ಒಂದೇ ನಂಬರಿನ ಎರಡು ಲಾರಿ ವಶ
ಚಾಮರಾಜನಗರ

ಒಂದೇ ನಂಬರಿನ ಎರಡು ಲಾರಿ ವಶ

October 1, 2018

ಚಾಮರಾಜನಗರ: ಒಂದೇ ನಂಬರಿನ ಎರಡು ಲಾರಿಗಳನ್ನು ಪಟ್ಟಣ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದು, ಇಬ್ಬರನ್ನು ಬಂಧಿಸಿದ್ದಾರೆ.

ಜಬೀವುಲ್ಲಾ ಹಾಗೂ ಜಾವೀದ್ ಪಾಷ ಬಂಧಿತ ಆರೋಪಿಗಳು. ಇಂದು ಪಟ್ಟಣದ ಗಾಳಿಪುರ ಬಡಾವಣೆಯಲ್ಲಿ ಒಂದೇ ನಂಬರಿನ (ಕೆಎ.07 4799) ಎರಡು ಲಾರಿಗಳು ನಿಂತಿದ್ದವು. ಈ ಬಗ್ಗೆ ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ವೃತ್ತ ನಿರೀಕ್ಷಕ ಮಹದೇವಯ್ಯ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ನಂತರ ಲಾರಿಗಳನ್ನು ವಶಕ್ಕೆ ಪಡೆದು ಠಾಣೆ ಮುಂದೆ ನಿಲ್ಲಿಸಿ ದ್ದಾರೆ. ಅಲ್ಲದೆ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿ ಕೊಂಡಿರುವ ಪಟ್ಟಣ ಠಾಣೆ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Translate »