ಮಕ್ಕಳಿಂದ ಅರಳಿದ ಚಿತ್ರಕಲೆ
ಹಾಸನ

ಮಕ್ಕಳಿಂದ ಅರಳಿದ ಚಿತ್ರಕಲೆ

October 1, 2018

ಹಾಸನ: ಮಹಾತ್ಮ ಗಾಂಧೀಜಿ ಅವರ 150ನೇ ಜಯಂತಿ ಅಂಗವಾಗಿ ನಗರದ ಹಾಸ ನಾಂಬ ಕಲಾಕ್ಷೇತ್ರ ಆವರಣದಲ್ಲಿ ಜಿಲ್ಲಾಡಳಿತ, ವಾರ್ತಾ ಇಲಾಖೆ, ಭಾರತ್ ಸೇವಾದಳ ಹಾಗೂ ಕಸಾಪ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಗಾಂಧೀಜಿ, ಸ್ವಾತಂತ್ರ್ಯ, ದೇಶಾಭಿಮಾನ ಮೂಡುವ ಚಿತ್ರಗಳು ಶಾಲಾ ಮಕ್ಕಳ ಕುಂಚದಿಂದ ಮೂಡಿ ಬಂದವು.

ಚಿತ್ರಕಲೆ ಸ್ಪರ್ಧೆಗೆ ಹಾಸನದ ವಿವಿಧ ಶಾಲೆ ಗಳಿಂದ ಮಕ್ಕಳು ಆಗಮಿಸಿದ್ದರು. ಚಿತ್ರ ಬಿಡಿಸಲು ಒಂದೂವರೆ ಗಂಟೆ ಕಾಲಾವಕಾಶ ನೀಡಲಾಗಿತ್ತು. ಮಕ್ಕಳು ಉತ್ಸಾಹದಿಂದ ಚಿತ್ರ ಬಿಡಿಸಿ ಗಮನ ಸೆಳೆದರು. ಗಾಂಧೀಜಿ ಕುರಿತ ಚಿತ್ರಗಳು, ಸ್ವಾತಂತ್ರ್ಯ ಸಂಗ್ರಾಮದ ಘಟನಾವಳಿಗಳು, ದೇಶಾಭಿಮಾನ ಕುರಿತ ಚಿತ್ರಗಳು ಕಣ್ಮನ ಸೆಳೆದವು.

ಕಾರ್ಯಕ್ರಮವನ್ನು ಚಿತ್ರ ಬಿಡಿಸುವುದರ ಮೂಲಕ ಉದ್ಘಾಟಿಸಿ ಚಾಲನೆ ನೀಡಿದ ಕಸಾಪ ಜಿಲ್ಲಾಧ್ಯಕ್ಷ ನಾ.ಮಂಜೇಗೌಡ ಮಾತನಾಡಿ, ಪ್ರತಿ ವರ್ಷದಂತ ಈ ಬಾರಿಯೂ ಕೂಡ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಿತಾಮಹ ಮಹಾತ್ಮ ಗಾಂಧೀಜಿ ಜನ್ಮದಿನವನ್ನು ಅರ್ಥ ಪೂರ್ಣವಾಗಿ ಆಚರಿಸಲಾಗುತ್ತಿದೆ. ಅದರ ಅಂಗವಾಗಿ ದೇಶಾಭಿಮಾನ, ರಾಷ್ಟ್ರ ಧ್ವಜಕ್ಕೆ ಗೌರವ ಕೊಡುವ ಮತ್ತು ಸ್ವಾತಂತ್ರ್ಯ ಕ್ಕಾಗಿ ಹೋರಾಟ ಮಾಡಿ ಮಡಿದವರ ವಿಚಾ ರವಾಗಿ ಶಾಲಾ ಮಕ್ಕಳಿಗೆ ಚಿತ್ರಕಲಾ ಸ್ಪಧೆರ್ ಏರ್ಪಡಿಸಲಾಗಿದೆ. ಮಕ್ಕಳ ಹಂತದಲ್ಲೇ ದೇಶಾ ಭಿಮಾನ ಬೆಳೆಸಿದರೆ ಮುಂದೆ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ತಮ್ಮ ಭವಿಷ್ಯ ರೂಪಿ ಸಿಕೊಳ್ಳಲು ಸಾಧ್ಯವಾಗುತ್ತದೆ. ಜೊತೆಯಲ್ಲಿ ನಾಡಿನ ಸಂಸ್ಕøತಿ ಬಗ್ಗೆ ಮಕ್ಕಳಿಗೆ ತಿಳಿಸುವ ಮೂಲಕ ಮುಂದೆ ಜೀವನದಲ್ಲಿ ಅಳವಡಿಸಿ ಕೊಳ್ಳುವ ಮೂಲಕ ಮತ್ತೊಬ್ಬರಿಗೆ ಪ್ರೇರಕರಾ ಗಬೇಕು ಎಂದು ಕಿವಿಮಾತು ಹೇಳಿದರು.

ಸಿಟಿ ಕೋ-ಆಪರೇಟಿವ್ ಬ್ಯಾಂಕ್‍ನ ಕಮಲ್ ಕುಮಾರ್ ಮಾತನಾಡಿ, ಪ್ರತಿ ಮಕ್ಕಳಲ್ಲೂ ಅವರದೇ ಆದ ಪ್ರತಿಭೆ ಇದ್ದೇ ಇರುತ್ತದೆ. ಚಿತ್ರಕಲಾ ಪ್ರತಿಭೆ ಅನಾವರಣಕ್ಕೆ ಇದೊಂದು ಉತ್ತಮ ವೇದಿಕೆಯಾಗಿದೆ ಎಂದರು.

ಮಕ್ಕಳ ಲ್ಲಿರುವ ಪ್ರತಿಭೆಯನ್ನು ಪೋಷಕರು ಗುರುತಿಸಿ ಅದನ್ನು ಪೋಷಿಸುವ ಕೆಲಸ ಮಾಡಿದರೆ ಮುಂದೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ. ಮಕ್ಕಳ ಚಿತ್ರಕಲೆ ಇನ್ನು ಉಜ್ವಲವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.

ಮಹಾವೀರ್ ಬನ್ಸಾಲಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಜಾವಗಲ್ ಪ್ರಸನ್ನ, ಭಾರತ್ ಸೇವಾದಳ ಜಿಲ್ಲಾ ಸಂಘಟಕಿ ವಿ.ಎಸ್. ರಾಣಿ, ಕಸಾಪ ಆಲೂರು ತಾಲೂಕು ಅಧ್ಯಕ್ಷ ಶ್ರೀಕಾಂತ್, ಕಲಾವಿದ ಬಿ.ಟಿ. ಮಾನವ ಇತರರಿದ್ದರು.

Translate »