ಮೂಲಭೂತ ಸೌಲಭ್ಯ ವಂಚಿತ ಹನೂರು ಬಸ್ ನಿಲ್ದಾಣ ರಾಗಿಪೈರು ನಾಟಿ ಮಾಡಿ ಪ್ರತಿಭಟನೆ
ಚಾಮರಾಜನಗರ

ಮೂಲಭೂತ ಸೌಲಭ್ಯ ವಂಚಿತ ಹನೂರು ಬಸ್ ನಿಲ್ದಾಣ ರಾಗಿಪೈರು ನಾಟಿ ಮಾಡಿ ಪ್ರತಿಭಟನೆ

October 1, 2018

ಹನೂರು: ಕಾಮ ಗಾರಿಗಳು ಮುಗಿವುವ ಮುನ್ನವೇ ತರಾ ತುರಿಯಲ್ಲಿ ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಲೋಕಾ ರ್ಪಣೆಗೊಂಡ ಪಟ್ಟಣದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ನಿಲ್ದಾಣದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಯಿಂದಾಗಿ ಪ್ರಯಾಣಿಕರು ಪರದಾಡುವಂತಾ ಗಿದ್ದು ಮಳೆ ಬಂದರೆ ನಿಲ್ದಾಣ ಕೆಸರು ಮಾಯಾವಾಗಿ ತೊಂದರೆ ಅನುಭವಿಸವಂತಾ ಗಿದೆ ಎಂದು ಕರವೇ ಸ್ವಾಭಿಮಾನಿ ಬಣದ ಸಂಘಟನೆ ವತಿಯಿಂದ ಕೆಸರಿನಲ್ಲಿ ರಾಗಿ ಪೈರು ನಾಟಿ ಮಾಡುವ ಮೂಲಕ ವಿನೂತನ ವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.

ಕರವೇ ಸ್ವಾಭಿಮಾನಿ ಬಣದ ಅಧ್ಯಕ್ಷ ವಿನೋದ್ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ, ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ವತಿಯಿಂದ 2.75 ಕೋಟಿ ವೆಚ್ಚ ದಲ್ಲಿ ನಿರ್ಮಾಣ ಮಾಡಿದ್ದ ಬಸ್‍ನಿಲ್ದಾಣ ದಲ್ಲಿ ನೆಲಹಾಸು ಸೇರಿದಂತೆ ಮೂಲ ಭೂತ ಸೌಲಭ್ಯವನ್ನು ಕಲ್ಪಿಸುವ ಮುನ್ನವೇ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ತರಾತುರಿಯಲ್ಲಿ ಜನವರಿ 10 ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವರುಗಳು ಆಗಮಿಸಿ ಲೋಕಾರ್ಪಣೆ ಮಾಡಿರುವುದು ಬಿಟ್ಟರೆ ಮೂಲಭೂತ ಸೌಲಭ್ಯಗಳು ಮರೀಚಿಕೆಯಾಗಿದೆ ಎಂದು ಆರೋಪಿಸಿದರು.

ಬಸ್ ನಿಲ್ದಾಣದ ಗುಂಡಿಗಳಲ್ಲಿ ರಾಗಿ ಪೈರ್ ನಾಟಿ: ಕರವೇ ಸಂಘಟನೆ ವತಿಯಿಂದ ಪಟ್ಟಣ ಸಾರಿಗೆ ಬಸ್ ನಿಲ್ದಾಣದಲ್ಲಿ ಮೂಲ ಭೂತ ಸೌಲಭ್ಯ ಕಲ್ಪಿಸುವಂತೆ 15-2-2018 ರಂದು ಕರವೇ ಸಂಘಟನೆಯಿಂದ ಪ್ರತಿಭಟನೆ ಹಮ್ಮಿಕೊಂಡು ಬಸ್ ನಿಲ್ದಾ ಣದ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು,  ಇಂದಿನ ವಿಭಾಗೀಯ ಸಂಚಾಲನ ಅಧಿ ಕಾರಿ ಮಂಜುನಾಥ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮೂಲಭೂತ ಸೌಲಭ್ಯಗಳನ್ನು ಕೂಡಲೆ ಪರಿಹಾರಿಸುವುದಾಗಿ ಭರವಸೆ ನೀಡಿದ್ದರು, ಆದರೂ ಸಹ ಕಳೆದ 7 ತಿಂಗಳಿ ನಿಂದಲ್ಲೂ ಸಾರಿಗೆ ಅಧಕಾರಿಗಳು ಬಸ್ ನಿಲ್ದಾಣವನ್ನು ಮರೆತಿದ್ದಾರೆ, ಆದುದ ರಿಂದ ಇಂದು ರಾಗಿ ಪೈರನ್ನು  ಬಸ್‍ನಿಲ್ದಾ ಣದ ಕೆಸರಿನಲ್ಲಿ ನಾಟಿ ಮಾಡುವ ವಿನೂ ತನವಾಗಿ ಪ್ರತಿಭಟನೆಯನ್ನು ಹಮ್ಮಿಕೊಳ್ಳ ಲಾಗಿದೆ ಎಂದು ತಿಳಿಸಿದರು. ಇದೇ ಸಂದ ರ್ಭದಲ್ಲಿ  ಕರವೇ ಸ್ವಾಭಿಮಾನಿ ಬಣದ ಕಾರ್ಯದರ್ಶಿ ಗಿರೀಶ್, ಸಂಚಾಲಕ  ನಾಗೇಂದ್ರ, ಶೀನಾ, ಆಟೋ ಬಸವರಾಜು,  ನಾಗರೀಕರಾದ ಶಿವು, ಮಹೇಶ್, ಇಬ್ರಾನ್, ಶಾಮ್‍ವಿಲ್ ಇನ್ನಿತರರು ಇದ್ದರು.

 

 

Translate »