ಶಾಸಕ ಪ್ರೀತಂ ಜೆ.ಗೌಡ ಮನೆ ಮೇಲೆ ಕಲ್ಲು ತೂರಾಟಕ್ಕೆ ಖಂಡನೆ ಜೆಡಿಎಸ್ ವಿರುದ್ಧ ಬಿಜೆಪಿ ಪ್ರತಿಭಟನೆ
ಹಾಸನ

ಶಾಸಕ ಪ್ರೀತಂ ಜೆ.ಗೌಡ ಮನೆ ಮೇಲೆ ಕಲ್ಲು ತೂರಾಟಕ್ಕೆ ಖಂಡನೆ ಜೆಡಿಎಸ್ ವಿರುದ್ಧ ಬಿಜೆಪಿ ಪ್ರತಿಭಟನೆ

February 15, 2019

ಹಾಸನ: ಶಾಸಕ ಪ್ರೀತಂ ಜೆ.ಗೌಡ ಅವರ ಮನೆಗೆ ಜೆಡಿಎಸ್ ಕಾರ್ಯಕರ್ತರು ಮುತ್ತಿಗೆ ಹಾಕಿ, ಕಲ್ಲು ತೂರಾಟ ನಡೆಸಿದ ಘಟನೆಯನ್ನು ಖಂಡಿಸಿ ನಗರದಲ್ಲಿ ಗುರುವಾರ ಜಿಲ್ಲಾ ಬಿಜೆಪಿ ಘಟಕದಿಂದ ಪ್ರತಿಭಟನೆ ನಡೆಯಿತು.

ನಗರದ ಹೇಮಾವತಿ ಪ್ರತಿಮೆ ಬಳಿ ಯಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ನೂರಾರು ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಎನ್.ಆರ್.ವೃತ್ತಕ್ಕೆ ತೆರಳಿ ಮಾನವ ಸರಪಳಿ ನಿರ್ಮಿಸಿ, ರಸ್ತೆ ತಡೆ ನಡೆಸಿದರು. ಜೆಡಿಎಸ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ ದರು. ಬಳಿಕ, ಬಿ.ಎಂ.ರಸ್ತೆ ಮೂಲಕ ಜಿಲ್ಲಾ ಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಸರ್ಕಾರ ಅಧಿಕಾರಕ್ಕೆ ಬಂದ 7 ತಿಂಗ ಳಲ್ಲೇ ಗೂಂಡಾಗಿರಿ ಮಾಡುತ್ತಿದ್ದಾರೆ. ಘಟನೆ ನಡೆಯುವ ಮುನ್ನ ಶಾಸಕರ ಮನೆಗೆ ಜೆಡಿಎಸ್ ಕಾರ್ಯಕರ್ತರು ಮುತ್ತಿಗೆ ಹಾಕುವ ವಿಷಯ ಪೊಲೀಸ್ ಇಲಾಖೆಗೆ ತಿಳಿಯದೇ ಹೋಯಿತೆ? ಈ ಘಟನೆ ಬಗ್ಗೆ ಹಲ್ಲೆಗೊಳಗಾದ ಕಾರ್ಯ ಕರ್ತ ನೀಡಿದ ದೂರಿನ ಅನ್ವಯ ಪೊಲೀಸರು ಸಾಮಾನ್ಯವಾದ 324 ಸೆಕ್ಷನ್ ದೂರನ್ನು ದಾಖಲಿಸಿದ್ದಾರೆ. ಆದರೆ, ಈ ಘಟನೆ ಯನ್ನು ಗಮನಿಸಿದರೆ ಸೆಕ್ಷನ್ 307ರಡಿ ದೂರು ದಾಖಲಿಸಬೇಕಿತ್ತು. ಪೊಲೀಸರು ಉಸ್ತುವಾರಿ ಸಚಿವರ ನಿರ್ದೇಶನದಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.

ಶಾಸಕ ಪ್ರೀತಂ ಜೆ.ಗೌಡ ಅವರು, ಯಾವುದೇ ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಾರದೆ ತನ್ನ ಸ್ವಂತ ಸಾಮರ್ಥ್ಯ, ಸಮಾಜ ಸೇವೆ, ಹೋರಾಟ ದಿಂದ ಮೇಲೆ ಬಂದು ಜೆಡಿಎಸ್‍ನ ಭದ್ರ ಕೋಟೆ ಬೇಧಿಸಿ ಹಾಸನದಿಂದ ಆಯ್ಕೆ ಯಾಗಿದ್ದಾರೆ. ಇದು ಜೆಡಿಎಸ್‍ನ ನಾಯ ಕರಿಗೆ ನುಂಗಲಾರದ ತುತ್ತಾಗಿದೆ. ಈ ತರಹದ ಹಲ್ಲೆ ನಡೆದಿರುವುದು ಇದೇನು ಮೊದಲಲ್ಲ. ಚುನಾವಣೆ ಸಮಯದಲ್ಲಿ ಹಲವಾರು ಬಾರಿ ಜೆಡಿಎಸ್ ಕಾರ್ಯ ಕರ್ತರು ಉಸ್ತುವಾರಿ ಸಚಿವ ರೇವಣ್ಣ ಅವರ ಆಣತಿ ಮೇರೆಗೆ ಹಲ್ಲೆ ನಡೆಸಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದರು.

ಒಕ್ಕಲಿಗರಿಂದ ಹಾಗೂ ರೈತರಿಂದ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ದೇವೇಗೌಡರ ಕುಟುಂಬ ಇಂದು ಒಕ್ಕಲಿಗ ರನ್ನು ಮುಗಿಸಲು ಯತ್ನಿಸುತ್ತಿದೆ. ಒಕ್ಕಲಿಗ ರನ್ನು ತಮ್ಮ ಪಕ್ಷದ ಏಳಿಗೆಗಾಗಿ ಮಾತ್ರ ಬಳಿಸಿಕೊಳ್ಳುತ್ತಿದ್ದಾರೆ. ದೇವೇಗೌಡರ ಕುಟುಂಬದವರಿಗೆ ಸರಿಸಮನಾಗಿ ಬೆಳೆ ದರೆ ಅಂಥವರನ್ನು ಮುಗಿಸುವುದೇ ಅವರ ಕೆಲಸ ಎಂದು ಆರೋಪಿಸಿದರು.

