ಸಹಕಾರಿ ಕ್ಷೇತ್ರದಲ್ಲಿ ಹೊಸ ಚಿಂತನೆಗಳಿಗೆ ಆದ್ಯತೆ
ಮೈಸೂರು

ಸಹಕಾರಿ ಕ್ಷೇತ್ರದಲ್ಲಿ ಹೊಸ ಚಿಂತನೆಗಳಿಗೆ ಆದ್ಯತೆ

November 15, 2018

ಮೈಸೂರು:  ಇಂದು ಗ್ರಾಹಕರು ಎಚ್ಚೆತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ವಂತ ಪೈಪೋಟಿಗೆ ವ್ಯಾಪಾರಿಗಳು ಮುಂದಾ ಗಿದ್ದು, ಗುಣಾತ್ಮಕ ಆಹಾರ ಪದಾರ್ಥ ಗಳನ್ನು ನೀಡುತ್ತಿದ್ದಾರೆ. ಅದೇ ರೀತಿ ಮೀನು ಗಾರಿಕೆ ವ್ಯಾಪಾರವು ಇನ್ನಷ್ಟು ಅಭಿವೃದ್ಧಿ ಕಾಣಬೇಕಾಗಿದೆ ಎಂದು ಮೈಸೂರು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಚ್.ವಿ. ರಾಜೀವ್ ಇಂದಿಲ್ಲಿ ಅಭಿಪ್ರಾಯಪಟ್ಟರು.

ಮೈಸೂರಿನ ಸಹಕಾರ ಭವನದ ಆವ ರಣದಲ್ಲಿ 65ನೇ ಅಖಿಲ ಭಾರತ ಸಹ ಕಾರ ಸಪ್ತಾಹದ ಉದ್ಘಾಟನಾ ಸಮಾ ರಂಭದ ಅಧ್ಯಕ್ಷತೆ ವಹಿಸಿ ಅವರು ಮಾತ ನಾಡಿದರು. ಸಹಕಾರಿ ಮಾರಾಟ, ಸಂಸ್ಕ ರಣ ಮತ್ತು ಶೇಖರಣೆ ವಿಷಯ ಕುರಿತು ಮಾತನಾಡಿದ ಅವರು, ಇಂದು ಎಚ್ಚೆತ್ತಿ ರುವ ಗ್ರಾಹಕ ಉತ್ತಮ ಗುಣಮಟ್ಟದ ವಸ್ತು ಗಳನ್ನೇ ನಿರೀಕ್ಷಿಸುತ್ತಾನೆ. ಈ ಹಿನ್ನೆಲೆಯಲ್ಲಿ ಅವರಿಗೆ ಗುಣಮಟ್ಟದ ಆಹಾರ ಪೂರೈ ಸುವತ್ತ ಸಹಕಾರ ಸಂಘಗಳು ಮುಂದಾಗ ಬೇಕು ಎಂದು ತಿಳಿಸಿದರು.

ಇಂದು ಅಲ್ಲಲ್ಲಿ ಮೀನು ಮಾರಾಟ ಮಳಿಗೆ ಗಳಿವೆ. ಅಂತೆಯೇ ಒಳಗಿರುವ ಆಹಾರ ದಲ್ಲೂ (ಮೀನು) ಗುಣಮಟ್ಟ, ಶುಚಿಗೆ ಆದ್ಯತೆ ನೀಡುವಂತಾಗಬೇಕು ಎಂದು ಸಲಹೆ ನೀಡಿದರು. ರೈತರು ಬೆಳೆಯುವ ಹಣ್ಣು, ತರಕಾರಿ ಉತ್ಪನ್ನಗಳಿಗೆ ಹೆಚ್ಚು ಆದಾಯ ಸಿಗುವಂತಾಗಬೇಕು. ಗುಣಮಟ್ಟದ ಆಹಾರ ಉತ್ಪಾದನೆಗೂ ಆದ್ಯತೆ ನೀಡಬೇಕು. ಆ ನಿಟ್ಟಿನಲ್ಲಿ ಸಹಕಾರಿ ಕ್ಷೇತ್ರದಲ್ಲಿ ಹೊಸ ಚಿಂತನೆ ಗಳುಳ್ಳ ಸಹಕಾರಿಗಳು ಬರಬೇಕು. ಆ ಮೂಲಕ ಎಲ್ಲರೂ ಅಭಿವೃದ್ಧಿ ಹೊಂದ ಬೇಕು ಎಂದು ಅಭಿಪ್ರಾಯಪಟ್ಟರು.

