ಚಾಮರಾಜನಗರ

ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹ ಚಾಮರಾಜನಗರದಲ್ಲಿ ಪ್ರೌಢ ಶಾಲಾ ಶಿಕ್ಷಕರ ಪ್ರತಿಭಟನೆ

October 1, 2018

ಚಾಮರಾಜನಗರ:  ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರೌಢ ಶಾಲಾ ಶಿಕ್ಷಕರು ನಗರದ ಜಿಲ್ಲಾಡಳಿತ ಭವನದ ಮುಂಭಾಗ ಶನಿ ವಾರ ಪ್ರತಿಭಟನೆ ನಡೆಸಿದರು.

ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಆಶ್ರಯದಲ್ಲಿ ಭವನದ ಮುಂಭಾಗ ಜಮಾಯಿಸಿದ ಸಂಘದ ಪದಾಧಿಕಾರಿಗಳು ಹಾಗೂ ಶಿಕ್ಷಕರು ಸ್ವಲ್ಪ ಸಮಯ ಧರಣಿ ನಡೆಸಿದರು. ನಂತರ ಜಿಲ್ಲಾ ಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಪ್ರೌಢ ಶಾಲಾ ಶಿಕ್ಷಕರ ವೇತನ ತಾರ ತಮ್ಯದ ಹಿನ್ನೆಲೆಯಲ್ಲಿ ರಚಿಸಲಾಗಿದ್ದ ಕುಮಾರ್‍ನಾಯಕರವರ ವರದಿಯನ್ವಯ 2016 ಜೂನ್ 1ರಿಂದ ಅನ್ವಯವಾಗುಂತೆ ನೀಡಲಾಗಿದ್ದ ಒಂದು ವಾರ್ಷಿಕ ವಿಶೇಷ ಬಡ್ತಿ ಯನ್ನು ಮೂಲ ವೇತನದಿಂದ ಪ್ರತ್ಯೇಕಿಸಿ (ಪಿಪಿ) ವೈಯಕ್ತಿಕ ವೇತನವೆಂದು ಪರಿ ಗಣಿಸಿ ಹಿಂಬಾಗಿಲಿನ ಮೂಲಕ ವಾರ್ಷಿಕ ಬಡ್ತಿಯ ಸವಲತ್ತುಗಳನ್ನು ಕಡಿತಗೊಳಿಸುತ್ತಿರು ವುದನ್ನು ಕೂಡಲೇ ಕೈಬಿಡಬೇಕು. 2018ರ ಆಗಸ್ಟ್ 1ರ ನಂತರ ಪ್ರಾಥಮಿಕ ಶಾಲೆ ಯಿಂದ ಮುಂಬಡ್ತಿ ಹಾಗೂ ನೇರ ನೇಮ ಕಾತಿಯ ಮೂಲಕ ಆಯ್ಕೆಯಾಗಿ ಪ್ರೌಢ ಶಾಲಾ ಸಹ ಶಿಕ್ಷಕರಾಗಿ ಕರ್ತವ್ಯ ನಿರ್ವ ಹಿಸುತ್ತಿರುವ ಶಿಕ್ಷಕರುಗಳಿಗೆ 400 ರೂ. ವಿಶೇಷ ಭತ್ಯೆಯನ್ನು ಮಂಜೂರು ಮಾಡಿ ಅದೇ ವೇತನ ಆಯೋಗದ ಶಿಫಾರಸ್ಸಿ ನನ್ವಯ 2018 ಏಪ್ರಿಲ್ 1ರಿಂದ ಒಂದು ವಿಶೇಷ ವಾರ್ಷಿಕ ಬಡ್ತಿಯನ್ನು ಮಂಜೂರು ಮಾಡಬೇಕು ಎಂದು ಪ್ರತಿಭಟನಾ ನಿರತ ಶಿಕ್ಷಕರು ಒತ್ತಾಯಿಸಿದರು.

ಸರ್ಕಾರಿ ಮತ್ತು ಅನುದಾನಿತ ಪ್ರೌಢ ಶಾಲಾ ತರಗತಿಗಳ ವಿದ್ಯಾರ್ಥಿ ಹಾಗೂ ಶಿಕ್ಷಕರ ಅನುಪಾತವನ್ನು ಈಗಿನ 70:1ರ ಬದಲಾಗಿ 50:1 ರಂತೆ ನಿಗದಿಪಡಿಸಬೇಕು. ಪ್ರಾಥ ಮಿಕ ಶಾಲೆಯಿಂದ ಪ್ರೌಢಶಾಲೆಗೆ ಪ್ರೌಢಶಾಲೆಯಿಂದ ಪದವಿ ಪೂರ್ವ ಕಾಲೇ ಜುಗಳಿಗೆ ಹಾಗೂ ಮುಖ್ಯೋಪಾಧ್ಯಾಯ ಹುದ್ದೆಗಳಿಗೆ ಮುಂಬಡ್ತಿ ಹೊಂದಿದ ಶಿಕ್ಷಕರು ಹಾಗೂ ಉಪನ್ಯಾಸಕರುಗಳಿಗೆ ಹಿಂದಿನ ವೃಂದದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ, 10, 15, 20, 25 ವರ್ಷಗಳ ಸ್ವಯಂ ಚಾಲಿತ ಕಾಲ ಮಿತಿ ಬಡ್ತಿಗಳನ್ನು ಮಂಜೂರು ಮಾಡು ವುದು ಸೇರಿದಂತೆ ಇತರ ತಮ್ಮ ನ್ಯಾಯ ಯುತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು. ಸಂಘದ ಅಧ್ಯಕ್ಷ ಸಿದ್ದ ಮಲ್ಲಪ್ಪ, ಕಾರ್ಯದರ್ಶಿ ಶಿವಲಂಕಾರ್, ಉಪಾಧ್ಯಕ್ಷರಾದ ನಿಂಗೇಗೌಡ, ಬಿ.ಬಸವ ರಾಜು, ಶಿವವೀರಭದ್ರಪ್ಪ, ರಾಜ್ಯ ಸಂಘದ ಮಂಜುನಾಥ್, ತಾಲೂಕು ಅಧ್ಯಕ್ಷರಾದ ಹನೂರಿನ ಸಿದ್ದಪ್ಪ, ಕೊಳ್ಳೇಗಾಲದ ವಿಜಯ ಕುಮಾರ್, ಗುಂಡ್ಲುಪೇಟೆ ಕಿರಣ್ ರಾಜು, ಶಿಕ್ಷಕರಾದ ಗೋವಿಂದರಾಜು, ಸಿದ್ದರಾಜು, ಆರ್.ಪಿ.ನಿರಂಜನ್, ಮುರುಗೇಶ್, ಲಕ್ಷ್ಮೀ, ಶೈಲಜಾ, ಮಹೇಶ್, ನಂಜುಂಡಸ್ವಾಮಿ, ಶಾಂತರಾಜು, ಅಕ್ಬರ್, ಸಿದ್ದಲಿಂಗಸ್ವಾಮಿ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »