ಸ್ಕೇಟಿಂಗ್ ಕ್ರೀಡೆ ಕ್ರಿಯಾಶೀಲತೆ ಹೆಚ್ಚಿಸುತ್ತದೆ: ಪ್ರೀತಮ್ ಜೆ.ಗೌಡ
ಹಾಸನ

ಸ್ಕೇಟಿಂಗ್ ಕ್ರೀಡೆ ಕ್ರಿಯಾಶೀಲತೆ ಹೆಚ್ಚಿಸುತ್ತದೆ: ಪ್ರೀತಮ್ ಜೆ.ಗೌಡ

December 9, 2018

ಹಾಸನ: ವಿವಿಧ ಕ್ರೀಡೆಗಳಿಗಿಂತ ಸ್ಕೇಟಿಂಗ್ ಕ್ರೀಡೆಯಿಂದ ಮಕ್ಕಳ ಕ್ರಿಯಾ ಶೀಲತೆ ಮತ್ತು ಬುದ್ದಿಯನ್ನು ಚುರುಕು ಗೊಳಿಸುತ್ತದೆ ಎಂದು ಶಾಸಕ ಪ್ರೀತಮ್ ಜೆ.ಗೌಡ ಹೇಳಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಾಸನ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿ ಯೇಸನ್ ವತಿಯಿಂದ ಶನಿವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಫ್ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಕೇವಲ ಪುಸ್ತಕಗಳಿಗೆ ಸಿಮೀತವಾಗದೆ ಇಂತಹ ಕ್ರೀಡೆಗಳಲೂ ಪಾಲ್ಗೊಳ್ಳಬೇಕು. ಅವರಿಗೆ ಶಿಕ್ಷಕರು ಹಾಗೂ ಪೋಷಕರು ಪ್ರೋತ್ಸಾಹ ನೀಡು ವುದರ ಮೂಲಕ ಅವರ ಜ್ಞಾನರ್ಜಾನೆ ಯನ್ನು ಹೆಚ್ಚಿಸಬಹುದು ಎಂದು ಹೇಳಿದರು.
ಸ್ಕೇಟಿಂಗ್‍ನಂತಹ ಕ್ರೀಡೆಯು ಅತ್ಯಂತ ಕ್ರಿಯಾಶೀಲತೆ ಬರುತ್ತದೆ. ಪ್ರತಿ ಮಕ್ಕಳಲ್ಲೂ ಅವರದೆ ಆದ ಪ್ರತಿಭೆ ಇದ್ದು, ಅದನ್ನು ಬೆಳೆಸುವ ನಿಟ್ಟಿನಲ್ಲಿ ಪೋಷಕರು ಮುಂದಾ ಗಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್‍ಗೌಡ ಮಾತನಾಡಿ, ದಿನದ ಕೆಲ ಸಮಯವನ್ನು ಆಟೋಟಗಳಿಗೆ ಅವಕಾಶ ಕೊಡಬೇಕು. ಮಕ್ಕಳಿಂದಲೇ ಉತ್ತಮ ವಾತಾವರಣ ನಿರ್ಮಾಣ ಮಾಡಿದರೇ ಮುಂದೆ ಸಮಾಜದಲ್ಲಿ ಒಳ್ಳೆಯ ಪ್ರಜೆ ಯಾಗಿ ತನ್ನ ಭವಿಷ್ಯವನ್ನು ರೂಪಿಸಿ ಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಅಮೋಘ ವಾಹಿನಿ ಮುಖ್ಯಸ್ಥ ಕೆಪಿ ಎಸ್ ಪ್ರಮೋದ್ ಮಾತನಾಡಿ, ಪ್ರತಿಭೆಗಳು ಮಕ್ಕಳಲ್ಲಿ ಇದ್ದೆ ಇರುತ್ತದೆ. ಅದಕ್ಕೆ ಸೂಕ್ತ ತರಬೇತಿ ನೀಡಿದರೇ ಮುಂದೆ ಜಿಲ್ಲೆಯ, ರಾಜ್ಯದ ಹಾಗೂ ದೇಶಕ್ಕೆ ಕೀರ್ತಿ ತರಲು ಸಾಧ್ಯ ಎಂದರು.

ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿ ಯೇಷನ್ ಹೆಚ್.ಪಿ.ಮೋಹನ್ ಮಾತ ನಾಡಿ, ಇಂತಹ ಕ್ರೀಡೆಯನ್ನು ಉಳಿಸಿ ಬೆಳೆಸಲು ಮಕ್ಕಳಿಗೆ ಪೋಷಕರು ಪ್ರೋತ್ಸ್ಸಾ ಹಿಸಬೇಕು. ಈ ಆಟೋಟಕ್ಕಾಗಿ ಉತ್ತಮ ಜಾಗವನ್ನು ಕಲ್ಪಿಸಲಾಗಿದೆ. ಸ್ಪರ್ಧೆಯು ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.ಈ ಸಂದರ್ಭದಲ್ಲಿ ಪರಿಸರವಾದಿ ಕಿಶೋರ್‍ಕುಮಾರ್, ಮುಖಂಡರಾದ ಶ್ರೀವಿದ್ಯಾ, ಬಡಾವಣೆ ಪೊಲೀಸ್ ಠಾಣೆ ಸಬ್‍ಇನ್‍ಸ್ಪೆÉಕ್ಟರ್ ಸುರೇಶ್‍ಕುಮಾರ್, ಪ್ರಕಾಶ್ ಇತರರಿದ್ದರು.

Translate »