ವಿಜೃಂಭಣೆಯ ರಾಮೇಶ್ವರಸ್ವಾಮಿ, ಸುಬ್ರಹ್ಮಣ್ಯಸ್ವಾಮಿ ಲಕ್ಷ ದೀಪೋತ್ಸವ
ಹಾಸನ

ವಿಜೃಂಭಣೆಯ ರಾಮೇಶ್ವರಸ್ವಾಮಿ, ಸುಬ್ರಹ್ಮಣ್ಯಸ್ವಾಮಿ ಲಕ್ಷ ದೀಪೋತ್ಸವ

December 9, 2018

ರಾಮನಾಥಪುರ: ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಪಡೆದಿರುವ ಇಲ್ಲಿಯ ಶ್ರೀ ಚತುರ್ಯುಗ ಮೂರ್ತಿ ರಾಮೇಶ್ವರ ಸ್ವಾಮಿ, ಸುಬ್ರಹ್ಮಣ್ಯಸ್ವಾಮಿ ದೇವಾಲಯ ಗಳಲ್ಲಿ ಶುಕ್ರವಾರ ರಾತ್ರಿ ಲಕ್ಷ ದೀಪೋತ್ಸವ ಸಡಗರ ಸಂಭ್ರಮದಿಂದ ನಡೆಯಿತು.

ರಾಮನಾಥಪುರ ಕಾವೇರಿ ನದಿ ದಂಡೆ ಯಲ್ಲಿರುವ ಶ್ರೀ ರಾಮೇಶ್ವರಸ್ವಾಮಿ ದೇವ ಸ್ಥಾನದಲ್ಲಿ ಬ್ರಾಹ್ಮೀ ಮುಹೂರ್ತದಲ್ಲಿ ದೇವರಿಗೆ ರುದ್ರಾಭಿಷೇಕ, ಕುಂಕುಮಾ ರ್ಚನೆ, ವಿಶೇಷ ಹೂವಿನ ಅಲಂಕಾರ, ವಿದ್ಯುತ್ ದೀಪಾಲಂಕಾರ ಮಾಡಿ ಮೂಲ ದೇವರ ಮೂರ್ತಿಗೆ ವಿಶೇಷ ಪೂಜಾ ಕೈಂಕರ್ಯ ಸಲ್ಲಿಸಲಾಯಿತು.

ದೇವಾಲಯದ ಒಳ ಪ್ರಾಂಣಗದ ಸುತ್ತಲೂ ಸಾವಿರಾರು ಭಕ್ತರು, ಮಕ್ಕಳು, ಮಹಿಳೆಯರು ಹಣತೆ ಬೆಳಗಿಸಿ, ಭಕ್ತಿ ಸಮರ್ಪಿಸಿದರು. ಮಹಾ ಮಂಗಳಾರತಿ ಮಾಡಿ ಬಂದಿದ್ದ ಸಾವಿರಾರು ಭಕ್ತದಿಗಳಿಗೆ ಅನ್ನ ಸಂತರ್ಪಣೆ ಶ್ರೀರಾಮೇಶ್ವರಸ್ವಾಮಿ ದೇವಸ್ಥಾನದ ಅಭಿವೃದ್ಧಿ ಸಮಿತಿಯಿಂದ ವ್ಯವಸ್ಥೆ ಮಾಡಲಾಗಿತು.

ಗ್ರಾಪಂ ಸದಸ್ಯರಾದ ದಿವಾಕರ್, ಮಂಜುಳ ಮಹದೇವ್, ದೇವಸ್ಥಾನದ ಅಭಿವೃದ್ಧಿ ಸಮಿತಿ ಸದಸ್ಯರಾದ ರಘು, ಕುಮಾರ ಸ್ವಾಮಿ ರಾವ್, ಅನಂತ್‍ರಾಮ್, ಸಿದ್ದರಾಜು, ಗೋಪಾಲ್, ಮುಂಖಡರಾದ ರಾ.ಸು. ನಾಗರಾಜು, ಉಮೇಶ್, ದೊರೆಸ್ವಾಮಿ, ಶ್ರೀ ನಾಥ್, ಕಾಳಬೋಯಿ, ಪಿ.ಎನ್.ಟಿ. ಶಿವಪ್ಪ, ಗಂಗೂರು ಬೋರೇ ಗೌಡ, ಹರಳಹಳ್ಳಿ ಮಂಜುನಾಥ್, ಪುರು ಷೋತ್ತಮ, ಪುಟ್ಟ ಸ್ವಾಮಿ ಇತರರಿದ್ದರು. ಮುಖ್ಯ ಅರ್ಚಕ ಶ್ರೀನಿವಾಸಯ್ಯ, ರವೀಶ್ ಅವರು ಪೂಜಾ ಕೈಂಕರ್ಯ ನಡೆಸಿಕೊಟ್ಟರು.

Translate »