡಿವೆ. ಅದರಲ್ಲಿ ಮೈಸೂರು ಹೋಟೆಲ್ ಮಾಲೀ ಕರ ಸಂಘವೂ ಬಾಹ್ಯ ಬೆಂಬಲ ಘೋಷಣೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ಮೈಸೂರಲ್ಲಿ ಎಲ್ಲಾ ಹೋಟೆಲ್ ಹಾಗೂ ವಸತಿ ಗೃಹಗಳು ಕಾರ್ಯನಿರ್ವಹಿಸಲಿವೆ.

ಈ ಕುರಿತು ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ `ಮೈಸೂರು ಮಿತ್ರ’ನೊಂ ದಿಗೆ ಮಾತನಾಡಿ, ಲಾಕ್‍ಡೌನ್ ಹಾಗೂ ಕೊರೊನಾ ಸೋಂಕಿನ ಹಾವಳಿಯಿಂದಾಗಿ ಹೋಟೆಲ್ ಉದ್ಯಮ ಸಂಕಷ್ಟಕ್ಕೀಡಾಗಿದೆ. ಅನ್‍ಲಾಕ್ ನಿಯಮ ಜಾರಿಯಿದ್ದರೂ ಗ್ರಾಹಕ ಸಂಖ್ಯೆಯಲ್ಲಿ ಸುಧಾರಣೆ ಕಂಡಿಲ್ಲ. ಇದರಿಂದ ಹೋಟೆಲ್ ಉದ್ಯಮ ಇಂದಿಗೂ ಚೇತರಿಸಿಕೊಂಡಿಲ್ಲ. ಸಿಬ್ಬಂದಿಗಳ ವೇತನ ನೀಡುವುದು, ಹೋಟೆಲ್ ನಿರ್ವಹಣೆ ಕಷ್ಟಸಾಧ್ಯ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ `ಭಾರತ್ ಬಂದ್’ನಲ್ಲಿ ವಹಿವಾಟು ಸ್ಥಗಿತಗೊಳಿಸುವುದು ಸಾಧ್ಯವಾಗುವು ದಿಲ್ಲ. ಈ ಹಿನ್ನೆಲೆಯಲ್ಲಿ ರೈತರ ಹೋರಾಟಕ್ಕೆ ನಾವು ನೈತಿಕ ಬೆಂಬಲ ನೀಡುತ್ತಿದ್ದೇವೆ. ಎಲ್ಲಾ ಹೋಟೆಲ್‍ಗಳಲ್ಲೂ ಗ್ರಾಹಕ ರಿಗೆ ಊಟ-ತಿಂಡಿ ಸೌಲಭ್ಯ ದೊರೆಯಲಿದೆ ಎಂದರು.

ಪ್ರವಾಸಿ ವಾಹನಗಳು ಲಭ್ಯ: ಬಂದ್ ಕರೆ ನೀಡಿದ್ದರೂ ಮೈಸೂ ರಲ್ಲಿ ಪ್ರವಾಸಿ ವಾಹನಗಳ ಸೇವೆ ಲಭ್ಯವಿರುತ್ತದೆ. ಮೈಸೂರು ಜಿಲ್ಲಾ ಪ್ರವಾಸಿ ವಾಹನಗಳ ಮಾಲೀಕರ ಸಂಘದ ಪ್ರತಿನಿಧಿ ಯಾಗಿ ಸೇಫ್ ವ್ಹೀಲ್ಸ್ ಸಂಸ್ಥೆಯ ಮುಖ್ಯಸ್ಥ ಬಿ.ಎಸ್.ಪ್ರಶಾಂತ್ ಮಾತನಾಡಿ, ಭಾರತ್ ಬಂದ್‍ಗೆ ಪ್ರವಾಸಿ ವಾಹನಗಳ ಸಂಘವು ನೈತಿಕ ಬೆಂಬಲ ನೀಡುತ್ತಿದೆ. ಸಾಲ ತೀರಿಸಲಾಗದೆ ಪ್ರವಾಸಿ ವಾಹನ ಗಳ ಮಾಲೀಕರು ತೀವ್ರ ಸಂಕಷ್ಟಕ್ಕೆ
ಸಿಲುಕಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮತ್ತೆ ವಾಹನಗಳ ಸಂಚಾರ ಸ್ಥಗಿತಗೊಳಿಸುವುದಕ್ಕೆ ಕಷ್ಟವಾಗುತ್ತಿದೆ. ಸೋಮವಾರ ಎಂದಿನಂತೆ ಪ್ರವಾಸಿ ವಾಹನಗಳ ಸೇವೆ ಲಭ್ಯವಿರುತ್ತದೆ ಎಂದರು.

