ಚಾಮರಾಜನಗರ

ಹಳೇ ವೈಷಮ್ಯ: ಗುಂಪು ಘರ್ಷಣೆ

September 25, 2018

ಯಳಂದೂರು: ಹಳೇ ದ್ವೇಷದ ಹಿನ್ನೆಲೆ ಯಿಂದ ಗಣಪತಿ ವಿಸರ್ಜನೆ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಇಬ್ಬರಿಗೆ ಗಂಭೀರ ಗಾಯವಾಗಿರುವ ಘಟನೆ ತಾಲೂಕಿನ ಹೊನ್ನೂರು ಸಮೀಪದ ಬೀಚಹಳ್ಳಿ ಗ್ರಾಮದಲ್ಲಿ ಭಾನು ವಾರ ರಾತ್ರಿ ನಡೆದಿದೆ.

ಬಿಎಸ್‍ಎನ್‍ಎಲ್ ಸಲಹಾ ಮಂಡಳಿ ಮಾಜಿ ಸದಸ್ಯ ಮೋಹನ್, ಹೊನ್ನೂರು ಗ್ರಾಪಂ ಮಾಜಿ ಅಧ್ಯಕ್ಷ ಸಿದ್ದಪ್ಪಸ್ವಾಮಿ ಗಾಯಗೊಂಡಿದ್ದು, ಯಳಂದೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗಲಾಟೆಗೆ ಕಾರಣವೇನು?: ಬಿಎಸ್‍ಎನ್ ಎಲ್ ಸಲಹಾ ಮಂಡಳಿ ಮಾಜಿ ಸದಸ್ಯ ಮೋಹನ್ ಅವರ ಮನೆ ಹಿಂಭಾಗ ಡಿಆರ್ ಪೊಲೀಸ್ ಕಾನ್‍ಸ್ಟೇಬಲ್ ಮಹೇಶ್ ಎಂಬು ವರ ತಂದೆ ವೆಂಕಟಶೆಟ್ಟಿ ಎಂಬುವರು ರೇಷ್ಮೇ ಬಿಚ್ಚು ನೂಲು ತೆಗೆಸುತ್ತಿದ್ದರು. ಇದರಿಂದ ರೇಷ್ಮೆ ಹುಳುವಿನ ವಾಸನೆ ಮತ್ತು ಯಂತ್ರಗಳ ಶಬ್ದದಿಂದ ತೊಂದರೆಯಾಗು ತ್ತದೆ ಎಂದು ಮೋಹನ್ ರೇಷ್ಮೆ ಇಲಾಖೆ ಸೇರಿದಂತೆ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆಗೆ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ಗೌರಿ-ಗಣೇಶ ಹಬ್ಬದಂದು ರಾತ್ರಿ ಗ್ರಾಮದಲ್ಲಿ ಮೋಹನ್ ಕುಟುಂಬ ಮತ್ತು ಮಹೇಶ್ ಬೆಂಬಲಿಗರ ನಡುವೆ ಜಗಳವಾಯಿತು. ಈ ಸಂಬಂಧ ಯಳಂದೂರು ಪೊಲೀಸ್ ಠಾಣೆಗೆ ದೂರು ನೀಡಲಾಯಿತು. ಈ ವೇಳೆ ಠಾಣೆ ಮುಂಭಾಗವು ಎರಡು ಗುಂಪುಗಳ ನಡುವೆ ಗಲಾಟೆ ನಡೆಸಿದರಿಂದ ಲಘು ಲಾಠಿ ಪ್ರಹಾರ ಕೂಡ ನಡೆಸಲಾಯಿತು.

ನಂತರ ಎರಡು ಗುಂಪುಗಳು ಸ್ಥಳೀಯ ನ್ಯಾಯ ಪಂಚಾಯಿತಿಯಲ್ಲಿ ರಾಜಿ ಸಂಧಾನ ಮಾಡಿಕೂಂಡಿದ್ದರು. ಆದರೆ, ಭಾನುವಾರ ರಾತ್ರಿ ಬೀಚಹಳ್ಳಿ ಗ್ರಾಮದಲ್ಲಿ ಗಣಪತಿ ವಿಸರ್ಜನೆ ಮಾಡುತ್ತಿದ್ದ ಸಂದರ್ಭದಲ್ಲಿ ಮೋಹನ್ ಮತ್ತು ಮಹೇಶ್ ಹುಡುಗರ ನಡುವೆ ಘರ್ಷಣೆ ನಡೆದಿದೆ. ಈ ವೇಳೆ ಮನೆಗೆ ಬಂದ ಮೋಹನ್ ಅವರ ಮೇಲೆ ಪೊಲೀಸ್ ಕಾನ್‍ಸ್ಟೇಬಲ್ ಮಹೇಶ್ ಮತ್ತು ಷಣ್ಮುಖ ಎಂಬುವವರು ಮಾರಣಾಂತಿಕ ಹಲ್ಲೆ ನಡೆಸಿದರು. ಇದನ್ನು ಬಿಡಿಸಲು ಬಂದ ಮಾಜಿ ಗ್ರಾಪಂ ಅಧ್ಯಕ್ಷ ಸಿದ್ದಪ್ಪಸ್ವಾಮಿ ಅವ ರಿಗೂ ಮಾರಣಾಂತಿಕ ಹಲ್ಲೆ ನಡೆಸಿದರು.

ಹಲ್ಲೆ ನಡೆಸಿದ ಬಳಿಕ, ಮೋಹನ್ ಅವರ ಮನೆಗೆ ನುಗ್ಗಿ ಬೀರುವಿನಲ್ಲಿದ ನಗದು 41 ಸಾವಿರ ಹಾಗೂ 150 ಗ್ರಾಂ.ನಷ್ಟು ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಅಲ್ಲದೆ ಮನೆಯ ಹಿತ್ತಲಿನಲ್ಲಿ ತುಂಬಿದ ತೆಂಗಿನಕಾಯಿ ಸೇರಿದಂತೆ ಕಬ್ಬಿಣದ ಸಾಮಗ್ರಿಗಳನ್ನು ದೋಚಿದ್ದಾರೆ ಎಂದು ಮೋಹನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Translate »