ಮೈಸೂರು: ನಾವು ಬ್ರಾಹ್ಮಣರು ಒಗ್ಗಟ್ಟು ಪ್ರದರ್ಶಿಸುವ ನಿಟ್ಟಿ ನಲ್ಲಿ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಡಿ.15 ಮತ್ತು 16ರಂದು ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಬೃಹತ್ ಸಮಾವೇಶ ಆಯೋಜಿಸಿರುವು ದಾಗಿ ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಇಂದಿಲ್ಲಿ ತಿಳಿಸಿದರು.
ಮೈಸೂರಿನ ಚಾಮುಂಡಿಪುರಂ 3ನೇ ಅಡ್ಡರಸ್ತೆಯಲ್ಲಿರುವ ಸಮಾವೇಶ ಕಚೇರಿ ಯಲ್ಲಿ ಸುದ್ದಿಗೋಷ್ಠಿಯಲ್ಲಿ ಸಮಾವೇಶ ಕುರಿತ ಮಾಹಿತಿಗಳನ್ನು ಅವರು ನೀಡಿದರು. ಸಮಾ ವೇಶದಲ್ಲಿ ವಿವಿಧ ಮಠಗಳ ಮುಖ್ಯಸ್ಥರು, ತ್ರಿಮತಸ್ಥ ಯತಿವರ್ಯರು ಭಾಗವಹಿಸಲಿ ದ್ದಾರೆ. 25,000ಕ್ಕೂ ಹೆಚ್ಚು ಮಂದಿ ಭಾಗ ವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು.
ಎರಡು ದಿನಗಳ ಸಮಾವೇಶಕ್ಕೆ ಸಿಎಂ ಕುಮಾರಸ್ವಾಮಿ ಸೇರಿದಂತೆ ಇನ್ನಿತರ ಅತಿಥಿ, ಗಣ್ಯರನ್ನು ಆಹ್ವಾನಿಸುವ ಕುರಿತು ಚರ್ಚೆ ಗಳು ನಡೆದಿವೆ. ಅಲ್ಲದೆ ಡಿ.16ರಂದು ಸಮಾ ವೇಶದ ಅಂಗವಾಗಿ ಅಂದು ಬೆಳಿಗ್ಗೆ 8 ಗಂಟೆಗೆ ನಡೆಯುವ ಬೃಹತ್ ಶೋಭಾ ಯಾತ್ರೆಯಲ್ಲಿ ವಿವಿಧ ಸಾಂಸ್ಕøತಿಕ ಮತ್ತು ಜಾನಪದ ಕಲಾತಂಡಗಳು, ಭಜನಾ ತಂಡ ಗಳು ಮೈಸೂರಿನ ಶಂಕರಮಠದಿಂದ ಗಣಪತಿ ಸಚ್ಚಿದಾನಂದ ಆಶ್ರಮದವರೆಗೆ ಪ್ರಮುಖ ರಸ್ತೆಗಳ ಮೂಲಕ ಸಾಗಲಿದೆ ಎಂದರು.
ಸರ್ಕಾರ ಬ್ರಾಹ್ಮಣ ವೆಲ್‍ಫೇರ್ ಬೋರ್ಡ್ ಮಾಡಿ ಅದಕ್ಕಾಗಿ 25 ಕೋಟಿ ರೂ.ಗಳನ್ನು ಮೀಸಲಿರಿಸಿದೆ. ಆದರೆ ಬೋರ್ಡ್ ಇನ್ನೂ ಅನುಷ್ಠಾನಗೊಂಡಿಲ್ಲ. ಅದನ್ನು ಶೀಘ್ರ ಕಾರ್ಯಾನುಷ್ಠಾನಗೊಳಿಸಬೇಕು. ಸೌಲಭ್ಯ ವಂಚಿತರಾಗಿರುವ ಕಡು ಬಡವ ಬ್ರಾಹ್ಮಣ ರಿಗೂ ಸೌಲಭ್ಯಗಳು ಸಿಗುವಂತಾಗಬೇಕು. ಮೈಸೂರಲ್ಲಿ ಗಾಯತ್ರಿ ಭವನ ನಿರ್ಮಾ ಣಕ್ಕೆ ನಿವೇಶನ ನೀಡಬೇಕು ಎಂದು ಸಮಾ ವೇಶದಲ್ಲಿ ಒಕ್ಕೊರಲಿನಿಂದ ಒತ್ತಾಯಿಸ ಲಾಗುವುದು. ಸಮಾವೇಶದ ಪ್ರಚಾರದ ಅಂಗವಾಗಿ ನ.25ರಂದು ಬ್ರಾಹ್ಮಣ ಯುವ ವೇದಿಕೆಯ 500 ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸಲಿದ್ದು, ಮೈಸೂರಿನ ಯೋಗಾ ನರಸಿಂಹಸ್ವಾಮಿ ದೇವಸ್ಥಾನವೂ ಸೇರಿದಂತೆ ವಿವಿಧ ದೇವಸ್ಥಾನಗಳ ಮೂಲಕ ಗಣಪತಿ ಆಶ್ರಮದವರೆಗೆ ರ್ಯಾಲಿ ನಡೆಸಲಿದ್ದಾರೆ. ಮನೆ ಮನೆಗೆ ತೆರಳಿ ಕರಪತ್ರಗಳನ್ನು ಹಂಚಿ ಸಮುದಾಯದ ಜನರು ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಲಿದ್ದಾರೆ ಎಂದರು.
ಸಮಾವೇಶದಲ್ಲಿ ಶೇ.85ಕ್ಕೂ ಹೆಚ್ಚು ಅಂಕ ಗಳಿಸಿದ ವಿಪ್ರ ಸಮುದಾಯದ ವಿದ್ಯಾರ್ಥಿ ಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅವರ ಶೈಕ್ಷ ಣಿಕ ಉನ್ನತಿಗೆ ಉತ್ತೇಜನ ನೀಡಲಾಗು ವುದು ಎಂದು ತಿಳಿಸಿದರು. ಸುದ್ದಿಗೋಷ್ಠಿ ಯಲ್ಲಿ ಡಿ.ಟಿ.ಪ್ರಕಾಶ್ ಅವರು ಸಮಾ ವೇಶದ ಸ್ಟಿಕ್ಕರ್ ಮತ್ತು ಕರಪತ್ರವನ್ನು ಬಿಡು ಗಡೆ ಮಾಡಿದರು. ಈ ಸಂದರ್ಭದಲ್ಲಿ ಸಮಾವೇಶ ಸಮಿತಿಯ ಪದಾಧಿಕಾರಿ ಗಳಾದ ಕೃಷ್ಣದಾಸ್ ಪುರಾಣಿಕ್, ಗೋಪಾಲ ರಾವ್, ಡಿ.ಎನ್.ಕೃಷ್ಣಮೂರ್ತಿ, ಸೌಭಾಗ್ಯ ಮೂರ್ತಿ, ಡಾ.ಲಕ್ಷ್ಮಿ, ಜಯಸಿಂಹ ಎನ್. ಶ್ರೀಧರ್, ವಿ.ಹರೀಶ್, ಮಂಜುನಾಥ್ ಇನ್ನಿತರರು ಉಪಸ್ಥಿತರಿದ್ದರು.