ಪರಿಸ್ಥಿತಿ ನೋಡಿ ಅಂಗಡಿ ತೆರೆಯಲಿವೆ: ಮೈಸೂರಲ್ಲಿ ಭಾರತ್ ಬಂದ್‍ಗೆ ವ್ಯಕ್ತವಾಗುವ ಬೆಂಬಲ ನೋಡಿ ಅಂಗಡಿಗಳು ತೆರೆಯಲಿವೆ. ಅದರಲ್ಲೂ ಮೈಸೂರಿನ ದೇವರಾಜ ಅರಸ್ ರಸ್ತೆ, ಸಯ್ಯಾಜಿರಾವ್ ರಸ್ತೆ, ಅಶೋಕ ರಸ್ತೆ ಸೇರಿದಂತೆ ವಿವಿಧೆಡೆ ಬಂದ್‍ಗೆ ಪರಿಸ್ಥಿತಿ ನೋಡಿಕೊಂಡು ಅಂಗಡಿ ತೆರೆಯಲು ವರ್ತಕರು ನಿರ್ಧರಿಸಿದ್ದಾರೆ. ಆದರೂ ಹೃದಯ ಭಾಗದಲ್ಲಿ ಮದ್ಯಾಹ್ನದವರೆಗೂ ಅಂಗಡಿಗಳು ಮುಚ್ಚುವ ಸಾಧ್ಯತೆಯಿದೆ.

ಸಾರಿಗೆ ಬಸ್ ಸಂಚಾರವಿರಲಿದೆ: ಮೈಸೂರು ಗ್ರಾಮಾಂತರ ವಿಭಾಗದ ಎಲ್ಲಾ ಬಸ್‍ಗಳ ಸಂಚಾರ ನಾಳೆ ಇರಲಿದೆ. ಸಬರ್ಬ್ ಬಸ್ ನಿಲ್ದಾಣದಿಂದ ವಿವಿಧ ಜಿಲ್ಲೆಗಳಿಗೆ ಹೋಗುವ ಎಲ್ಲಾ ಬಸ್‍ಗಳ ಸಂಚಾರ ಎಂದಿನಂತೆ ನಡೆಯಲಿದೆ. ಗ್ರಾಮಾಂತರ ವಿಭಾಗದ ಡಿಸಿ ಕೆ.ಹೆಚ್.ಶ್ರೀನಿವಾಸ್ ಮಾತನಾಡಿ, ಭಾರತ್ ಬಂದ್ ಇದ್ದರೂ ಸಾರಿಗೆ ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಯ ಉಂಟಾಗುವುದಿಲ್ಲ. ಎಲ್ಲಾ ಮಾರ್ಗಗಳಲ್ಲೂ ಬಸ್ ಸಂಚಾರ ನಡೆಯಲಿದೆ. ಪ್ರಯಾಣಿಕರು ಆತಂಕ ಪಡುವ ಅಗತ್ಯವಿಲ್ಲ ಎಂದರು.

ನಗರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಪಿ.ನಾಗರಾಜ್ ಮಾತ ನಾಡಿ, ಮೈಸೂರು ನಗರ ವಿಭಾಗದಲ್ಲಿನ ಎಲ್ಲಾ ಮಾರ್ಗಗಳಲ್ಲೂ ನಗರ ಸಾರಿಗೆ ಬಸ್ ಸಂಚಾರವಿರುತ್ತದೆ. ನಗರ ವ್ಯಾಪ್ತಿಯಲ್ಲಿ ಬಸ್ ಸಂಚಾರಕ್ಕೆ ಯಾವುದೇ ಅಡಚಣೆ ಉಂಟಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Translate »