ಮೆಟ್ಟಿಲವಾಡಿ ಗ್ರಾಮದ ತೋಟದಲ್ಲಿ ಹುಲಿ ಪ್ರತ್ಯಕ್ಷ
ಚಾಮರಾಜನಗರ

ಮೆಟ್ಟಿಲವಾಡಿ ಗ್ರಾಮದ ತೋಟದಲ್ಲಿ ಹುಲಿ ಪ್ರತ್ಯಕ್ಷ

October 1, 2018

ಚಾಮರಾಜನಗರ: ತಮಿಳುನಾಡಿನ ತಾಳವಾಡಿ ತಾಲೂಕಿಗೆ ಸೇರಿದ ಗಡಿ ಗ್ರಾಮವಾದ ಮೆಟ್ಟಿಲವಾಡಿ ಗ್ರಾಮದ ತೋಟದಲ್ಲಿ ಹುಲಿಯೊಂದು ಕಾಣಿಸಿಕೊಂಡಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.

ಮೆಟ್ಟಿಲವಾಡಿ ಹಾಗೂ ಬಿಸಲವಾಡಿ ಗ್ರಾಮಗಳ ನಡುವೆ ಇರುವ ಮೆಟ್ಟಿಲವಾಡಿ ಗ್ರಾಮದ ರೈತ ನಂಜುಂಡಸ್ವಾಮಿ ಎಂಬುವರ ತೋಟದಲ್ಲಿ ಶನಿವಾರ ಸಂಜೆ ಹುಲಿ ಪ್ರತ್ಯಕ್ಷವಾಗಿದೆ. ಇದನ್ನು ನೋಡಿದ ರೈತರು ಭಯಭೀತರಾಗಿದ್ದಾರೆ.

ತೋಟದಲ್ಲಿ ಹುಲಿ ಕಾಣಿಸಿಕೊಂಡಿರುವುದನ್ನು ರೈತರು ತಮಿಳುನಾಡಿನ ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರು. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಹುಲಿಯನ್ನು ಕಾಡಿಗೆ ಅಟ್ಟಲು ಎಲ್ಲಾ ರೀತಿಯ ಪ್ರಯತ್ನ ನಡೆಸಿದರು. ನಂತರ ರಾತ್ರಿ ಹುಲಿ ಪಕ್ಕದಲ್ಲಿಯೇ ಇದ್ದ ಅರಣ್ಯ ಪ್ರದೇಶಕ್ಕೆ ತೆರಳಿದೆ ಎಂದು ಗ್ರಾಮಸ್ಥರು ತಿಳಿಸಿದರು. ತೋಟದಲ್ಲಿ ಹುಲಿರಾಯ ದಿಢೀರ್ ಪ್ರತ್ಯಕ್ಷಗೊಂಡಿದ್ದರಿಂದ ಮೆಟ್ಟಿಲವಾಡಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಯಭೀತರಾಗಿದ್ದಾರೆ.

Translate »