ಉಪ್ಪಾರ ಸಮುದಾಯ ಶಿಕ್ಷಣಕ್ಕೆ ಒತ್ತು ನೀಡಲು ಸಲಹೆ
ಚಾಮರಾಜನಗರ

ಉಪ್ಪಾರ ಸಮುದಾಯ ಶಿಕ್ಷಣಕ್ಕೆ ಒತ್ತು ನೀಡಲು ಸಲಹೆ

October 1, 2018

ಯಳಂದೂರು:  ಉಪ್ಪಾರ ಸಮುದಾಯ ರಾಜಕೀಯ, ಆರ್ಥಿಕ, ಶೈಕ್ಷ ಣಿಕವಾಗಿ ಗುರುತಿಸಿಕೊಳ್ಳಬೇಕಾದರೆ ಮೊದಲು ಉಪ್ಪಾರ ಸಮಾಜ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕೆಂದು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟ ರಂಗಶೆಟ್ಟಿ ತಿಳಿಸಿದರು.

ಪಟ್ಟಣ ದಿವಾನ್ ಪೂರ್ಣಯ್ಯನವರ ಪ್ರಾಚ್ಯವಸ್ತು ಸಂಗ್ರಹಾಲಯದ ಅವರಣ ದಲ್ಲಿ ಯಳಂದೂರು ತಾಲೂಕು ಉಪ್ಪಾರ ಸಮಾಜದ ಗಡಿಮನೆ, ಕಟ್ಟೆಮನೆ, ಕೂಟ ಗಳ ಒಕ್ಕೂಟದಿಂದ ಉಪ್ಪಾರ ಸಮು ದಾಯದ ಚುನಾಯಿತ ಮುಖಂಡರು ಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಈಗಾಗಲೇ ಸಮುದಾಯವನ್ನು ಎಸ್‍ಸಿ, ಎಸ್‍ಟಿ ಮೀಸಲಿಗೆ ಸೇರ್ಪಡೆ ಮಾಡ ಬೇಕೆಂದು ಒತ್ತಾಯ ಮಾಡಲಾಗಿದೆ. ಅದೇ ರೀತಿ ಸರಕಾರ ಸುಮಾರು 150 ಕೋಟಿ ಅನುದಾನ ಬಳಕೆ ಮಾಡಿ ವರದಿ ತಯಾರು ಮಾಡಿದೆ. ಮುಂದಿನ ದಿನಗಳಲ್ಲಿ ಸಮಿತಿ ವರದಿ ಆಧರಿಸಿ ಜನಾಂಗವನ್ನು ಯಾವ ವರ್ಗಕ್ಕೆ ಸೇರಿಸಬೇಕೆಂದು ತೀರ್ಮಾ ನಿಸಲಾಗುವುದು ಎಂದು ತಿಳಿಸಿದರು.

ಉಪ್ಪಾರ ಜನಾಂಗ ಇತ್ತೀಚಿನ ವರ್ಷ ಗಳಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡು ತ್ತಿರುವುದು ಶ್ಲಾಘನೀಯ ಆದರೆ ಬಾಲ್ಯ ವಿವಾಹದಿಂದ ಮಕ್ಕಳ ಭವಿಷ್ಯ ಹಾಳು ಮಾಡುವುದರ ಜತೆಯಲ್ಲಿ ಅವರ ಆರೋ ಗ್ಯಕ್ಕೂ ಕೂಡಾ ತೊಂದರೆ ಉಂಟಾಗು ತ್ತದೆ. ಆದ್ದರಿಂದ ಜನಾಂಗ ಕಾಲಕ್ಕೆ ತಕ್ಕಂತೆ ಆಚಾರ ವಿಚಾರಗಳಿಗೆ ಹೊಂದಾಣಿಕೆ ಮಾಡಿ ಕೊಳ್ಳಬೇಕೆಂದು ಮನವಿ ಮಾಡಿದರು.
ಯಳಂದೂರು ತಾಲೂಕು ಕೇಂದ್ರದಲ್ಲಿ ಉಪ್ಪಾರ ಸಮುದಾಯ ಭವನ ನಿರ್ಮಿ ಸಲು ಚಿಂತಿಸಲಾಗಿದೆ.

ಮಹದೇಶ್ವರ ಬೆಟ್ಟದಲ್ಲಿ ಮಹದೇಶ್ವರ ದೇವಾಲಯದಲ್ಲಿ ಎಣ್ಣೆ ಮಜ್ಜನಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಆಡಳಿತ ಅವಧಿ ಯಲ್ಲಿ ಉಪ್ಪಾರ ಜನಾಂಗಕ್ಕೆ ಹೆಚ್ಚಿನ ಆದ್ಯತೆ ನೀಡುವುದರ ಜತೆಯಲ್ಲಿ ಜನಾಂ ಗದ ಅಭಿವೃದ್ಧಿಗೆ ಭಗೀರಥ ನಿಗಮ ಸ್ಥಾಪನೆ ಮಾಡಿದೆ. ಜನಾಂಗದ ವಿದ್ಯಾ ವಂತರನ್ನು ವಿವಿಧ ಹುದ್ದೆಗಳಿಗೆ ನೇಮಕ ಮಾಡಲಾಗಿದೆ.
ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾ ಯಿತಿ ಉಪಾಧ್ಯಕ್ಷ ಜೆ.ಯೋಗೇಶ್,ಟೌನ್ ಪಂಚಾಯಿತಿ ಅಧ್ಯಕ್ಷ ನಿಂಗಣ್ಣ ಅವರನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭಲ್ಲಿ ಜೆ.ಯೋಗೇಶ್ ಮಾತನಾಡಿ, ಯಳಂದೂರು ತಾಲೂಕಿ ನಲ್ಲಿ ವಾಸ ಮಾಡುವ ಉಪ್ಪಾರ ಜನಾಂ ಗಕ್ಕೆ ಸಮುದಾಯ ಭವನ ನಿರ್ಮಿಸಿ ಕೊಳ್ಳಲು 2.50 ಕೋಟಿ ಅನುದಾನ ನೀಡ ಬೇಕೆಂದು ಮನವಿ ಮಾಡಿದ್ದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಜಿಪಂ ಮಾಜಿ ಉಪಾಧ್ಯಕ್ಷ ಸಿದ್ದರಾಜು, ಕೃಷ್ಣಾಪುರ ರಾಚಶೆಟ್ಟಿ, ನಾಗರಾಜು, ದುಗ್ಗಹಟ್ಟಿ ಪ್ರಭುಸ್ವಾಮಿ, ವೈ.ಕೆ.ಮೋಳೆ ಕೃಷ್ಣಯ್ಯ, ಗೋವಿಂದರಾಜು ಮಾಸ್ಟರ್, ರೇಚಣ್ಣ, ಅಂಬಳೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವರಾಮು, ಮಹ ದೇವಶೆಟ್ಟಿ, ನಂಜುಂಡಶೆಟ್ಟಿ, ಕಂದಹಳ್ಳಿ ಪಟೇಲ್ ಮಹೇಶ್, ಕೃಷ್ಣಾಪುರಶೇಖರ್ ಸೇರಿದಂತೆ ತಾಲೂಕಿನ ಉಪ್ಪಾರ ಮುಖಂ ಡರು ಹಾಜರಿದ್ದರು.

Translate »