ಇಂದು ವಿಶ್ವ ಔಷಧೋತ್ಪಾದಕರ ದಿನ ಆಚರಣೆ
ಮೈಸೂರು

ಇಂದು ವಿಶ್ವ ಔಷಧೋತ್ಪಾದಕರ ದಿನ ಆಚರಣೆ

September 25, 2018

ಮೈಸೂರು: ಭಾರತೀಯ ಔಷಧೀಯ ಸಂಘ (ಐಪಿಎ) ಮೈಸೂರು ಘಟಕ ಹಾಗೂ ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಜಂಟಿ ಆಶ್ರಯದಲ್ಲಿ ನಾಳೆ(ಸೆ.25)ರಂದು `ವಿಶ್ವ ಔಷಧೋತ್ಪಾದಕರ ದಿನದ ಆಚರಣೆ ಆಯೋಜಿಸಲಾಗಿದೆ ಎಂದು ಐಪಿಎ ಮೈಸೂರು ಘಟಕದ ಅಧ್ಯಕ್ಷ ಹಾಗೂ ಜೆಎಸ್‍ಎಸ್ ಫಾರ್ಮಸಿ ಕಾಲೇಜಿನ ಪ್ರಾಂಶು ಪಾಲ ಡಾ.ಟಿ.ಎಂ.ಪ್ರಮೋದ್ ಕುಮಾರ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನ ಬನ್ನಿಮಂಟಪದ ಶಿವರಾತ್ರೀಶ್ವರನಗರದಲ್ಲಿರುವ ಜೆಎಸ್‍ಎಸ್ ಫಾರ್ಮಸಿ ಕಾಲೇಜಿನ ಶ್ರೀ ರಾಜೇಂದ್ರ ಸಭಾಂಗಣದಲ್ಲಿ ಹಮ್ಮಿ ಕೊಂಡಿರುವ ವಿಶ್ವ ಔಷಧೋತ್ಪಾದಕರ ದಿನಾಚರಣೆಯನ್ನು ಅಂದು ಬೆಳಿಗ್ಗೆ 11ಕ್ಕೆ ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷ ಡಾ.ಬಿ.ಸುರೇಶ್ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.

ಅತಿಥಿಗಳಾಗಿ ಜೆಎಸ್‍ಎಸ್ ಆಸ್ಪತ್ರೆ ನಿರ್ದೇಶಕ ಡಾ.ಎಂ. ದಯಾನಂದ, ಫಾರೂೀಕಿಯಾ ಫಾರ್ಮಸಿ ಕಾಲೇಜಿನ ಪ್ರಾಂಶು ಪಾಲ ಹಾಗೂ ಐಪಿಎ ಮೈಸೂರು ಘಟಕದ ಉಪಾಧ್ಯಕ್ಷ ಡಾ. ಮೊಹಮ್ಮದ್ ಸಲಾವುದ್ದೀನ್, ಶಾರದಾವಿಲಾಸ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ.ಹನುಮಂತಾಚಾರ್ ಪಾಲ್ಗೊ ಳ್ಳಲಿದ್ದಾರೆ. ಇದೇ ವೇಳೆ ಫಾರ್ಮಸಿ ಅಂತರ ಕಾಲೇಜುಗಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಗುವುದು. ವೈದ್ಯಕೀಯ ಕ್ಷೇತ್ರದಲ್ಲಿ ಅಗತ್ಯವಾಗಿ ಬೇಕಾದ ಔಷಧಗಳನ್ನು ಒದಗಿಸುವ ಮೂಲಕ ಫಾರ್ಮಸಿಸ್ಟ್ ಮಹತ್ವದ ಪಾತ್ರ ವಹಿಸಲಿದ್ದಾರೆ ಎಂದು ತಿಳಿಸಿದರು. ಐಪಿಎ ಮೈಸೂರು ಘಟಕದ ಕಾರ್ಯದರ್ಶಿ ಡಾ.ಆರ್.ಎಸ್.ಚಂದನ್, ಉಪಾಧ್ಯಕ್ಷ ಡಾ.ಮೊಹಮ್ಮದ್ ಸಲಾ ವುದ್ದೀನ್ ಮತ್ತಿತರರು ಗೋಷ್ಠಿಯಲ್ಲಿದ್ದರು.

Translate »