ಮಡಿಕೇರಿ: ಈಜಲು ನೀರಿಗಿ ಳಿದ ವಿದ್ಯಾರ್ಥಿಗಳಿಬ್ಬರು ಮುಳುಗಿ ಮೃತ ಪಟ್ಟ ಘಟನೆ ನಗರದ ಹೊರ ವಲಯದ ಕೂಟು ಹೊಳೆಯಲ್ಲಿ ನಡೆದಿದೆ. ನಗರದ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಪ್ರಥಮ ವರ್ಷದ ಮೆಷಿನಿಸ್ಟ್ ವಿಭಾಗದಲ್ಲಿ ತರಬೇತಿ ಪಡೆಯುತ್ತಿದ್ದ ರಕ್ಷಿತ್ (20) ಮತ್ತು ಯಶವಂತ್(20) ಎಂಬುವರು ಮೃತಪಟ್ಟವರು.
ವಿವರ: ಮೂಲತಃ ಮದೆನಾಡು ನಿವಾಸಿ ಪೊನ್ನಪ್ಪ-ಪುಷ್ಪ ದಂಪತಿಯ ಪುತ್ರ ಯಶ ವಂತ್, ಉಡೋತ್‍ಮೊಟ್ಟೆ ನಿವಾಸಿ ಮುತ್ತಣ್ಣ-ರುಕ್ಮಿಣಿ ದಂಪತಿಯ ಪುತ್ರ ರಕ್ಷಿತ್ ಆತ್ಮೀಯ ಸ್ನೇಹಿತರಾಗಿದ್ದು, ನಗರದ ಕೈಗಾ ರಿಕಾ ತರಬೇತಿ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು.
ರಕ್ಷಿತ್ ಮತ್ತು ಯಶವಂತ್ ಡಿ.7ರಂದು ದ್ವಿಚಕ್ರ ವಾಹನ (ಕೆಎ.12. ಕ್ಯೂ.9756) ರಲ್ಲಿ ಇತರ 4 ಮಂದಿ ಸ್ನೇಹಿತರೊಂದಿಗೆ ಕೂಟುಹೊಳೆ ಹಿನ್ನೀರಿಗೆ ತೆರಳಿದ್ದಾರೆ. ತರ ಗತಿಗೆ ಹಾಜರಾಗದೇ ಕೂಟಹೊಳೆ ಹಿನ್ನೀ ರಿಗೆ ತೆರಳಿದ 6 ಮಂದಿ ವಿದ್ಯಾರ್ಥಿಗಳ ತಂಡ ಸಂಜೆಯವರೆಗೂ ನೀರಿನಲ್ಲಿ ಆಟ ವಾಡಿದೆ. ಸಂಜೆಯ ವೇಳೆಗೆ ರಕ್ಷಿತ್ ಮತ್ತು ಯಶವಂತ್ ಕೂಡ ಈಜಲು ನೀರಿಗೆ ಇಳಿದಾಗ ಆಳದ ನೀರಿನಲ್ಲಿ ಮುಳುಗಿ ಜೀವ ಬಿಟ್ಟಿದ್ದಾರೆ.
ಈ ಸಂದರ್ಭ ಜೂತೆಯಲ್ಲಿದ್ದ ಇತರ 4 ಮಂದಿ ಸ್ನೇಹಿತರು ಭಯಭೀತರಾಗಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಸಂಜೆಯಾದರೂ ಮಕ್ಕಳು ಮನೆಗೆ ಬರದಿರುವುದನ್ನು ಕಂಡು ಪೋಷಕರು ಮಕ್ಕಳ ಮೊಬೈಲ್‍ಗೆ ಕರೆ ಮಾಡಿದ್ದು, ಮೊಬೈಲ್ ರಿಂಗಣಿಸಿದರೂ ಕೂಡ ಯಾರು ಕರೆ ಸ್ವೀಕರಿಸದ್ದಿದ್ದರಿಂದ ಮಡಿಕೇರಿಯಲ್ಲಿರುವ ತಮ್ಮ ಬಂಧುಗಳಿಗೆ ವಿಚಾರ ತಿಳಿಸಿದ್ದಾರೆ. ರಾತ್ರಿಯಿಡಿ ಹುಡುಕಿ ದರೂ ಮಕ್ಕಳು ಪತ್ತೆಯೇ ಇಲ್ಲದರಿಂದ ಇಂದು ಬೆಳಿಗ್ಗೆ ಐಟಿಐಗೆ ತೆರಳಿ ಮಕ್ಕಳ ಬಗ್ಗೆ ಪೋಷಕರು ವಿಚಾರಿಸಿದ್ದಾರೆ.
ಈ ಸಂದರ್ಭ ವಿದ್ಯಾರ್ಥಿಗಳು ಡಿ.7 ರಂದು ತರಗತಿಗೆ ಗೈರಾಗಿರುವುದು ತಿಳಿದು ಬಂದಿದ್ದಲ್ಲದೆ, 6 ಮಂದಿ ವಿದ್ಯಾರ್ಥಿಗಳು ಕೂಟುಹೊಳೆಗೆ ತೆರಳಿರುವ ಮಾಹಿತಿ ಲಭಿ ಸಿದೆ. ಬಳಿಕ ಕೂಟುಹೊಳೆಗೆ ತೆರಳಿದಾಗ ಬೈಕ್ ಮತ್ತು ಹಿನ್ನೀರಿನ ಮಣ್ಣಿನ ದಿಬ್ಬದಲ್ಲಿ ಐಟಿಐನ ಸಮವಸ್ತ್ರ, ಶೂಗಳು, ಮೊಬೈಲ್ ಕೂಡ ಪ್ತತೆಯಾಗಿವೆ. ಈ ಸಂದರ್ಭ ವಿದ್ಯಾ ರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿ ರುವ ಶಂಕೆ ವ್ಯಕ್ತಪಡಿಸಿದ ಸ್ಥಳೀಯರು, ಮಡಿಕೇರಿ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕಾಗಮಿಸಿದ ಸಿಬ್ಬಂದಿ, ಹಿನ್ನೀರಿನಲ್ಲಿ ಮೃತದೇಹಕ್ಕೆ ಶೋಧ ನಡೆಸಿದರು. ಬಳಿಕ ಮುಳುಗು ತಜ್ಞ, ಗೃಹ ರಕ್ಷಕ ದಳದ ಸಿಬ್ಬಂದಿ ಮುತ್ತಪ್ಪ ಅವರನ್ನು ಕರೆಸಿ ನೀರಿನಲ್ಲಿ ಮುಳುಗಿದ್ದ ಮೃತದೇಹಗಳನ್ನು ಮೇಲೆತ್ತ ಲಾಯಿತು. ಮಡಿಕೇರಿ ಗ್ರಾಮಾಂತರ ಪೊಲೀ ಸರು ಮೃತದೇಹಗಳನ್ನು ಮಹಜರು ನಡೆಸಿ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಿದರು.
ಮೃತದೇಹಗಳನ್ನು ನೀರಿನಿಂದ ಮೇಲೆ ತ್ತಿದ ಸಂದರ್ಭ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಬಳಿಕ ಪೋಷಕರಿಗೆ ಹಸ್ತಾಂತರಿಸಲಾಯಿತು. ಘಟನೆ ಕುರಿತು ಮಡಿಕೇರಿ ಗ್ರಾಮಾಂತರ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.