ಮೈಸೂರು

ಜನಜಾಗೃತಿಗಾಗಿ ಮಕ್ಕಳ ಸಹಾಯವಾಣಿಯಿಂದ `ಮೈತ್ರಿ ಸಪ್ತಾಹ’

November 15, 2018

ಮೈಸೂರು: ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿ ತಡೆ ಸೇರಿದಂತೆ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಜನರಲ್ಲಿ ಜಾಗೃತಿ ಮೂಡಿಸಲು ಮಕ್ಕಳ ಸಹಾಯವಾಣಿ-1098 ನಡೆಸುತ್ತಿರುವ `ಮೈತ್ರಿ ಸಪ್ತಾಹ’ಕ್ಕೆ ಬುಧವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇ ಶಕಿ ಕೆ.ರಾಧ ಚಾಲನೆ ನೀಡಿದರು.

ಮೈಸೂರಿನ ಕುಪ್ಪಣ್ಣ ಪಾರ್ಕ್‍ನಲ್ಲಿ ಇಂದು ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಬ್ಯಾನರ್ ಮೇಲೆ ಸಹಿ ಮಾಡುವ ಮೂಲಕ `ಮೈತ್ರಿ ಸಪ್ತಾಹ’ವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮೈಸೂರು ಜಿಲ್ಲೆ ಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯೊಂದಿಗೆ ಮಕ್ಕಳ ಸಹಾಯ ವಾಣಿ ಹಾಗೂ ಇನ್ನಿತರ ಸ್ವಯಂ ಸೇವಾ ಸಂಸ್ಥೆಗಳು ಮಕ್ಕಳ ಹಕ್ಕುಗಳ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರೂ ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿ, ಮಕ್ಕಳ ಮೇಲಿನ ದೈಹಿಕ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆಯುತ್ತಲೇ ಇವೆ ಎಂದು ವಿಷಾದಿಸಿದರು. ಈಗಾಗಲೇ ಮಕ್ಕಳ ಹಕ್ಕು ಗಳ ಕುರಿತಂತೆ ಸಾಕಷ್ಟು ಜಾಗೃತಿ ಉಂಟಾ ಗಿದೆ. ಇದರ ಪರಿಣಾಮವಾಗಿ ಜಿಲ್ಲೆಯ ಯಾವುದೇ ಮೂಲೆಯಲ್ಲಿ ಬಾಲ್ಯ ವಿವಾಹ ನಡೆಯುತ್ತಿದ್ದರೆ, ಬಾಲಕಾರ್ಮಿಕ ಪದ್ಧತಿ ಜಾರಿಯಲ್ಲಿದ್ದರೆ ಸಾರ್ವಜನಿಕರು ಸಹಾಯ ವಾಣಿಗೆ ಕರೆ ಮಾಡಿ ದೂರು ನೀಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ಆದರೂ ಇಂದಿಗೂ ಜೀವಂತವಾಗಿರುವ ಬಾಲ್ಯ ವಿವಾಹ ಸೇರಿ ದಂತೆ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣ ಗಳನ್ನು ತಡೆಗಟ್ಟಲು ಸಾರ್ವಜನಿಕರು ಕೈ ಜೋಡಿಸಬೇಕು ಎಂದು ಅವರು ಕೋರಿದರು.