ಕನಾರ್ಟಕ ರಾಜ್ಯ ಸಹಕಾರ ಲ್ಯಾಂಪ್ಸ್ ಮಹಾಮಂಡಳದ ಅಧ್ಯಕ್ಷ ಮುದ್ದಯ್ಯ ಮಾತ ನಾಡಿ, ಆದಿವಾಸಿಗಳ ಉದ್ಧಾರವಾದರೆ ಸಮಾಜದ ಆರೋಗ್ಯವೂ ವೃದ್ಧಿಯಾಗು ತ್ತದೆ. ಆದಿವಾಸಿಗಳು ಜೀತಪದ್ಧತಿಗೆ ಹೋಗಬಾರದು.ಅವರ ಜೀವನಮಟ್ಟ ಸುಧಾರಿಸಬೇಕು ಎಂಬ ಹಿನ್ನೆಲೆಯಲ್ಲಿ ಸ್ಥಾಪನೆ ಯಾದ ಲ್ಯಾಂಪ್ಸ್ ಸಹಕಾರ ಸಂಘ ಅರಣ್ಯ ಉತ್ಪನ್ನಗಳ ಮೂಲಕ ಶುದ್ಧ ಬದುಕು ನಡೆಸು ತ್ತಿದೆ. ಸಂಘ ಉತ್ಪಾದಿಸುವ ಶುದ್ಧ ಜೇನು ತುಪ್ಪವನ್ನು ಎಲ್ಲರೂ ಬಳಸಬೇಕು ಎಂದರು.

ಮೈಸೂರು ಜಿಲ್ಲಾ ಸಹಕಾರ ಸಂಘಗಳ ಜಂಟಿ ನಿಬಂಧಕ ಬಿ.ಆರ್.ಲಿಂಗರಾಜು ಮಾತನಾಡಿ, ಪ್ರತಿಯೊಬ್ಬ ಸಹಕಾರಿಗಳು ಸಹಕಾರ ಸಪ್ತಾಹವನ್ನು ಸಹಕಾರ ಹಬ್ಬ ವನ್ನಾಗಿ ಆಚರಿಸಬೇಕು. ಸಹಕಾರ ಸಂಘ ಗಳು ಲಾಭ ಗಳಿಸುವತ್ತ ಹೆಜ್ಜೆ ಹಾಕಬೇಕು. ಗ್ರಾಮೀಣ ಪ್ರದೇಶ ಸಮೃದ್ಧಿಯಾಗಬೇಕು. ರೈತರ ಉತ್ಪಾದಿತ ವಸ್ತುಗಳಿಗೆ ಮಾರುಕಟ್ಟೆ ಸಿಗುವಂತಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮೀನುಗಾರರ ಮಹಾ ಮಂಡಳ ಅಧ್ಯಕ್ಷ ಎಸ್.ಮಾದೇಗೌಡ, ಮೈಸೂರು ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇ ಶಕರಾದ ಪಿ.ಸತೀಶ್, ಡಾ.ಬೃಹದಾಂಬ, ಲೀಲಾ ನಾಗರಾಜು, ಮೈಸೂರು ಟಿಎಪಿ ಸಿಎಂಎಸ್ ಅಧ್ಯಕ್ಷೆ ರುಕ್ಮಿಣಿ, ಮೈಸೂರು ಸಹಕಾರ ಸಂಘಗಳ ಉಪ ನಿಬಂಧಕ ಡಾ.ಜಿ.ಉಮೇಶ್, ಎಂಸಿಡಿಸಿಸಿ ಬ್ಯಾಂಕ್ ಪ್ರಧಾನ ಮುಖ್ಯ ಕಾರ್ಯ ನಿರ್ವಹಣಾ ಧಿಕಾರಿ ಎಂ.ಹಿರಿಯಣ್ಣ, ಮೈಸೂರು ಜಿಲ್ಲಾ ಸಹಕಾರಿ ಹಾಲು ಒಕ್ಕೂಟದ ಅಪರ ನಿರ್ದೇಶಕ ಮಲ್ಲಿಕಾರ್ಜುನ, ಇಫ್ಕೋ ಸಂಸ್ಥೆ ಮುಖ್ಯ ಪ್ರಾದೇಶಿಕ ವ್ಯವಸ್ಥಾಪಕ ಟಿ.ಎಲ್.ರಘು, ಮೈಸೂರು ಜಿಲ್ಲಾ ಸಹ ಕಾರಿ ಹಾಲು ಒಕ್ಕೂಟದ ಉಪ ವ್ಯವ ಸ್ಥಾಪಕ ಡಾ.ಸಿ.ದಿವಾಕರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »