ಸುತ್ತೂರು ಏತ ನೀರಾವರಿ ಯೋಜನೆ ಕಾಮಗಾರಿ ಸ್ಥಗಿತ: ಆರೋಪ
ಚಾಮರಾಜನಗರ

ಸುತ್ತೂರು ಏತ ನೀರಾವರಿ ಯೋಜನೆ ಕಾಮಗಾರಿ ಸ್ಥಗಿತ: ಆರೋಪ

October 1, 2018

ಚಾಮರಾಜನಗರ: ಕುಡಿಯುವ ನೀರಿನ ಉದ್ದೇಶಕ್ಕಾಗಿ ಚಾಮರಾಜನಗರ, ಯಳಂದೂರು ತಾಲೂಕಿನ 22 ಕೆರೆಗಳು ಮತ್ತು ನಂಜನಗೂಡು ತಾಲೂಕಿನ 3 ಕೆರೆ ಸೇರಿದಂತೆ ಒಟ್ಟು 24 ಕೆರೆಗಳಿಗೆ ಕಬಿನಿ ನದಿಯಿಂದ ನೀರು ತುಂಬಿಸುವ ಸುತ್ತೂರು ಏತ ನೀರಾವರಿ ಯೋಜನೆ ಕಾಮಗಾರಿಯು ಕಳೆದ 3 ತಿಂಗಳಿನಿಂದ ಸ್ಥಗಿತವಾಗಿದೆ ಎಂದು ಜಿಲ್ಲಾ ಅಭಿವೃದ್ಧಿ ಹೋರಾಟ ಸಮಿತಿ ಗಂಭೀರ ಆರೋಪ ಮಾಡಿದೆ.

ನಗರದ ಜಿಲ್ಲಾ ಕಾರ್ಯನಿರತ ಪತ್ರ ಕರ್ತರ ಭವನದಲ್ಲಿ ಭಾನುವಾರ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಸಮಿತಿಯ ಅಧ್ಯಕ್ಷ ಕೆ.ವೀರಭದ್ರಸ್ವಾಮಿ ಮಾತನಾಡಿದರು. ಕಾಮಗಾರಿಗೆ 2017 ಜುಲೈ 14ರಂದು ಚಾಲನೆ ನೀಡಲಾಗಿದೆ. ಕಾಮಗಾರಿ ಮುಕ್ತಾ ಯಕ್ಕೆ ನಿಗದಿಗೊಳಿಸಿರುವ ಸಮಯ 18 ತಿಂಗಳು. ಈಗಾಗಲೇ 14 ತಿಂಗಳು ಕಳೆ ದಿದ್ದು, ಶೇ.50 ರಷ್ಟು ಕಾಮಗಾರಿ ಮುಕ್ತಾಯ ಆಗಿಲ್ಲ. ಸುತ್ತೂರು ಜಾಕ್ವೆಲ್ ಬಳಿ ಪ್ರಗತಿ ಯಲ್ಲಿ ಇದ್ದ ಕಾಮಗಾರಿಯು 3 ತಿಂಗಳಿ ನಿಂದ ಸ್ಥಗಿತವಾಗಿದೆ. 2 ಜಾಕ್ವೆಲ್‍ಗಳ ನಿರ್ಮಾಣದ ಕಾಮಗಾರಿ ಶೇ.40 ರಷ್ಟು ಮುಗಿದಿದೆ. ಪೈಪ್‍ಯೂಳುವ ಕೆಲ ಸವೂ ಸಹ ಸ್ಥಗಿತವಾಗಿದೆ ಎಂದು ಅವರು ದೂರಿದರು.

ಕಾವೇರಿ ನೀರಾವರಿ ನಿಗಮದ ವತಿಯಿಂದ ಕಾಮಗಾರಿ ನಡೆಯುತ್ತಿದೆ. ನಿಗಮದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಾಗೂ ಮೂಲ ಗುತ್ತಿಗೆದಾರರು ಕಾಮಗಾರಿ ನಡೆಸದೇ ಉಪಗುತ್ತಿಗೆ ನೀಡಿದ್ದಾರೆ. ಇದು ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ ಎಂದು ಕೆ.ವೀರಭದ್ರಸ್ವಾಮಿ ಆಪಾದಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟ ರಂಗಶೆಟ್ಟಿ ಗುರುವಾರ ಕಾಮಗಾರಿಯನ್ನು ವೀಕ್ಷಿಸಿದ್ದಾರೆ. ಈ ವೇಳೆ ಅವರು, ಇನ್ನೂ ಆರು ತಿಂಗಳೊಳಗೆ ಕಾಮಗಾರಿ ಪೂರ್ಣಗೊಂಡು ಕೆರೆಗಳಿಗೆ ನೀರು ತುಂಬಲಿದೆ ಎಂದು ಹೇಳಿದ್ದಾರೆ. ಇದು ಜಾರಿಯಾಗದಿದ್ದರೆ ಜಿಲ್ಲಾ ಅಭಿವೃದ್ಧಿ ಹೋರಾಟ ಸಮಿತಿ ಹಾಗೂ ರೈತರು ಒಗ್ಗೂಡಿ ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದರು.

ಅಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವ ರನ್ನು ದಾರಿ ತಪ್ಪಿಸುತ್ತಿದ್ದಾರೆ. ಮೂರು ತಿಂಗಳಿನಿಂದ ಸ್ಥಗಿತವಾಗಿರುವ ಕಾಮಗಾರಿಯನ್ನು ಸಚಿವರು ವೀಕ್ಷಿಸಿದ್ದಾರೆ. ಇನ್ನೂ ಮುಂದಾದರೂ ಅಧಿಕಾರಿಗಳು ಹಾಗೂ ಜನಪ್ರತಿ ನಿಧಿಗಳು ಕಾಮಗಾರಿ ತ್ವರಿತಗೊಳಿಸಲು ಕ್ರಮಕೈಗೊಳ್ಳಬೇಕು ಎಂದು ವೀರಭದ್ರ ಸ್ವಾಮಿ ಒತ್ತಾಯಿಸಿದರು. ರೈತ ಸಂಘದ ಮುಖಂಡ ಹೆಬ್ಬಸೂರು ಬಸವಣ್ಣ, ಮುಖಂ ಡರಾದ ರಾಮಸಮುದ್ರದ ಆರ್.ಪುಟ್ಟಮ ಲ್ಲಪ್ಪ, ಮಹದೇವಪ್ರಸಾದ್, ಬಾಬು, ಕೇಬಲ್ ರಂಗಸ್ವಾಮಿ ಸುದ್ದಿಗೋಷ್ಟಿಯಲ್ಲಿ ಹಾಜರಿದ್ದರು.

Translate »