ಮಕ್ಕಳ ಸಹಾಯವಾಣಿ ಹಾಗೂ ಆರ್‍ಎಲ್ ಹೆಚ್‍ಪಿ ವತಿಯಿಂದ ಜಿಲ್ಲೆಯ ವಿವಿಧೆಡೆ ನ.21ರವರೆಗೂ ವಿವಿಧ ಜಾಗೃತಿ ಕಾರ್ಯ ಕ್ರಮ ನಡೆಯಲಿದೆ. ಇದರಲ್ಲಿ ಶಾಲೆ ಬಿಟ್ಟ ಮಕ್ಕಳು, ದೌರ್ಜನ್ಯದಿಂದ ರಕ್ಷಿಸಲ್ಪಟ್ಟ ಮಕ್ಕಳು ಹಾಗೂ ಸಂಘ-ಸಂಸ್ಥೆಗಳ ಕಾರ್ಯಕರ್ತ ರಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಆ ನಂತರ ಸಾರ್ವಜನಿಕ ಸ್ಥಳಗಳಲ್ಲಿ ಅರಿವು ಮೂಡಿಸಿ ಮಕ್ಕಳ ಹಕ್ಕುಗಳ ರಕ್ಷಣೆ, ಮಕ್ಕಳಿಗೆ ಶಿಕ್ಷಣ ಕೊಡಿಸುವುದು, ಮಾನಸಿಕ ಹಾಗೂ ಲೈಂಗಿಕ ದೌರ್ಜನ್ಯ ತಡೆಗೆ ಮುಂದಾಗುವಂತೆ ಮನವರಿಕೆ ಮಾಡಿಕೊಡ ಲಾಗುತ್ತದೆ ಎಂದರು.

ಕಾರ್ಯಕ್ರಮಕ್ಕೂ ಮುನ್ನ ವಿವಿಧೆಡೆಗಳಿಂದ ಆಗಮಿಸಿದ್ದ ಮಕ್ಕಳು 2 ನಿಮಿಷಗಳ ಮೌನಾ ಚರಣೆ ನಡೆಸಿ ಸೋಮವಾರ ನಿಧನರಾದ ಕೇಂದ್ರ ಸಚಿವ ಅನಂತ್‍ಕುಮಾರ್ ಅವರ ಆತ್ಮಕ್ಕೆ ಶಾಂತಿ ಕೋರಿದರು. ಬಳಿಕ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ಮಕ್ಕಳ ಮೇಲಿನ ದೌರ್ಜನ್ಯದ ಸ್ವರೂಪ, ಸುತ್ತಮುತ್ತಲಿನ ವಾತಾವರಣ, ಪ್ರಕೃತಿ, ಪರಿಸರ ಮಾಲಿನ್ಯ, ಅರಣ್ಯ ಸಂರಕ್ಷಣೆ ಸೇರಿದಂತೆ ಇನ್ನಿತರ ವಿಷಯಗಳ ಬಗ್ಗೆ ಚಿತ್ರ ಬಿಡಿಸಿ ಗಮನ ಸೆಳೆ ದರು. ಕಾರ್ಯಕ್ರಮದಲ್ಲಿ ಹೆಚ್.ಡಿ.ಕೋಟೆ ತಾಲೂಕಿನ ನಿಸರ್ಗ ಶಾಲೆಯಲ್ಲಿ ಓದುತ್ತಿ ರುವ ಕಲ್ಲಳ್ಳ ಹಾಡಿಯ ಮಕ್ಕಳು ಪಾಲ್ಗೊಂಡಿ ದ್ದರು. ಇದೇ ವೇಳೆ ಆರ್‍ಎಲ್‍ಹೆಚ್‍ಪಿ ನಿರ್ದೇ ಶಕಿ ಸರಸ್ವತಿ ಅವರು ಜಿಲ್ಲೆಯಲ್ಲಿ ನಡೆಯು ತ್ತಿರುವ ಮಕ್ಕಳ ಮೇಲಿನ ದೌರ್ಜನ್ಯಗಳು, ಹೋರಾಟಗಳು, ಬೆಳಕಿಗೆ ಬಂದಿರುವ ಪ್ರಕರಣ ಗಳು, ರಕ್ಷಿಸಲ್ಪಟ್ಟ ಮಕ್ಕಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ನಿಸರ್ಗ ಫೌಂಡೇಷನ್ ಸಂಸ್ಥೆಯ ನಿರ್ದೇಶಕ ನಂಜುಂಡಯ್ಯ, ಫಾ.ಸ್ಟ್ಯಾನಿ ಡಿ ಅಲ್ಮೇಡಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »