ಶ್ರೀಜೇನುಕಲ್ಲು ಸಿದ್ದೇಶ್ವರಸ್ವಾಮಿ ರಾಜಗೋಪುರ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ
ಹಾಸನ

ಶ್ರೀಜೇನುಕಲ್ಲು ಸಿದ್ದೇಶ್ವರಸ್ವಾಮಿ ರಾಜಗೋಪುರ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ

February 15, 2019

ಅರಸೀಕೆರೆ: ತಾಲೂಕಿನ ಯಾದಾಪುರ ಶ್ರೀ ಜೇನುಕಲ್ಲು ಸಿದ್ದೇಶ್ವರಸ್ವಾಮಿ ಬೆಟ್ಟದ ನೂತನ ರಾಜ ಗೋಪುರ ಉದ್ಘಾಟನಾ ನಿಮಿತ್ತ ಎರಡು ದಿನಗಳ ಕಾಲ ನಡೆಯಲಿರುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಶ್ರೀ ಕ್ಷೇತ್ರ ದಲ್ಲಿ ಗುರುವಾರ ಚಾಲನೆ ನೀಡಲಾಯಿತು.

ಪ್ರಾತಃಕಾಲ ಧ್ವಜಾರೋಹಣದೊಂದಿಗೆ ಪ್ರಾರಂಭವಾದ ಧಾರ್ಮಿಕ ಕಾರ್ಯಕ್ರಮ ಗಳು ಗಣಪತಿ ಹೋಮ, ಗಂಗಾ ಪೂಜೆ, 108 ಪೂರ್ಣಕುಂಭ ಸ್ಥಾಪನೆ, ಶ್ರೀಯವರ ಗೋಪುರ ಪ್ರವೇಶ, ಪುಣ್ಯಾಹ, ನಾಂದಿ, ಪಂಚಕಳಸ, ಸಪ್ತಸಭಾ ದೇವತಾ, ಅಷ್ಠಾದಿ ಕ್ಪಾಲಕ, ನವಗ್ರಹ ಸ್ಥಾಪನೆ, ಮೃತ್ಯುಂಜಯ ಮತ್ತು ಪಾರ್ವತಿ ಕಳಸ ಸ್ಥಾಪನೆ ನಡೆಯು ವುದರೊಂದಿಗೆ ಮಧ್ಯಾಹ್ನ 3 ಗಂಟೆಗೆ ಗಣಪತಿ ಹೋಮ, ವಾಸ್ತು ಹೋಮ ಮತ್ತು ನವಗ್ರಹ ಹೋಮಗಳು ನಡೆದವು.

ಕ್ಷೇತ್ರಕ್ಕೆ ಭೇಟಿ ನೀಡಿದ ಭಕ್ತರಿಗೆ ಅನ್ನ ಸಂತರ್ಪಣೆಯೊಂದಿಗೆ ಪ್ರಸಾದ ವಿನಿ ಯೋಗವನ್ನು ಏರ್ಪಡಿಸಲಾಗಿತ್ತು. ನೂತನ ರಾಜಗೋಪುರ ಲೇಸರ್ ಲೈಟ್‍ಗಳಿಂದ ಕಂಗೊಳಿಸುತಿತ್ತು. ಮತ್ತೊಂದೆಡೆ ವಿದ್ಯುತ್ ದೀಪಾಲಂಕಾರ ಮತ್ತು ವಿವಿಧ ಬಗೆಯ ಹೂವಿನ ಅಲಂಕಾರದಿಂದ ದೇವಾ ಲಯದ ಆವರಣ ಕಂಗೊಳಿಸುತ್ತಿತ್ತು.

ನೂತನ ರಾಜಗೋಪುರವನ್ನು ಫೆ. 15 ರಂದು ಲೋಕಾರ್ಪಣೆಗೊಳಿಸಲಾಗುವುದು. ಪ್ರಾತಃಕಾಲದಲ್ಲಿ ಶ್ರೀಯವರಿಗೆ ರುದ್ರಾ ಭಿಷೇಕ, ಬಿಲ್ವಾರ್ಚನೆ, ಅಷ್ಟೋತ್ತರ, ಮಹಾ ಮಂಗಳಾರತಿ ನಡೆಸಲಾಗುವುದು. ಬೆಳಿಗ್ಗೆ 7 ಗಂಟೆಯಿಂದ ರುದ್ರಹೋಮ, ಮೃತ್ಯುಂ ಜಯ ಹೋಮ, ಮಧ್ಯಾಹ್ನ 12.05ರಿಂದ ಅಭಿಜಿನ್ ಲಗ್ನದಲ್ಲಿ ರಾಜಗೋಪುರಕ್ಕೆ ಕಳ ಸಾರೋಹಣ, ಕುಂಬಾಭಿಷೇಕ, ಪೂರ್ಣಾ ಹುತಿ ನಂತರ ಮಹಾ ಮಂಗಳಾರತಿ ನಡೆಯು ವುದರ ಮೂಲಕ ಶ್ರೀಯವ ರೊಂದಿಗೆ ಬೆಳ್ಳಿ ಪಲ್ಲಕ್ಕಿ ಉತ್ಸವ ನಡೆಯಲಿದೆ.
ಹಾರನಹಳ್ಳಿ ಗಂಗಾಧರ ಶಾಸ್ತ್ರಿ ಮತ್ತು ತಂಡದವರು ಎಲ್ಲ ಧಾರ್ಮಿಕ ಕಾರ್ಯಕ್ರಮ ಗಳ ನೇತೃತ್ವವನ್ನು ವಹಿಸಿದ್ದರು. ವೈವಾಟ್ ದಾರ್ ಚಂದ್ರಪ್ಪ ಸೇರಿದಂತೆ ಕಾರ್ಯಕಾರಿ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರು, ಶ್ರೀ ಜೇನುಕಲ್ಲು ಸಿದ್ದೇಶ್ವರಸ್ವಾಮಿ ಕ್ಷೇತ್ರಾಭಿವೃದ್ಧಿ ಮಂಡಳಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

Translate »