ತಟ್ಟೆಕೆರೆ ಗ್ರಾಮದ ಕೆರೆ ಏರಿ ಡಾಂಬರ್ ರಸ್ತೆ ಬಿರುಕು
ಹಾಸನ

ತಟ್ಟೆಕೆರೆ ಗ್ರಾಮದ ಕೆರೆ ಏರಿ ಡಾಂಬರ್ ರಸ್ತೆ ಬಿರುಕು

October 1, 2018

ಹಾಸನ: ತಾಲೂಕಿನ ಕಸಬಾ ಹೋಬಳಿ ತಟ್ಟೆಕೆರೆ ಗ್ರಾಮದಲ್ಲಿರುವ ಕೆರೆ ಏರಿಯ ಡಾಂಬರ್ ರಸ್ತೆಯು ಬಿರುಕು ಬಿಟ್ಟಿದ್ದು, ಶಾಸಕ ಪ್ರೀತಮ್ ಜೆ.ಗೌಡ ಸ್ಥಳಕ್ಕಿಂದು ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿ, ಹೆಚ್ಚಿನ ಮಳೆ ಬಂದು ಭೂಮಿ ನೆನೆದು ರಸ್ತೆಯಲ್ಲಿ ಬಿರುಕು ಬಿಟ್ಟಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಬಿರುಕು ಬಿಟ್ಟಿರುವ ರಸ್ತೆ ಭಾಗದಲ್ಲಿ ಸ್ಥಳೀಯರು ಮತ್ತು ಸಾರ್ವಜನಿಕರು ಯಾರೂ ಸಂಚರಿಸದಂತೆ ನಿರ್ಬಂಧ ಹೇರಲಾಗಿದೆ. ಮುಂದೆ ಇನ್ನು ಹೆಚ್ಚಿನ ರೀತಿಯಲ್ಲಿ ಬಿರುಕು ಬಿಡುವ ಸಂಭವ ಇರುವುದರಿಂದ ಕೂಡಲೇ ಬ್ಯಾರಿಕೇಡ್ ಹಾಕುವ ವ್ಯವಸ್ಥೆ ಮಾಡಿ ರಸ್ತೆ ಸರಿಪಡಿಸಲು ಯೋಚಿಸಲಾಗಿದೆ ಎಂದ ಅವರು, ಅದುವರೆಗೂ ಈ ಭಾಗದಲ್ಲಿ ಯಾವ ವಾಹನ ಸಂಚರಿ ಸದಂತೆ ನಿಗಾ ವಹಿಸಲು ಲೋಕೋಪ ಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಶಿವಶಂಕರಪ್ಪ, ಗ್ರಾಪಂ ಸದಸ್ಯರು ಇತರರಿದ್ದರು..

Translate »