ದೇವೇಗೌಡರ ಕುಟುಂಬ ಹಾಗೂ ಅವರ ಬೆಂಬಲಿಗರ ಇಂತಹ ಹಲ್ಲೆಗಳನ್ನು ಎದುರಿಸುವ ಶಕ್ತಿಯನ್ನು ದೇವರು ಹಾಗೂ ರಾಜ್ಯದ ಜನರು ಶಾಸಕ ಪ್ರೀತಂ ಗೌಡ ಮತ್ತು ಅವರಂತಹ ಸಾವಿರಾರು ಯುವಕರಿಗೆ ನೀಡುವಂತಾಗಲಿ. ಸಾವಿರಾರು ಯುವಕರ ರಾಜಕೀಯ ಭವಿಷ್ಯ ಮತ್ತು ರಾಜ್ಯ, ದೇಶದ ಅಭಿವೃದ್ಧಿಗಾಗಿ ಇಂತಹ ಹಲ್ಲೆಗಳನ್ನು ಧಿಕ್ಕರಿಸಬೇಕಿದೆ. ಪ್ರೀತಂ ಗೌಡ ಅವರಿಗೆ ಎಲ್ಲರೂ ಬೆಂಬಲವಾಗಿ ನಿಲ್ಲಬೇಕಿದೆ ಎಂದರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯೋಗಾರಮೇಶ್, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನವೀಲೆ ಅಣ್ಣಪ್ಪ, ಮಾಜಿ ಶಾಸಕ ಬಿ.ವಿ.ಕರೀಗೌಡ, ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಮುಖಂಡರಾದ ಹೆಚ್.ಎಂ.ಸುರೇಶ್ ಕುಮಾರ್, ಶ್ರೀನಿ ವಾಸ್‍ಗೌಡ, ರೇಣುಕುಮಾರ್, ಶೋಭನ್ ಬಾಬು, ಸುರೇಶ್, ಚನ್ನಕೇಶವ, ಹೆಚ್. ಎನ್.ನಾಗೇಶ್, ಮನೋಹರ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಏಟು ತಿಂದ ಕಾರ್ಯಕರ್ತನ ವಿರುದ್ಧ ಜೆಡಿಎಸ್ ಆಕ್ರೋಶ
ಹಾಸನ: ನಿನ್ನೆ ಬಿಜೆಪಿ ಶಾಸಕನ ಮನೆಯ ಮುಂದೆ ನಡೆದ ದಾಂಧಲೆ ವೇಳೆ ಕಲ್ಲಿನಿಂದ ಹೊಡೆತ ತಿಂದ ಬಿಜೆಪಿ ಕಾರ್ಯಕರ್ತ ರಾಹುಲ್ ಕಿಣಿ ವಿರುದ್ಧ ಜೆಡಿಎಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಹಲ್ಲೆ ನಡೆಸಿದ ಜೆಡಿಎಸ್ ಕಾರ್ಯಕರ್ತರು ಈಗ ಬಿಜೆಪಿ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಹಲ್ಲೆಗೊಳಗಾದ ಬಿಜೆಪಿ ಕಾರ್ಯಕರ್ತ ರಾಹುಲ್ ಕಿಣಿ ತಮ್ಮ ಫೇಸ್‍ಬುಕ್ ಪೇಜ್‍ನಲ್ಲಿ ಮಾರಕಾಸ್ತ್ರಗಳನ್ನು ಹಿಡಿದಿರುವ ತಮ್ಮ ಫೆÇೀಟೋವನ್ನು ಹಾಕಿ ಕೊಂಡಿದ್ದಾರೆ. ಇದನ್ನೇ ಆಧಾರವಾಗಿಟ್ಟುಕೊಂಡಿರುವ ಜೆಡಿಎಸ್ ಕಾರ್ಯಕರ್ತರು ಕಿಣಿ ವಿರುದ್ಧ ಫೇಸ್‍ಬುಕ್ ಪೇಜ್‍ನಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಪೊಲೀಸ್ ಮೂಲಗಳ ಪ್ರಕಾರ ಈತನ ವಿರುದ್ಧ ಯಾವುದೇ ಪ್ರಕರಣ ಇಲ್ಲ, ರೌಡಿ ಶೀಟರ್ ಪಟ್ಟಿಯಲ್ಲಿಯೂ ಈತನ ಹೆಸರಿಲ್ಲ ಎನ್ನಲಾಗಿದೆ.

ಇನ್ನು ಸಾಮಾಜಿಕ ಜಾಲತಾಣದಲ್ಲಿ ನವ ಕರ್ನಾಟಕ ಸೇನೆಯ ನವೀನ್‍ಗೌಡ ಎಂಬಾತ ಬಿಜೆಪಿ ಕಾರ್ಯಕರ್ತರೇ ನಿನ್ನೆ ಕಲ್ಲು ತೂರಾಟಕ್ಕೆ ಸುಪಾರಿ ಕೊಟ್ಟಿರುವ ಆಡಿಯೋ ವೊಂದನ್ನು ಗುರುವಾರ ಮಧ್ಯಾಹ್ನ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಆದರೆ, ಆಡಿಯೋ ಇನ್ನು ಬಿಡುಗಡೆಗೊಂಡಿಲ್ಲದಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

Translate »